ನ್ಯೂಸ್ ನಾಟೌಟ್ : ಸುಳ್ಯದ ನೆಹರು ಮೆಮೋರಿಯಲ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪ್ರಥಮ ಪಿಯು ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪ್ರಥಮ ಪಿಯು ವಿಭಾಗದ ಸುಗುಣ ಮತ್ತು ಬಳಗದವರು ಪ್ರಾರ್ಥಿಸಿ, ಶ್ರೇಯ ಎಂ ಜಿ ಸ್ವಾಗತಿಸಿದರು. ದ್ವಿತೀಯ ಪಿಯು ವಿದ್ಯಾರ್ಥಿಗಳು ದೀಪ ಪ್ರಜ್ವಲಿಸಿದರು. ಪ್ರಾಚಾರ್ಯರಾದ ಮಿಥಾಲಿ ಪಿ ರೈ, ವಿದ್ಯಾರ್ಥಿ ಕ್ಷೇಮಾಧಿಕಾರಿ ವಿನಯ್ ನಿಡ್ಯಮಲೆ, ಕನ್ನಡ ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ. ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಶುಭ ವಿದಾಯದ ನುಡಿಗಳನ್ನಾಡಿದರು.
ಪ್ರಥಮ ಪಿಯು ವಿದ್ಯಾರ್ಥಿನಿ ಶರಣ್ಯ ಸ್ವರಚಿತ ಗೀತೆಗೆ ಧ್ವನಿ ಸಂಯೋಜಿಸಿ ಹಾಡಿದರು. ವಿದ್ಯಾರ್ಥಿಗಳಾದ ಆಯಿಷತ್ ಅಸ್ನ, ಕೃತ ಸ್ವರ ದೀಪ್ತ, ಸುಮಂತ್, ಚಿಂತನ್, ಸುಶಾಂತ್, ದೀಕ್ಷಿತ್ ಹಾಗೂ ಪ್ರ ಪಿಯು ವಿಭಾಗದ ರಿಝ ಫಾತಿಮ ಅನಿಸಿಕೆ ವ್ಯಕ್ತಪಡಿಸಿದರು. ಪ್ರಥಮ ಪಿಯು ವಿದ್ಯಾರ್ಥಿಗಳಾದ ಶ್ರೇಯ, ಆಯಿಷತ್ ಇನ್ಷಾ ಮತ್ತು ತಂಡದವರು ವಿವಿಧ ಮೋಜಿನ ಆಟ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಕೇಕ್ ಕತ್ತರಿಸಿ ಸಂಭ್ರಮಿಸಿದರು. ಶ್ರೇಯ ಮತ್ತು ಫಾತಿಮತ್ ಅಮ್ನ ನಿರೂಪಿಸಿದರು.