Latestದೇಶ-ವಿದೇಶ

ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ನಕಲಿ ಮಹಿಳಾ ಪೊಲೀಸ್ ಅಧಿಕಾರಿ ಕೊನೆಗೂ ಬಂಧನ, ಸಿಕ್ಕಿ ಬಿದ್ದದ್ದು ಹೇಗೆ..?

519

ನ್ಯೂಸ್‌ನಾಟೌಟ್‌:  ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಅಂತ ಹೇಳ್ಕೊಂಡು ರಾಜಸ್ಥಾನ ಪೊಲೀಸ್ ಅಕಾಡೆಮಿ ಟ್ರೈನಿಂಗ್‌ಗೆ ಹಾಜರಾಗಿ ಹಿರಿಯ ಅಧಿಕಾರಿಗಳೊಂದಿಗೆ ಫೋಟೋ ತೆಗೆಸಿಕೊಂಡು ತಾನು ಪೊಲೀಸ್‌ ಅಧಿಕಾರಿ ಅಂತಲೇ ಬಿಲ್ಡಪ್‌ ಕೊಡ್ತಿದ್ದ ಮಹಿಳೆಯೋರ್ವಳು ಇದೀಗ ತನ್ನ ಬಣ್ಣ ಬಯಲಾಗಿ ಸಿಕ್ಕಿಬಿದ್ದಿದ್ದಾಳೆ.

ಬಂಧಿತ ಆರೋಪಿ ಮಹಿಳೆಯನ್ನ ಮೋನಾ ಬುಗಾಲಿಯಾ (Mona Bugalia) ಅಲಿಯಾಸ್ ಮೂಲಿ ದೇವಿ ಎಂದು ಗುರುತಿಸಲಾಗಿದೆ. 2023ರಲ್ಲಿ ಈಕೆ ವಿರುದ್ಧ ದೂರು ದಾಖಲಾದ ಬಳಿಕ ಪರಾರಿಯಾಗಿದ್ದಳು. ಆದ್ರೆ ಈ ವಾರದ ಆರಂಭದಲ್ಲಿ ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ಆಕೆಯನ್ನ ಬಂಧಿಸಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸ್‌ ಮೂಲಗಳ ಪ್ರಕಾರ, ಮೋನಾ ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ (PSI Exam) ಅರ್ಹತೆಯನ್ನೇ ಗಳಿಸಿಲ್ಲ. ಆದರೂ ರಾಜಸ್ಥಾನ ಪೊಲೀಸ್ ಅಕಾಡೆಮಿ (RPA) ಪ್ರವೇಶಿಸಿ ತರಬೇತಿ ಪಡೆದುಕೊಂಡಿದ್ದಾಳೆ. ಆಕೆಯನ್ನು ಅರೆಸ್ಟ್‌ ಮಾಡಿದ ಬಳಿಕ ತಾನು ವಾಸವಿದ್ದ ಬಾಡಿಗೆ ಮನೆಯನ್ನ ಶೋಧಿಸಿದಾಗ ಹಲವು ಮಹತ್ವದ ದಾಖಲೆಗಳು ಪತ್ತೆಯಾಗಿವೆ. ಸುಮಾರು 7 ಲಕ್ಷ ರೂ. ನಗದು, ಮೂರು ಪ್ರತ್ಯೇಕ ಪೊಲೀಸ್‌ ಸಮವಸ್ತ್ರ ಹಾಗೂ ಹಲವಾರು ಪ್ರಶ್ನೆಪತ್ರಿಕೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದೇ ವೇಳೆ ಆಕೆ ಬಳಸಿದ್ದ ನಕಲಿ ದಾಖಲೆಗಳೂ ಪತ್ತೆಯಾದವು ಎಂದು ತಿಳಿಸಿದ್ದಾರೆ. 

ನಕಲಿ ದಾಖಲೆ ಸೃಷ್ಟಿ

ಮೋನಾ ಅಲಿಯಾಸ್‌ ಮೂಲಿ ದೇವಿ ರಾಜಸ್ಥಾನದ ನಾಗೌರ್ ಜಿಲ್ಲೆಯ ನಿಂಬಾಕೆಬಾಸ್ ಎಂಬ ಗ್ರಾಮದವಳು. ಆಕೆಯ ತಂದೆ ಟ್ರಕ್ ಚಾಲಕ. ಅಧಿಕೃತ ದಾಖಲೆಗಳಿಂದ ಆಕೆ ರಾಜಸ್ಥಾನದ ಸಬ್-ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆಯಲ್ಲಿ ಎಂದಿಗೂ ಉತ್ತೀರ್ಣಳಾಗಿಲ್ಲ ಅನ್ನೋದು ಗೊತ್ತಾಗಿದೆ. 2021ರಲ್ಲಿ ಪರೀಕ್ಷೆ ಬರೆದಿದ್ದಳು. ಆದ್ರೆ ಫೇಲ್‌ ಆಗಿದ್ದಳು, ಬಳಿಕ ʻಮೂಲಿ ದೇವಿʼ ಎಂಬ ಹೆಸರಿನಲ್ಲಿ ನಕಲಿ ದಾಖಲೆಗಳನ್ನ ಸೃಷ್ಟಿಸಿ ತಾನು ಸಬ್‌ ಇನ್ಸ್‌ಪೆಕ್ಟರ್‌ ಆಗಿ ಆಯ್ಕೆಯಾಗಿದ್ದೇನೆ ಅಂತ ತನ್ನ ಸೋಷಿಯಲ್‌ ಮೀಡಿಯಾಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಳು. 

ಸಿಕ್ಕಿಬಿದ್ದಿದ್ದು ಹೇಗೆ?
ಸಬ್-ಇನ್ಸ್‌ಪೆಕ್ಟರ್ ನೇಮಕಾತಿಗೆ ಪ್ರತ್ಯೇಕವಾಗಿ ಉದ್ದೇಶಿಸಲಾದ ವಾಟ್ಸಾಪ್ ಗ್ರೂಪ್‌ಗೆ ಸೇರಿಕೊಂಡಿದ್ದಾಳೆ. ತಾನು ಕ್ರೀಡಾಕೋಟದಲ್ಲಿ ಆಯ್ಕೆಯಾಗಿರುವುದಾಗಿ ರಾಜಸ್ಥಾನ ಪೊಲೀಸ್ ಅಕಾಡೆಮಿಯಲ್ಲಿ ತನ್ನನ್ನ ಪರಿಚಯಿಸಿಕೊಂಡಿದ್ದಳು. 2 ವರ್ಷಗಳ ಕಾಲ ಅಧಿಕೃತ ಸಮವಸ್ತ್ರ ಧರಿಸಿಯೇ ಆರ್‌ಪಿಎಯ ಪೆರೇಡ್ ಮೈದಾನದಲ್ಲಿ ಕಾಣಿಸಿಕೊಂಡಿದ್ದಳು. ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ ತನ್ನನ್ನ ತಾನು ಪ್ರಮೋಟ್‌ ಮಾಡಿಕೊಳ್ತಿದ್ದಳು. ಜೊತೆಗೆ ದೊಡ್ಡ ದೊಡ್ಡ ವೇದಿಕೆಗಳಲ್ಲಿ ಸ್ಫೂರ್ತಿದಾಯಕ ಭಾಷಣ ಬಿಗಿಯುತ್ತಾ, ಹಿರಿಯ ಅಧಿಕಾರಿಗಳೊಂದಿಗೆ ಪೋಸ್‌ ಕೊಟ್ಟು ಫೋಟೋಗಳನ್ನು ಹಂಚಿಕೊಂಡಿದ್ದಳು. ಈ ವೇಳೆ ಕೆಲ ಟ್ರೈನಿ ಪಿಎಸ್‌ಐಗಳು ಆಕೆಯ ಗುರುತಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ, ಆಂತರಿಕ ವಿಚಾರಣೆ ಶುರುಮಾಡಲು ಪ್ರಾರಂಭಿಸಿದ್ದರು. ಆ ಬಳಿಕ ಪರಾರಿಯಾಗಿದ್ದ ಮೋನಾ ವಾರದ ಹಿಂದೆಯಷ್ಟೇ ಸಿಕ್ಕಿಬಿದ್ದಿದ್ದಾಳೆ. ಪೊಲೀಸರ ವಿಚಾರಣೆ ವೇಳೆ ಆಕೆ ನಕಲಿ ಐಡಿ ಕಾರ್ಡ್‌, ದಾಖಲೆ ಸೃಷ್ಟಿಸಿರುವುದಾಗಿ ಒಪ್ಪಿಕೊಂಡಿದ್ದಾಳೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. 

Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget