ನ್ಯೂಸ್ ನಾಟೌಟ್ : ನಕಲಿ ಮಾರ್ಕ್ಸ್ ಕಾರ್ಡ್ ತಯಾರು ಮಾಡುತ್ತಿದ್ದ ಬೃಹತ್ ಜಾಲ ಬೆಳಕಿಗೆ ಬಂದಿದ್ದು, ವಿಶ್ವವಿದ್ಯಾಲಯಗಳು ಬೆಚ್ಚಿ ಬೀಳುವಂತಹ ಘಟನೆ ನಡೆದಿದೆ. ಇಲ್ಲಿಯವರೆಗೆ 6800 ನಕಲಿ ಮಾರ್ಕ್ಸ್ ಕಾರ್ಡ್ ಪತ್ತೆಯಾಗಿರುವ ಸ್ಪೋಟಕ ವಿಷಯ ಬಹಿರಂಗಗೊಂಡಿದೆ.
ಓರ್ವ ಬಂಧನ:
ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದ್ದು,ತನಿಖೆ ಮಾಡುತ್ತಿದ್ದಾರೆ. ಇಲ್ಲಿಯವರೆಗೆ 6800 ನಕಲಿ ಮಾರ್ಕ್ಸ್ ಕಾರ್ಡ್ ಪತ್ತೆಯಾಗಿದ್ದು,ಇವು 15 ವಿಶ್ವ ವಿದ್ಯಾಲಯ ಹಾಗೂ ಸಂಸ್ಥೆಗಳಿಗೆ ಸಬಂಧಿಸಿದ ಮಾರ್ಕ್ಸ್ ಕಾರ್ಡ್ ಗಳಾಗಿವೆ ಎಂದು ತಿಳಿದು ಬಂದಿದೆ.
ನಕಲಿ ಮಾರ್ಕ್ಸ್ ಕಾರ್ಡ್ ದಂಧೆ:
ಪ್ರಕರಣ ಕುರಿತಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾತನಾಡಿದ್ದು, ‘ಒಂದೂವರೆ ತಿಂಗಳ ಹಿಂದೆ ನಕಲಿ ಮಾರ್ಕ್ಸ್ ಕಾರ್ಡ್ ದಂಧೆಯನ್ನ ಸಿಸಿಬಿ ಪತ್ತೆ ಮಾಡಿತ್ತು. ಇದರ ಮುಂದುವರಿದ ಭಾಗವಾಗಿ ಸಿಸಿಬಿ ಕಾರ್ಯಾಚರಣೆ ಮಾಡಿತ್ತು. ಇದೇ ರೀತಿ ನಕಲಿ ಮಾರ್ಕ್ಸ್ ಮಾಡುತ್ತಿದ್ದ ಐದು ಸಂಸ್ಥೆಗಳ ವಿರುದ್ಧ. ಸಿಸಿಬಿ ದಾಳಿ ಮಾಡಿತ್ತು ಈ ವೇಳೆ 6800 ನಕಲಿ ಮಾರ್ಕ್ಸ್ ಕಾರ್ಡ್ ಪತ್ತೆಯಾಗಿದೆ ಎಂದು ಹೇಳಿದರು.ಈ ರೀತಿಯ ನಕಲಿ ಮಾರ್ಕ್ಸ್ ಕಾರ್ಡ್ ಬಳಸ್ತಾ ಇದ್ರೆ ಅವರಿಗೆ ಸಂಕಷ್ಟ ಎದುರಾಗಲಿದೆ. ಇಂತಹ ಸಂಸ್ಥೆಗಳಿಂದ ದೂರ ಇರಬೇಕು’ ಎಂದು ಸಾರ್ವಜನಿಕರಲ್ಲಿ ಕಮೀಷನರ್ ಮನವಿ ಮಾಡಿದರು.
ಬೃಹತ್ ಜಾಲ ಪತ್ತೆ:
ರಾಜಾಜಿನಗರದ, ನ್ಯೂ ಕ್ವೆಸ್ಟ್ ಟೆಕ್ನಾಲಿಜಿಸ್, ಜೆಪಿನಗರದ ಸಿಸ್ಟಮ್ ಕ್ವೆಸ್ಟ್, ಭದ್ರಪ್ಪ ಲೇಔಟ್, ಆರೋಹಿ ಇನ್ಸ್ಟಿಟ್ಯೂಟ್ ದಾಸರಹಳ್ಳಿಯ ವಿಶ್ವಜ್ಯೋತಿ ಕಾಲೇಜ್, ಹಾಗೂ ವಿಜಯನಗರದ ಬೆನಕಾ ಕರೆಸ್ಪಾಂಡೆನ್ಸ್ ಕಾಲೇಜ್ ಮೇಲೆ ದಾಳಿ ಮಾಡಿದಾಗ ಸಿಸಿಬಿ ನ ಮಾರ್ಕ್ಸ್ ಕಾರ್ಡ್ ತಯಾರಿಸುತ್ತಿದ್ದ ಬೃಹತ್ ಜಾಲ ಪತ್ತೆ ಮಾಡಿತ್ತು.ಈ ವೇಳೆ ಕಂಪ್ಯೂಟರ್, ಲ್ಯಾಪಟಾಪ್ ಹಾಗೂ 13 ಮೊಬೈಲ್ ವಶಕ್ಕೆ ಪಡೆಯಲಾಗಿದೆ.