Latestಕ್ರೈಂ

ಮೊಬೈಲ್‌ ಫೋನ್‌ಗಾದ ಜಗಳಕ್ಕೆ ಮನೆಯ ಛಾವಣಿಯೇ ಕುಸಿದು ಬಿತ್ತು..!ಛಾವಣಿಯ ಮೇಲೆಯೇ ನಿಂತು ಮಹಿಳೆಯರು, ಪುರುಷರ ಹೊಡೆದಾಟ!! ವಿಡಿಯೋ ವೀಕ್ಷಿಸಿ

521

ನ್ಯೂಸ್‌ ನಾಟೌಟ್: ಗಲಾಟೆ ಎಬ್ಬಿಸೋದು ಸುಲಭ.ಆದರೆ ಅದರಿಂದಾಗುವ ದುಷ್ಪರಿಣಾಮ ಅನುಭವಿಸೋದು ತುಂಬಾ ಕಷ್ಟ. ಹೌದು,ಇಲ್ಲೊಂದೆಡೆ ಸಣ್ಣ ವಿಚಾರಕ್ಕೆ ಗಲಾಟೆ ನಡೆದಿದ್ದು, ಪರಿಣಾಮ ಮನೆಯ ಛಾವಣಿಯೇ ಕುಸಿದು ಬಿದ್ದಿರುವ ಘಟನೆ ಬಗ್ಗೆ ವರದಿಯಾಗಿದೆ. ಇದರಿಂದಾಗಿ ಐವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಈ ಘಟನೆ ಮಹಾರಾಷ್ಟ್ರದ ಭಿವಂಡಿಯಲ್ಲಿ ನಡೆದಿದ್ದು ಇದಕ್ಕೆ ಸಂಬಂಧಿಸಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಏನಾಯ್ತು?

ಮೊಬೈಲ್ ಫೋನ್ ವಿಚಾರಕ್ಕೆ ಸಂಬಂಧಿಸಿ ಮೊಯಿನುದ್ದೀನ್ ನಸ್ರುದ್ದೀನ್ ಶೇಖ್ ಮತ್ತು ನೂರುದ್ದೀನ್ ಇಮಾಮುದ್ದೀನ್ ಶೇಖ್ ಕುಟುಂಬಗಳ ಸದಸ್ಯರ ನಡುವೆ ಜಗಳ ನಡೆದಿದೆ.ಮೊದಲು ಮಾತಿಗೆ ಮಾತು ಬೆಳೆದು ಇದಾದ ನಂತರ ಜಗಳ ತಾರಕಕ್ಕೇರಿದ್ದು, ಎರಡೂ ಕುಟುಂಬದ ಸದಸ್ಯರು ಮನೆಯ ಛಾವಣಿಯ ಮೇಲೆ ಮಹಿಳೆಯರು, ಪುರುಷರು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಮನೆಯ ಛಾವಣಿ ಕುಸಿದು ಕನಿಷ್ಠ ಆರು ಜನರು ಅದರೊಂದಿಗೆ ಕೆಳಗೆ ಬಿದ್ದಿದ್ದಾರೆ.

ಕೆಳಗೆ ಬಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಇದರ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.ಘಟನೆಯ ನಂತರ, ಎರಡೂ ಕುಟುಂಬಗಳ ಸದಸ್ಯರು ಮೇಲ್ಛಾವಣಿ ಕುಸಿತದಿಂದ ಉಂಟಾದ ಹಾನಿಗೆ ಮನೆ ಮಾಲೀಕರಿಗೆ ಪರಿಹಾರವನ್ನು ನೀಡಲು ಒಪ್ಪಿಕೊಂಡಿದ್ದು. ಇದರ ನಡುವೆ ಎರಡೂ ಕುಟುಂಬಗಳ ಸದಸ್ಯರು ದೂರು ಪ್ರತಿ ದೂರು ನೀಡಿದ್ದು ದೂರು ದಾಖಲಿಸಿಕೊಂಡ ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

See also  ಬೀದಿ ನಾಯಿ ಮೇಲೆ ಲೈಂಗಿಕ ದೌರ್ಜನ್ಯ..! ವೃದ್ಧನ ವಿಡಿಯೋ ಎಲ್ಲೆಡೆ ವೈರಲ್..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget