ಕ್ರೈಂವೈರಲ್ ನ್ಯೂಸ್

ಜಲಪಾತ ವೀಕ್ಷಣೆಗೆ ಹೋದವರ ಮೇಲೆ ಜೇನು ದಾಳಿ..! 30ಕ್ಕೂ ಹೆಚ್ಚು ಪ್ರವಾಸಿಗರು ಆಸ್ಪತ್ರೆಗೆ ದಾಖಲು..!

238

ನ್ಯೂಸ್ ನಾಟೌಟ್: ಜಲಪಾತ ವೀಕ್ಷಣೆಗೆ ತೆರಳಿದ್ದ ಪ್ರವಾಸಿಗರ ಮೇಲೆ ಜೇನು ಹುಳುಗಳು ದಾಳಿ ಮಾಡಿದ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಸಾತೊಡ್ಡಿ ಜಲಪಾತದಲ್ಲಿ (Satoddi Falls) ಘಟನೆ ನಡೆದಿದೆ.

ಕಳೆದ ಎರಡು ದಿನಗಳಲ್ಲಿ 30ಕ್ಕೂ ಅಧಿಕ ಪ್ರವಾಸಿಗರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಂಭೀರ ಗಾಯಗೊಂಡಿದ್ದ ನಾಲ್ವರು ಪ್ರವಾಸಿಗರಿಗೆ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೇಸಿಗೆ ಹಿನ್ನೆಲೆಯಲ್ಲಿ ನೀರಲ್ಲಿ ಆಟವಾಡಲು ಸಾತೊಡ್ಡಿ ಫಾಲ್ಸ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.

ಜಲಪಾತದ ಬಳಿಯೇ ಪ್ರವಾಸಿಗರ ಮೇಲೆ ಜೇನುಹುಳಗಳ ದಾಳಿ ಮಾಡಿವೆ. ಸದ್ಯ ಜೇನುಹುಳುಗಳ ದಾಳಿ ಹಿನ್ನೆಲೆಯಲ್ಲಿ ಜಲಪಾತ ವೀಕ್ಷಣೆಗೆ ಅರಣ್ಯ ಇಲಾಖೆಗೆ ನಿರ್ಬಂಧ ಹೇರಿದೆ. ಬಿಸಗೋಡ ಕ್ರಾಸ್‌ನಲ್ಲಿ ಬ್ಯಾನರ್ ಅಳವಡಿಸಿ ಪ್ರವಾಸಿಗರಿಗೆ ಸೂಚನೆ ನೀಡಿದೆ. ಏ.14ರಿಂದ ಅನಿರ್ದಿಷ್ಟ ಕಾಲದವರೆಗೆ ಜಲಪಾತ ವೀಕ್ಷಣೆಯನ್ನು ನಿರ್ಬಂಧಿಸಲಾಗಿದೆ ಎಂದು ಬ್ಯಾನರ್‌ ಹಾಕಲಾಗಿದೆ.

See also  ‘ಡೆವಿಲ್’ ಶೂಟಿಂಗ್ ಗೆ ದರ್ಶನ್ ಮತ್ತೆ ಎಂಟ್ರಿ..! ಶೂಟಿಂಗ್ ವೇಳೆ ಭದ್ರತೆಗೆ 32 ಪೊಲೀಸ್ ಸಿಬ್ಬಂದಿ ನಿಯೋಜನೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget