ರಾಜಕೀಯ

ಮದುವೆಯ ವಿಶಿಷ್ಟ ಆಮಂತ್ರಣ ಪತ್ರ!! ಪ್ರಧಾನಿ ಮೋದಿ ಫೋಟೋ ಕಾಣಿಸಿಕೊಳ್ಳಲು ಕಾರಣವೇನು?

144

ನ್ಯೂಸ್‌ ನಾಟೌಟ್‌: ಮದುವೆ ಜೀವನದ ದೊಡ್ಡ ತಿರುವು.ಇದನ್ನು ಸ್ವರ್ಗದಲ್ಲೆ ನಿಶ್ಚಯ ಮಾಡಿರುತ್ತಾರೆ ಎಂದು ಹೇಳುತ್ತಾರೆ. ಹೀಗಾಗಿ ಜೀವನದಲ್ಲಿ ಒಮ್ಮೆ ಆಗುವ ಮದುವೆ ಡಿಫರೆಂಟಾಗಿರಬೇಕು ಎನ್ನುವುದು ಎಲ್ಲರ ಆಸೆ. ಪ್ರತಿಯೊಬ್ಬರೂ ತಮ್ಮ ಮದುವೆಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂದು ಬಯಸುತ್ತಾರೆ. ಇಲ್ಲೊಂದು ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ವಿಶೇಷವಾಗಿ, ವಿಶಿಷ್ಟವಾಗಿ ಮೋದಿ ಫೋಟೋವನ್ನು ಪ್ರಿಂಟ್​​ ಮಾಡಲಾಗಿದೆ.

ಮೋದಿ ಹೆಸರನ್ನು ಹಾಕಿ ಕಾಗದ ಪ್ರಿಂಟ್‌ ಆಗಿರೋದ್ರ ಬಗೆಗಿನ ಸುದ್ದಿ ಈ ಹಿಂದೆಯೂ ವೈರಲ್ ಆಗಿತ್ತು. ಇದೀಗ ಈ ವಿಭಿನ್ನ ಮದುವೆ ಕಾಗದ ಕೂಡ ವೈರಲಾಗುತ್ತದೆ. ಸಂಗಾರೆಡ್ಡಿ ಜಿಲ್ಲೆಯ ಪಠಾಣ್ ಚೆರುವಿನ ವ್ಯಕ್ತಿಯೊಬ್ಬರು ತಮ್ಮ ಮಗನ ಮದುವೆಯ ಆಮಂತ್ರಣ ಪತ್ರಿಕೆ ಮುದ್ರಿಸಿದ, ಮದುವೆ ಕಾರ್ಡ್ ಈಗ ವೈರಲ್ ಆಗಿದೆ.ನಂದಿಕಾಂತಿ ನರಸಿಂಹ ಪಟಾನ್ ಚೆರುವಿನಲ್ಲಿ ಬಾಂಗ್ ಡೀಲರ್. ಇವರು ಪ್ರಧಾನಿ ನರೇಂದ್ರ ಮೋದಿಯವರ ಕಟ್ಟಾ ಅಭಿಮಾನಿ. ನರಸಿಂಹ ಅವರ ಪುತ್ರ ಸಾಯಿಕುಮಾರ್ ಮದುವೆ ಪತ್ರಿಕೆಗಳಲ್ಲಿ ನರೇಂದ್ರ ಮೋದಿ ಅವರ ಚಿತ್ರ ಮುದ್ರಿಸಿ, ‘ನನ್ನ ಮದುವೆಗೆ ನಿಮ್ಮ ಉಡುಗೊರೆ ನರೇಂದ್ರ ಮೋದಿ ಅವರಿಗೆ ಮತ ನೀಡಿ’ ಎಂದು ಮೋದಿ ಅವರ ಫೋಟೋವನ್ನು ಮುದ್ರಿಸಿ ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ಕುಟುಂಬಕ್ಕೆ ಇರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಮದುವೆಗೆ ಬರುವವರು ವಿಶೇಷ ಉಡುಗೊರೆಗಳನ್ನು ನೀಡುವ ಅಗತ್ಯವಿಲ್ಲ, ಬಿಜೆಪಿ ಪಕ್ಷಕ್ಕೆ ಮತ ನೀಡಿ ಎಂದು ಹೇಳಿದ್ದಾರೆ. ಈ ಮದುವೆಯ ಪತ್ರಿಕೆಯನ್ನು ಬಿಜೆಪಿ ಪಕ್ಷದ ನಾಯಕರು ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

See also  ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರ ಹುಟ್ಟುಹಬ್ಬಕ್ಕೆ ಮೋದಿ, ಸಿದ್ದರಾಮಯ್ಯ ಸೇರಿ ಹಲವು ಗಣ್ಯರಿಂದ ಶುಭಾಶಯ, ದೇವೇಗೌಡರ ನಿವಾಸಕ್ಕೆ ವಿರೋಧ ಪಕ್ಷ ನಾಯಕ ಆರ್.ಅಶೋಕ್ ಭೇಟಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget