Latestಕ್ರೈಂದೇಶ-ವಿದೇಶಬೆಂಗಳೂರುವೈರಲ್ ನ್ಯೂಸ್

ರೈಲಿನ ಟಾಯ್ಲೆಟ್‌ ನಲ್ಲಿ ಸಿಕ್ಕ ಖೋಟಾನೋಟುಗಳನ್ನು ಬದಲಾಯಿಸಲು ಬಂದಿದ್ದ ಆರೋಪಿಗಳು..! ಅವರ ಮನೆ ಹುಡುಕಿ ಪಶ್ಚಿಮ ಬಂಗಾಳಕ್ಕೆ ತೆರಳಿದ ಪೊಲೀಸರು..!

717

ನ್ಯೂಸ್ ನಾಟೌಟ್: ಬೆಂಗಳೂರಿನ ಆಡುಗೋಡಿಯ ಅಂಗಡಿಯೊಂದರಲ್ಲಿ ಖೋಟಾನೋಟು ನೀಡಿ ಅಕೌಂಟ್‌ ಗೆ ದುಡ್ಡು ಹಾಕಿಸಿಕೊಳ್ಳಲು ಬಂದು ಮೂವರು ಆರೋಪಿಗಳು ಪೊಲೀಸರ ಅತಿಥಿಯಾಗಿದ್ದರು. ಇದೀಗ ಪಶ್ಚಿಮ ಬಂಗಾಳಕ್ಕೆ ತೆರಳಿ ಆರೋಪಿಗಳ ಮನೆ ಪರಿಶೀಲಿಸಲು ರಾಜ್ಯದ ಪೊಲೀಸರು ಮುಂದಾಗಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಸುಮನ್, ಗುಲಾಮ್ ಹಾಗೂ ಆತನ ಸ್ನೇಹಿತ ಗುಹಾವಟಿ ಎಕ್ಸ್‌ ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಗಾರೆ ಕೆಲಸಕ್ಕಾಗಿ ಬರುತ್ತಿದ್ದಾಗ, ಸುಮನ್‌ ಗೆ ರೈಲಿನ ಟಾಯ್ಲೆಟ್‌ನಲ್ಲಿದ್ದ ಬ್ಯಾಗ್‌ನಲ್ಲಿ ನೋಟುಗಳ ರಾಶಿ ಕಂಡಿತ್ತು. ಕೂಡಲೇ ಆತ ಸ್ನೇಹಿತ ಗುಲಾಮ್‌ಗೆ ತೋರಿಸಿದ್ದ. ಬಳಿಕ ಬ್ಯಾಗ್‌ನ್ನು ಸೀದಾ ಬೆಂಗಳೂರಿಗೆ ತಂದಿದ್ದರು. ಬಳಿಕ ಆಡುಗೋಡಿಯ ಸುರೇಶ್ ಎನ್ನುವವರ ಅಂಗಡಿಗೆ ಹೋಗಿ 70 ಸಾವಿರ ರೂ. ನಕಲಿ ನೋಟುಗಳನ್ನ ಕೊಟ್ಟು, ಹಣಕ್ಕೆ ಕಮೀಷನ್ ಇಟ್ಕೊಂಡು ಅಕೌಂಟ್‌ಗೆ ಹಾಕುವಂತೆ ಕೇಳಿದ್ದರು.

ಇದನ್ನೂ ಓದಿ: ಆಟವಾಡುತ್ತಾ ಪುಟ್ಟ ಮಗುವಿನ ಮೇಲೆ ಗುಂಡು ಹಾರಿಸಿದ ಅಪ್ರಾಪ್ತ ಬಾಲಕ..! 3 ವರ್ಷದ ಮಗು ಸಾವು..! 

ಹಣ ಎಣಿಸುವಾಗ ನೋಟುಗಳ ಸೀರಿಯಲ್ ನಂಬರ್ ಒಂದೇ ರೀತಿಯಲ್ಲಿರುವುದನ್ನು ಗಮನಿಸಿದ ಅಂಗಡಿ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದ. ಆರೋಪಿಗಳ ವಿಚಾರಣೆ ವೇಳೆ ರೈಲಿನಲ್ಲಿ ಖೋಟಾನೋಟು ಸಿಕ್ಕಿರೋದು ಖಚಿತವಾಗಿದೆ. ಆದರೂ ಸಹ ಆರೋಪಿಗಳನ್ನು ಪಶ್ಚಿಮ ಬಂಗಾಳದ ಮನೆಗೆ ತೆರಳಿ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.

 

See also  ಸುಳ್ಯದ ಕಾವು ಬಳಿ ಟಿಟಿ ವ್ಯಾನ್ ಪಲ್ಟಿ..! ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget