Latestಕ್ರೈಂರಾಜ್ಯ

ಶಿರಸಿ: ಜಲಪಾತ ವೀಕ್ಷಣೆಗೆ ಹೋದ ಯುವಕ ಕಾಲು ಜಾರಿ ಕಣ್ಮರೆ..! ಕೊಚ್ಚಿ ಹೋಗಿರುವ ಯುವಕನಿಗಾಗಿ ಹುಡುಕಾಟ..!

361

ನ್ಯೂಸ್ ನಾಟೌಟ್: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮತ್ತಿಘಟ್ಟ ಸಮೀಪದ ಜೋಗನ ಹಕ್ಕಲು ಜಲಪಾತದಲ್ಲಿ ದುರ್ಘಟನೆ ಸಂಭವಿಸಿದೆ. ಫಾಲ್ಸ್​ ವೀಕ್ಷಣೆಗೆ ಹೋದಾಗ ಯುವಕ ಕಾಲು ಜಾರಿಬಿದ್ದು ಕಣ್ಮರೆಯಾಗಿದ್ದಾನೆ.

ಪವನ್ ಗಣಪತಿ ಜೋಗಿ (24) ಕಣ್ಮರೆಯಾದ ಯುವಕ ಎಂದು ಗುರುತಿಸಲಾಗಿದೆ. ಈತ ಮೂಲತಃ ಸೋಮನಳ್ಳಿ ಗ್ರಾಮದ ಉಂಬಳೆಕೊಪ್ಪದ ಯುವಕ ಎನ್ನಲಾಗಿದೆ. ಸ್ನೇಹಿತನಾದ ವಾಸುದೇವ್ ಜೊತೆ ಜೋಗನ ಹಕ್ಕಲು ಫಾಲ್ಸ್ ನೋಡಲು ಹೋಗಿದ್ದ.

ಫಾಲ್ಸ್ ಹತ್ತಿರ ರಭಸವಾಗಿ ಹರಿಯುತ್ತಿದ್ದ ಹಳ್ಳವನ್ನ ದಾಟುವಾಗ ಕಾಲು ಜಾರಿ ಬಿದ್ದು ಕೊಚ್ಚಿಕೊಂಡು ಹೋಗಿ ಕಣ್ಮರೆಯಾಗಿದ್ದಾನೆ. ಸ್ಥಳಕ್ಕೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕೊಚ್ಚಿಕೊಂಡು ಹೋಗಿರುವ ಯುವಕನಿಗಾಗಿ ಹುಡುಕಾಟ ನಡೆಯುತ್ತಿದೆ. ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

8 ವರ್ಷದ ಮಗಳನ್ನು ಬೆನ್ನಿಗೆ ಕಟ್ಟಿಕೊಂಡು ಕೃಷಿ ಹೊಂಡಕ್ಕೆ ಹಾರಿದ ತಾಯಿ..! ದೂರು ದಾಖಲು..!

ಚಲಿಸುವ ರೈಲಿನ ಕೆಳಗೆ ಬಿದ್ದ ಮಗಳನ್ನು ಪ್ರಾಣ ಲೆಕ್ಕಿಸದೆ ರೈಲ್ವೆ ಹಳಿಯಲ್ಲೇ ಮಲಗಿ ರಕ್ಷಿಸಿದ ತಂದೆ..! ವಿಡಿಯೋ ವೈರಲ್

See also  ನಟಿಗೆ ಪ್ರಭಾವಿ ರಾಜಕಾರಣಿಯಿಂದ ಲೈಂಗಿಕ ಕಿರುಕುಳ ಆರೋಪ..! 3 ಐಪಿಎಸ್ ಅಧಿಕಾರಿಗಳು ಅಮಾನತ್ತು..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget