Latestಜೀವನ ಶೈಲಿ/ಆರೋಗ್ಯಸಿನಿಮಾ

ಪುಟ್ಟ ಮಗುವಿನ ಅಪರೂಪದ ಕಾಯಿಲೆಯ ಚಿಕಿತ್ಸೆಗೆ ಸಹಕರಿಸುವಂತೆ ಮನವಿ ಮಾಡಿದ ಕಿಚ್ಚ ಸುದೀಪ್‌..! ಚಿಕಿತ್ಸೆಗೆ ಬರೋಬ್ಬರಿ 16 ಕೋಟಿ ರೂಪಾಯಿ ವೆಚ್ಚ..!

4.9k

ನ್ಯೂಸ್‌ ನಾಟೌಟ್: ಸ್ಯಾಂಡ್‌ ಲ್‌ ವುಡ್ ನಟ ಕಿಚ್ಚ ಸುದೀಪ್ ಪುಟ್ಟ ಮಗುವಿನ ಜೀವ ಉಳಿಸೋ ಹೋರಾಟಕ್ಕೆ ಸಹಾಯ ಕೇಳಿದ್ದಾರೆ. ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಪುಟ್ಟ ಮಗುವಿನ ಸಹಾಯಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸುವಂತೆ ವಿಡಿಯೋ ಸಂದೇಶದ ಮೂಲಕ ನಟ ಕಿಚ್ಚ ಸುದೀಪ್‌ ಮನವಿ ಮಾಡಿದ್ದಾರೆ.

ಒಂದೂವರೆ ವರ್ಷದ ಮಗುವೊಂದು ಸ್ಫೈನಲ್ ಮಸ್ಕ್ಯುಲರ್ ಆ್ಯಟ್ರಫಿಯಿಂದ ಬಳಲುತ್ತಿದೆ. ಈ ಚಿಕಿತ್ಸೆಗಾಗಿ 16 ಕೋಟಿ ರೂಪಾಯಿ ವೆಚ್ಚ ತಗಲುತ್ತದೆ. ನಾನು ಸಹ ಸಹಾಯ ಮಾಡುತ್ತೇನೆ ಎಂದು ವಿಡಿಯೋ ಮೂಲಕ ಸುದೀಪ್‌ ಹೇಳಿದ್ದಾರೆ.

ಒಂದೂವರೆ ವರ್ಷದ ಈ ಕೀರ್ತನಾ ಅಪರೂಪದ ಜೆನೆಟಿಕಲ್ ಡಿಸಾರ್ಡರ್‌ ಗೆ ತುತ್ತಾಗಿದೆ. ಕೀರ್ತನಾ ಸೂಕ್ತ ಚಿಕಿತ್ಸೆ ನೀಡಲು ಬರೋಬ್ಬರಿ 16 ಕೋಟಿ ರೂಪಾಯಿ ಅಗತ್ಯವಿದ್ದು, ಮಗುವಿಗಾಗಿ ಪೋಷಕರ ಪರವಾಗಿ ಕಿಚ್ಚ ಸುದೀಪ್‌ ಮನವಿ ಮಾಡಿದ್ದಾರೆ. ಅರಣ್ಯ ಇಲಾಖೆಯಲ್ಲಿ ಅಧಿಕಾರಿಯಾಗಿರೋ ಕಿಶೋರ್ ಎಂಬುವವರ ಪುತ್ರಿಯೇ ಈ ಕೀರ್ತನಾ. ಕಿಶೋರ್ ಮಗಳ ಜೀವ ಉಳಿಸಲು ತನ್ನ ಆಸ್ತಿಯನ್ನೆಲ್ಲಾ ಮಾರಿ ಹೋರಾಟ ಮಾಡುತ್ತಿದ್ದಾರೆ ನಾವು ಸಹಕರಿಸೋಣ ಎಂದು ಸುದೀಪ್ ಮನವಿ ಮಾಡಿದ್ದಾರೆ.

 

View this post on Instagram

 

A post shared by @__kichcha__sudeep_creation_

ಸುದೀಪ್ ಫ್ಯಾನ್ ಪೇಜ್ ನಲ್ಲಿ ಕಾಣಿಸಿಕೊಂಡಿರುವ ವಿಡಿಯೋದಲ್ಲಿ ನಟ ಕಂದಮ್ಮನಿಗಾಗಿ ಮಿಡಿದಿದ್ದಾರೆ. ಕೀರ್ತನ ಎಂಬ ಮುಗ್ಧ ಮಗು ಅಪರೂಪದ ಕಾಯಿಲೆಯಿಂದ ಬಳಲುತ್ತಿದೆ. ಚಿಕಿತ್ಸೆಗೆ ಬರೋಬ್ಬರಿ 16 ಕೋಟಿ ರೂ. ಖರ್ಚಾಗಲಿದೆ. ನಾನು ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ನೀವೂ ಸಹಾಯ ಮಾಡಿ ಎಂದು ತಮ್ಮ ಅಪಾರ ಸಂಖ್ಯೆಯ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

 

See also  ಮೈಸೂರು ದಸರಾ ಕ್ರೀಡಾಕೂಟದಲ್ಲಿ ಕಂಬಳ ಸೇರ್ಪಡೆ..! ಮಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಘೋಷಣೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget