ಕರಾವಳಿ

ಭಕ್ತರೇ ಎಚ್ಚರ!ಎಚ್ಚರ! ಕೊಲ್ಲೂರು ಮೂಕಾಂಬಿಕೆ ದೇಗುಲದ ಹೆಸರಿನಲ್ಲಿ ನಕಲಿ ಟ್ರಸ್ಟ್..!ಕೋಟಿ ಕೋಟಿ ರೂ. ಹಣವನ್ನು ಲಪಟಾಯಿಸುತ್ತಿರುವ ನಕಲಿ ಟ್ರಸ್ಟ್‌ ಯಾವುದು?

104

ನ್ಯೂಸ್‌ ನಾಟೌಟ್‌: ಇತ್ತೀಚಿನ ದಿನಗಳಲ್ಲಿ ಮನುಷ್ಯ ಯಾವ ಮಟ್ಟಕ್ಕೆ ಇಳಿದಿದ್ದಾನೆಂದ್ರೆ ದೇವರ ಹೆಸರಿನಲ್ಲಿಯೂ ವಂಚನೆ ಮಾಡೋದಕ್ಕೆ ಶುರು ಮಾಡಿದ್ದಾನೆ. ಹಿಂದೆಲ್ಲಾ ದೇವರ ಹೆಸರು ಎತ್ತಿದ್ರೆ ಸಾಕಿತ್ತು. ಸತ್ಯ ಬಾಯ್ಬಿಡ್ತಾ ಇದ್ರು. ಈಗ ಅದೇ ದೇವರ ಹೆಸರಿನಲ್ಲಿಯೂ ದುಡ್ಡು ಮಾಡೋದು ಹೇಗೆ ಅನ್ನೋದನ್ನು ಯೋಚನೆ ಮಾಡೋದನ್ನು ಕಲಿತಿದ್ದಾರೆ.ಹೌದು, ಕೊಲ್ಲೂರು ಮೂಕಾಂಬಿಕೆ ದೇಗುಲವೆಂದ್ರೆ ಪವಿತ್ರ ಕ್ಷೇತ್ರಗಳಲ್ಲಿ ಒಂದು . (Kolluru Mookambika Temple) ಇಲ್ಲಿ ನಿತ್ಯ ಸಾವಿರಾರು ಭಕ್ತರು ಬಂದು ದೇವಿಯ ದರ್ಶನ ಪಡಿತಿದ್ದಾರೆ.ಹೀಗಾಗಿ ಇಲ್ಲಿ ನಂಬಿದ ಭಕ್ತರಿಗೆ ಇಂಬು ನೀಡುತ್ತಾಳೆನ್ನುವ ನಂಬಿಕೆ ಭಕ್ತರದ್ದಾಗಿದೆ. ಆದರೆ ಇಲ್ಲಿ ನಕಲಿ ಟ್ರಸ್ಟ್ (Fake Trust) ಶುರುವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಕೊಲ್ಲೂರು ಡಿವೋಟಿಸ್ ಟ್ರಸ್ಟ್ ಅನ್ನುವ ನಕಲಿ ಲಿಂಕ್ ಹರಿದಾಡುತ್ತಿದೆ.

ದೇಗುಲಕ್ಕೆ ದೇಣಿಗೆ ಹರಕೆ ಸಲ್ಲಿಸುವ ಭಕ್ತರು ಇದರಲ್ಲಿ ದುಡ್ಡನ್ನು ಕಳಿಸಿದ್ದಾರಂತೆ. ಭಕ್ತರೊಬ್ಬರು ಹಣ ಕಳಿಸಿರುವ ಬಗ್ಗೆ ದೇಗುಲಕ್ಕೆ ಇ-ಮೇಲ್ ಮಾಡಿದಾಗ ಈ ಅಕೌಂಟ್‍ಗೂ ದೇವಸ್ಥಾನಕ್ಕೂ ಸಂಬಂಧ ಇಲ್ಲ ಅಂತ ಸ್ಪಷ್ಟನೆ ಬಂದಿದೆ. ಹೀಗಾಗಿ ಭಕ್ತರಾಗಿರುವ ರಾಘವೇಂದ್ರ ಹಾಗೂ ಧನಂಜಯ್ ಈ ಟ್ರಸ್ಟ್ ವಿರುದ್ಧ ಈಗ ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ಕೇರಳ (Kerala) ಮೂಲದಲ್ಲಿ ಈ ಟ್ರಸ್ಟ್ ನೋಂದಣಿಯಾಗಿರೋದು ಗೊತ್ತಾಗಿದೆ. ದೇಗುಲದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಭಕ್ತರನ್ನು ವಂಚಿಸಲಾಗುತ್ತಿದೆ. ಈ ಬಗ್ಗೆ ದೇಗುಲದ ಆಡಳಿತ ಮಂಡಳಿಯ ಗಮನಕ್ಕೆ ಬಾರದೇ ಇದ್ದಿದ್ದು ಅಚ್ಚರಿ ಅನ್ನೋದು ಭಕ್ತರ ಅಸಮಾಧಾನ. ಹೀಗಾಗಿ ಇದರ ಬಗ್ಗೆ ತನಿಖೆ ಮಾಡುವಂತೆಯೂ ಆಗ್ರಹಿಸಲಾಗಿದೆ.

2022ರಿಂದ ಈ ಟ್ರಸ್ಟ್ ಹೆಸರಿನಲ್ಲಿ ಭಕ್ತರಿಗೆ ಟೋಪಿ ಹಾಕುತ್ತಿರೋದು ಗಮನಕ್ಕೆ ಬಂದಿದೆ. ಕೋಟಿ ಕೋಟಿ ದುಡ್ಡನ್ನು ಈ ಟ್ರಸ್ಟ್ ಲಪಟಾಯಿಸಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಈ ಬಗ್ಗೆ ಮುಜರಾಯಿ ಇಲಾಖೆ ಸೂಕ್ತ ತನಿಖೆ ಮಾಡಬೇಕೆಂದು ಭಕ್ತರೊಬ್ಬರು ಒತ್ತಾಯಿಸಿದ್ದಾರೆ.

See also  ಪತಿಯ ಕಾಲು ಕತ್ತರಿಸಿ ಪತ್ನಿಯ ಕೈಗಿಟ್ಟ ಆಸ್ಪತ್ರೆ ಸಿಬ್ಬಂದಿ..!
  Ad Widget   Ad Widget   Ad Widget   Ad Widget   Ad Widget   Ad Widget