ಕ್ರೈಂಪುತ್ತೂರು

ವಾಟ್ಸಾಪ್‌ ಮಾಹಿತಿ ನಂಬಿ ಮೊಸಗೊಳಗಾದ ಪುತ್ತೂರಿನ ವ್ಯಕ್ತಿ..! ವಂಚಕರು ಖಾತೆಯಿಂದ 22 ಲಕ್ಷ ರೂ. ವರ್ಗಾಯಿಸಿಕೊಂಡದ್ದೇಗೆ..?

104

ನ್ಯೂಸ್‌ ನಾಟೌಟ್‌: ವಾಟ್ಸಾಪ್‌ನಲ್ಲಿ ಬಂದ ಸುಳ್ಳು ಮಾಹಿತಿ ನಂಬಿ ಆನ್‌ಲೈನ್‌ ಆ್ಯಪ್‌ ಮೂಲಕ ಹಣ ಹೂಡಿಕೆ ಮಾಡಲು ಹೋಗಿ ವ್ಯಕ್ತಿಯೊಬ್ಬರು 22 ಲಕ್ಷ ರೂ. ಕಳೆದುಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರು ನಿವಾಸಿ ಜಾನ್‌ ಪ್ರವೀಣ್‌ ಮಾಡ್ತ (46) ಹಣ ಕಳೆದುಕೊಂಡವರು. ವಾಟ್ಸಪ್‌ನಲ್ಲಿ ಬಂದ ಎಸಿವಿವಿಎಲ್‌ ಆನ್‌ಲೈನ್‌ ಆ್ಯಪ್‌ ಇನ್‌ಸ್ಟಾಲ್‌ ಮಾಡಿ ಅದರಲ್ಲಿ ಸೂಚಿಸಲಾದ ವಿವಿಧ ಬ್ಯಾಂಕ್‌ ಖಾತೆಗಳಿಗೆ ತನ್ನ ಮತ್ತು ಪತ್ನಿಯ ಬ್ಯಾಂಕ್‌ ಖಾತೆಯಿಂದ ಹಂತ-ಹಂತವಾಗಿ ಹಣ ವರ್ಗಾಯಿಸಿದ್ದಾರೆ.


ಬಳಿಕ ಇವರು ಹಾಕಿದ ಹಣಕ್ಕೆ ಲಾಭಾಂಶವಾಗಿ ಒಂದು ಹಂತದಲ್ಲಿ 21 ಸಾವಿರ ರೂ. ಖಾತೆಗೆ ಜಮೆ ಆಗಿತ್ತು. ಅಲ್ಲದೇ ಹೂಡಿಕೆ ಮಾಡಿದ ಹಣದ ಮೊತ್ತವು ಆ್ಯಪ್‌ನಲ್ಲಿ ನಮೂದಾಗಿದ್ದ ಕಾರಣ ಯಾವುದೇ ಸಂಶಯವಿಲ್ಲದೇ ನಿರಂತರವಾಗಿ ಹಣ ವರ್ಗಾಯಿಸಿದ್ದಾರೆ. ಹೂಡಿಕೆಯ ಮೊತ್ತ 22,35,000 ರೂ.ಗೆ ತಲುಪಿದಾಗ ತಾನು ಮೋಸ ಹೋಗಿರುವುದು ಗಮನಕ್ಕೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಸೆನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

See also  ದರ್ಶನ್ ಆ್ಯಂಡ್ ಗ್ಯಾಂಗ್ ಭವಿಷ್ಯ ಇಂದು ನಿರ್ಧಾರ..? ಇಂದೇ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ..!
  Ad Widget   Ad Widget   Ad Widget   Ad Widget   Ad Widget   Ad Widget