ಕ್ರೈಂ

ಜಾಲತಾಣದಲ್ಲಿ ಕಿಡಿಗೇಡಿಗಳಿಂದ ಕೊರಗಜ್ಜ, ಶಿವಾಜಿ, ಚೈತ್ರಾ ಕುಂದಾಪುರಗೆ ಅಶ್ಲೀಲ ನಿಂದನೆ

ಮಂಗಳೂರು: ತುಳುವರ ಆರಾಧ್ಯ ದೈವ ಕೊರಗಜ್ಜನನ್ನು ಹಾಗೂ ಹಿಂದೂ ಪರ ಭಾಷಣಗಾರ್ತಿ ಚೈತ್ರಾ ಕುಂದಾಪುರ ಅವರನ್ನು ಅಶ್ಲೀಲವಾಗಿ ನಿಂದಿಸುವ ಮೂಲಕ ಇನ್ಸ್ಟಾಗ್ರಾಂ ಪೇಜ್‌ ನಲ್ಲಿ ಅವಮಾನ ಮಾಡಿರುವ ಘಟನೆ ನಡೆದಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಟಾರ್ಗೆಟ್ ಹಿಂದೂಸ್’ ಎಂಬ ಪ್ರೊಫೈಲ್ ಫೋಟೋ ಇಟ್ಟು sula-tuluver ಎಂಬ ಹೆಸರಲ್ಲಿ ಇನ್ಸ್ಟಾಗ್ರಾಂನಲ್ಲಿ ಖಾತೆ ತೆರೆಯಲಾಗಿದೆ. ಇದರ ಡಿಸ್ಕ್ರಿಪ್ಷನ್ ನಲ್ಲಿ ತುಳು ಅಪ್ಪೆ ಹಾಗೂ ಕೊರಗಜ್ಜನಿಗೆ ತೀರಾ ತುಚ್ಚ ರೀತಿಯಲ್ಲಿ ನಿಂದಿಸಲಾಗಿದೆ. ಅಲ್ಲದೆ ಮೊನ್ನೆ ಸುರತ್ಕಲ್ ನಲ್ಲಿ ಭಾಷಣ ಮಾಡಿದ್ದ ಚೈತ್ರಾ ಕುಂದಾಪುರ ಅವರ ಭಾಷಣದ ವಿಡಿಯೋದ ಆಡಿಯೋವನ್ನು ಮ್ಯೂಟ್ ಮಾಡಿಕೊಂಡು ಅದರ ಬದಲಿಗೆ ಬ್ಯಾರಿ ಭಾಷೆಯಲ್ಲಿ ಅಶ್ಲೀಲದ ಆಡಿಯೋ ಅಟ್ಯಾಚ್ ಮಾಡಿ ನಿಂದಿಸಲಾಗಿದೆ. ಶಿವಾಜಿ ಮಹಾರಾಜರ ಫೋಟೋವನ್ನಿಟ್ಟುಕೊಂಡು ಅವರಿಗೂ ಅವಮಾನ ಮಾಡಲಾಗಿದ್ದಲ್ಲದೆ ನಾಯಿಯೊಂದು ಅವರ ಮುಖಕ್ಕೆ ಮೂತ್ರ ಮಾಡುವಂತೆ ಚಿತ್ರಿಸಲಾಗಿದೆ. ಅದಲ್ಲದೆ ಪ್ರಮೋದ್ ಮುತಾಲಿಕರ ಭಾಷಣದ ಮಾಡಿದ ನ್ಯೂಸ್‌ ಸ್ಕ್ರೀನ್ ಶಾಟ್ ಬಳಸಿಕೊಂಡು ಅವರನ್ನೂ ನಿಂದಿಸಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದ್ದು, ಜಿಲ್ಲೆಯ ಜನತೆಯ ಕೋಮು ಸೌಹಾರ್ದತೆಯನ್ನು ಕೆಡಿಸುವ ಹುನ್ನಾರ ಎಂಬ ಆರೋಪ ಕೇಳಿಬಂದಿದೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇನ್ಸ್ಟಾಗ್ರಾಮ್ ಖಾತೆ ಸೃಷ್ಟಿಸಿದ ದುಷ್ಕರ್ಮಿಗಳ ವಿರುದ್ಧ ಸ್ವಯಂ ಪ್ರೇರಿತ ಕೇಸ್ ದಾಖಲಿಸಿ ಆರೋಪಿಗಳನ್ನು ಬಂಧಿಸುವಂತೆ ಆಗ್ರಹ ಕೇಳಿಬಂದಿದೆ.

Related posts

ಮಡಿಕೇರಿ: ಮೀನಾ ಪ್ರಕರಣದ ವಿಚಾರಣೆಗೆ ವಿಶೇಷ ಕೋರ್ಟ್ ಸ್ಥಾಪನೆ, ಕ್ರೂರಿಯಿಂದ ರುಂಡ ಕತ್ತರಿಸಲ್ಪಟ್ಟು ಸಾವಿಗೀಡಾದ ಬಾಲಕಿ ಮನೆಗೆ ಗೃಹ ಸಚಿವರ ಭೇಟಿ, ಹೇಳಿಕೆ

ಹಾಸ್ಟೆಲ್‌ನದ್ದ ಅಪ್ರಾಪ್ತೆಗೆ ಗಂಡು ಮಗು..! ಓದುತ್ತಲೇ ತಾಯಿಯಾದ 9ನೇ ತರಗತಿ ವಿದ್ಯಾರ್ಥಿನಿ! ಇಲ್ಲಿದೆ ಸಂಪೂರ್ಣ ಕಹಾನಿ

ಪತ್ರಕರ್ತನ ಮೇಲೆ ಗುಂಡಿನ ದಾಳಿ! ಮೂತ್ರಪಿಂಡದ ಮೇಲ್ಭಾಗದಲ್ಲಿ ಸಿಲುಕಿದ ಗುಂಡು! ಹಲ್ಲೆಯ ಹಿಂದಿದೆಯಾ ನಿಗೂಢ ಕಾರಣ?