Latestಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಪತ್ನಿಯ ಕತ್ತು ಸೀಳಿ ಕೊಲೆ ಮಾಡಿ ಅತ್ತೆಗೆ ಕರೆ ಮಾಡಿದ ಅಳಿಯ..! ಆತನ ಕ್ರೌರ್ಯ ವಿಡಿಯೋದಲ್ಲಿ ಸೆರೆ..!

964

ನ್ಯೂಸ್ ನಾಟೌಟ್: “ನಾನು ಎಷ್ಟು ಸಲ ಹೇಳಿದೀನಿ ನನ್ನ ಕಣ್ಣೆದುರು ಬೇರೆ ಯಾರ ಜತೆನೂ ಮಾತನಾಡಬಾರ್ದು ಎಂದು ಆದ್ರೂ ಮಾತಾಡಿದ್ಲು ಕೊಂದು ಬಿಟ್ಟೆ” ಎಂದು ಹೆಂಡತಿಯನ್ನು ಕೊಲೆ ಮಾಡಿ ಅಳಿಯ ಅತ್ತೆಗೆ ಕರೆ ಮಾಡಿ ಹೇಳಿದ್ದಾನೆ ಎನ್ನಲಾಗಿದೆ. ಆಟೋ ಚಾಲಕ ಪ್ರಶಾಂತ್, ಪತ್ನಿ ನೇಹಾಳ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಬಾಗ್ ​ಪತ್ ​ನಲ್ಲಿ ನಡೆದಿದೆ. ನೇಹಾ ತನ್ನ ತಾಯಿಯ ಮನೆಯಲ್ಲಿ ಒಂಟಿಯಾಗಿರುವಾಗ ಘಟನೆ ನಡೆಸಿದೆ.

ಘಟನೆಯ ಮನಕಲಕುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ದಾಳಿಯ ನಂತರ ಆರೋಪಿ ಫೋನ್‌ ನಲ್ಲಿ ಯಾರೊಂದಿಗೋ ಮಾತನಾಡುತ್ತಿರುವುದನ್ನು ಇದು ತೋರಿಸುತ್ತದೆ. ನನ್ನೆದುರು ನೀನು ಯಾರೊಂದಿಗಾದರೂ ಮಾತನಾಡಿದರೆ ಅಂದೇ ನಿನ್ನನ್ನು ಕೊಲ್ಲುತ್ತೇನೆ ಎಂದು ನಾನು ಮದುವೆಯಾದ ದಿನವೇ ಆಕೆಗೆ ಎಚ್ಚರಿಕೆ ನೀಡಿದ್ದೆ ಎಂದು ಆತ ತನ್ನ ಅತ್ತೆಗೆ ಹೇಳಿದ್ದಾನೆ ಎನ್ನಲಾಗಿದೆ.

ಆರೋಪಿಯು ಸುಮಾರು 15 ನಿಮಿಷಗಳ ಕಾಲ ಶವದ ಬಳಿ ಓಡಾಡಿ ಬಳಿಕ ಅತ್ತೆಗೆ ಕರೆ ಮಾಡಿದ್ದಾನೆ. ನಾನು ಆಕೆಯನ್ನು ಕೊಂದು ಎಸೆದಿದ್ದೇನೆ, ಈಗ ನಾನು ಪೊಲೀಸ್​ ಠಾಣೆಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ. ಇಬ್ಬರೂ ಪರಸ್ಪರ ಪ್ರೀತಿಸಿ 8 ವರ್ಷಗಳ ಹಿಂದೆ ಮದುವೆಯಾಗಿದ್ದರು. ನಾಲ್ಕು ವರ್ಷದ ಮಗನಿದ್ದಾನೆ. ಮೂಲತಃ ಸಹರಾನ್ ​ಪುರದವರಾದ ನೇಹಾ ಈಗ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮೊದಲು ಬ್ಯೂಟಿಪಾರ್ಲರ್ ನಡೆಸುತ್ತಿದ್ದರು. ಕುಟುಂಬವು ಪ್ರಶಾಂತ್ ಅವರ ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿತ್ತು.

ಅಕ್ಕಪಕ್ಕದ ಮನೆಯವರು ಹೇಳುವ ಪ್ರಕಾರ ಇಬ್ಬರ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು. ಪ್ರಶಾಂತ್ ತನ್ನ ಪತ್ನಿಗೆ ವಿವಾಹೇತರ ಸಂಬಂಧವಿದೆ ಎಂದು ಅನುಮಾನಿಸುತ್ತಿದ್ದ. ನಿರಂತರ ಜಗಳದಿಂದ ಬೇಸತ್ತ ನೇಹಾ ಇತ್ತೀಚೆಗೆ ತನ್ನ ತಾಯಿ ರಂಜಿತಾ ಅವರೊಂದಿಗೆ ಅದೇ ಪ್ರದೇಶದಲ್ಲಿ ಮತ್ತೊಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಪ್ರಶಾಂತ್ ಮೊದಲ ಆಕೆಯ ಕೈಗಳ ಮೇಲೆ ಹಲ್ಲೆ ನಡೆಸಿದ್ದಾನೆ, ಆಕೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ಆಕೆಯ ಬೆರಳುಗಳನ್ನು ಕತ್ತರಿಸಿದ್ದಾನೆ. ನಂತರ ಗಂಟಲು ಸೀಳಿದ್ದಾನೆ. ಸಂತ್ರಸ್ತೆಯ ತಾಯಿ ರಂಜಿತಾ ಕೊಟ್ಟಿರುವ ಹೇಳಿಕೆಯಲ್ಲಿ ಆತ ನಿತ್ಯ ಕುಡಿದುಬಂದು ತನ್ನ ಮಗಳಿಗೆ ಹಿಂಸೆ ಕೊಡುತ್ತಿದ್ದ, ಈ ಹಿಂದೆಯೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ, ಆರೋಪಿ ಅಪರಾಧ ಒಪ್ಪಿಕೊಂಡಿದ್ದಾನೆ. ಕೊಲೆಗೆ ಬಳಸಿದ್ದ ಚಾಕುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ತನಿಖೆ ಮುಂದುವರೆಸಿದ್ದಾರೆ.

See also  ನಾಗರ ಹಾವು ಓಡಿಸಲು ಹೊಗೆ ಹಾಕಿದ ಕುಟುಂಬಕ್ಕೆ ಕಾದಿತ್ತು ಶಾಕ್! ಹಾವನ್ನು ಓಡಿಸಲು ಹಾಕಿದ ಬೆಂಕಿಗೆ ಇಡೀ ಮನೆಯೇ ಭಸ್ಮವಾದದ್ದೇಗೆ? ಏನಿದು ಪವಾಡ?

ಉತ್ತರಾಖಂಡ: ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನ..! 5 ಮಂದಿ ಸಾವು..!

ಬಲೂಚ್ ನ ಪ್ರತ್ಯೇಕತಾವಾದಿಗಳ ಬಾಂಬ್ ದಾಳಿಗೆ 12 ಪಾಕ್ ಸೈನಿಕರು ಸಾವು..! ವಿಡಿಯೋ ವೈರಲ್

  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget