ನ್ಯೂಸ್ ನಾಟೌಟ್: ಮಲೆಯಾಳದ ಖ್ಯಾತ ನಟಿ ರಿನಿ ಜಾರ್ಜ್‌ಗೆ ಕೇರಳದ ಕಾಂಗ್ರೆಸ್ ಶಾಸಕನೋರ್ವ ಸತತವಾಗಿ ಕಳೆದ ಮೂರು ವರ್ಷದಿಂದ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿಬಂದಿದೆ. ನಟಿಗೆ ಅಶ್ಲೀಲ ಸಂದೇಶ ರವಾನೆ, ಫೈವ್ ಸ್ಟಾರ್ ಹೊಟೆಲ್‌ಗೆ ಬರುವಂತೆ ಕಿರುಕುಳ, ಮಾನಸಿಕವಾಗಿಯೂ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಸ್ವತಃ ನಟಿ ರಿನಿ ಜಾರ್ಜ್ ಕಾಂಗ್ರೆಸ್ ನಾಯಕನ ಹೆಸರು ಹೇಳದೆ ಈ ಮಾಹಿತಿಯನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.
ಸೋಶಿಯಲ್ ಮೀಡಿಯಾ ಮೂಲಕ ಕೇರಳ ಶಾಸಕನ ಪರಿಚಯವಾಗಿತ್ತು. ಮೂರು ವರ್ಷದ ಹಿಂದೆ ಕೇರಳ ಕಾಂಗ್ರೆಸ್ ಶಾಸಕನ ಕಿರುಕುಳ ಆರಂಭಗೊಂಡಿತ್ತು. ಫೈವ್ ಸ್ಟಾರ್ ಹೊಟೆಲ್‌ನಲ್ಲಿ ರೂಮ್ ಬುಕ್ ಮಾಡುವುದಾಗಿ ಹೇಳಿ ಕಿರುಕುಳ ನೀಡಿದ್ದರು. ರಾತ್ರಿ ಹೊಟೆಲ್ ರೂಂಗೆ ಭೇಟಿ ನೀಡುವಂತೆ ಒತ್ತಾಯಿಸಿದ್ದರು. ನಿರಂತರವಾಗಿ ಕಿರುಕುಳ ನೀಡಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.
ಈ ಕುರಿತು ಕಾಂಗ್ರೆಸ್ ಹಿರಿಯ ನಾಯಕರು, ಸೇರಿದಂತೆ ಕಲ ನಾಯಕರಿಗೆ ಸೂಚಿಸಿದ್ದೆ. ಶಾಸಕನ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದೆ. ಆದರೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕಾಂಗ್ರೆಸ್ ಶಾಸಕನ ಕಿರುಕಳ ಹೆಚ್ಚಾದ ಕಾರಣ ಸಂದರ್ಶನದಲ್ಲಿ ಬಹಿರಂಗಪಡಿಸುತ್ತಿದ್ದೇನೆ ಎಂದು ರಿನಿ ಜಾರ್ಜ್ ಆರೋಪಿಸಿದ್ದಾರೆ. ಶಾಸಕರು, ಕಾಂಗ್ರೆಸ್, ಪ್ರಭಾವಿಗಳ ವಿರುದ್ಧ ಕಾನೂನು ಹೋರಾಟ ಮಾಡುವುದು ಸುಲಭವಲ್ಲ. ಹೀಗಾಗಿ ದೂರು ನೀಡಲು ಹೋಗಿಲ್ಲ ಎಂದು ರಿನಿ ಹೇಳಿದ್ದಾರೆ. ನನಗೆ ಮೆಸೇಜ್ ಮಾಡಿ ಕಿರುಕುಳ ನೀಡಿದ್ದಾರೆ. ಇದರಿಂದ ಮುಕ್ತಿ ಬೇಕಿದೆ ಎಂದು ನಟಿ ಸ್ಪಷ್ಟಪಡಿಸಿದ್ದಾರೆ.
ಯಾರು ಈ ಶಾಸಕ..?
ರಿನಿ ಜಾರ್ಜ್ ಈ ಸ್ಫೋಟಕ ಆರೋಪ ಕೇರಳ ಕಾಂಗ್ರೆಸ್‌ನಲ್ಲಿ ಕೋಲಾಹಲ ಸೃಷ್ಟಿಸಿತ್ತು. ರಿನಿ ಜಾರ್ಜ್ ಹೆಸರು ಹೇಳದೆ ಆರೋಪ ಮಾಡಿದ್ದರು. ಆದರೆ ರಿನಿ ಜಾರ್ಜ್ ಆರೋಪದ ಬೆನ್ನಲ್ಲೇ ಶಾಸಕ ರಾಹುಲ್ ಮಮೂಕೂಟತಿಲ್ ವಿರುದ್ಧ ಕೇರಳ ಬಿಜೆಪಿ ಪ್ರತಿಭಟನೆ ನಡೆಸಿದೆ. ಕೇರಳ ಬಿಜೆಪಿ ನಾಯಕರ ಪ್ರತಿಭಟನೆ, ಸಾರ್ವಜನಿಕರ ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ ಕೇರಳ ಕಾಂಗ್ರೆಸ್ ತುರ್ತು ಸಭೆ ನಡೆಸಿ ನಾಯಕನ ವಿರುದ್ಧ ಅಸಮಾಧಾನ ಹೊರಹಾಕಿತ್ತು. ಇದರ ಬೆನ್ನಲ್ಲೇ ಕೇರಳ ಕಾಂಗ್ರೆಸ್ ಶಾಸಕ ರಾಹುಲ್ ಮಮೂಕೂಟತಿಲ್ ವಿರುದ್ದ ಪಕ್ಷದ ನಾಯಕರು ಭಾರಿ ಆಕ್ರೋಶ ಹೊರಹಾಕಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ ಶಾಸಕ ರಾಹುಲ್ ಅನಿವಾರ್ಯವಾಗಿ ಕೇರಳ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ ಎಂದು ವರದಿಯಾಗಿದೆ.