ನ್ಯೂಸ್ ನಾಟೌಟ್ : ತನ್ನ 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಪಾಕ್ ಮಹಿಳೆ ಸೀಮಾ ಹೈದರ್ ಹಾಗೂ ಭಾರತದ ಸಚಿನ್ ಮೀನಾ ಇಬ್ಬರೂ ಒಟ್ಟಿಗೆ ತುಂಬಾ ಚೆನ್ನಾಗಿ ಜೀವನ ನಡೆಸುತ್ತಿದ್ದರು.ಈ ಮಧ್ಯೆ ಸಚಿನ್ ದುರಂತ ಅಂತ್ಯ ಕಂಡಿದ್ದಾನೆ ಎನ್ನುವ ವಿಡಿಯೋವೊಂದು ಭಾರಿ ವೈರಲ್ ಆಗಿದೆ.ಹಾಗಾದರೆ ವೈರಲ್ ಆದ ಸುದ್ದಿಯ ಸತ್ಯಾಸತ್ಯತೆ ಏನು ಎಂಬುದರ ಮಾಹಿತಿ ಇಲ್ಲಿದೆ ನೋಡಿ..
ಸೀಮಾ ಹೈದರ್ ಮತ್ತು ಸಚಿನ್ ಮೀನಾ ಕಳೆದ ಕೆಲವು ದಿನಗಳಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಸೀಮಾಳ ಗಂಡ ಸಚಿನ್ ರವರವರನ್ನು ಯಾರೋ ಮುಗಿಸಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಹಾಗಾದರೆ ಈ ಸುದ್ದಿ ನಿಜವೋ, ಸುಳ್ಳೋ? ಈ ಪ್ರಕರಣದ ಹಿಂದಿನ ರಹಸ್ಯವೇನು…ಫೇಸ್ ಬುಕ್ ನಲ್ಲಿ ಬಿಡುಗಡೆಗೊಂಡ ವಿಡಿಯೋ ಕ್ಯಾಪ್ಷನ್ ಸಹ ಜನರಲ್ಲಿ ಕುತೂಹಲವನ್ನು ಕೆರಳಿಸಿದೆ. ಇಂಗ್ಲೀಷ್‌ನಲ್ಲಿ ಟೈಟ್‌ಲ್ ಹಾಕಿರುವ ಈ ವಿಡಿಯೋ ಕುರಿತಾಗಿ ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆಯೂ ಕೂಡ ಜಾಲತಾಣದಲ್ಲಿ ವೈರಲ್ ಆಗಿದೆ.ಅಷ್ಟಕ್ಕೂ ಈ ವಿಡಿಯೋನ ನಿಜವಾದ ರಹಸ್ಯ ಇಲ್ಲಿದೆ. ಸೀಮಾಳ ಗಂಡ ಸಚಿನ್ ಜೀವಂತವಾಗಿದ್ದು, ಆ ವಿಡಿಯೋ ಫೇಕ್ ಎಂದು ಮೂಲಗಳು ತಿಳಿಸಿವೆ. 20 ಗಂಟೆಗಳ ಹಿಂದೆ ವಿಡಿಯೋ ಹಂಚಿಕೊಳ್ಳಲಾಗಿದ್ದು, ಇಲ್ಲಿಯವರೆಗೆ 7 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಈ ವಿಡಿಯೋ ಸಂಪೂರ್ಣ ಫೇಕ್. ಇದು ನಡೆದಿಲ್ಲ ಎಂಬುದು ಇದೀಗ ಬೆಳಕಿಗೆ ಬಂದಿದೆ. ಸಚಿನ್ ಮೀನಾ ಸಂಪೂರ್ಣ ಸುರಕ್ಷಿತವಾಗಿದ್ದು ಮನೆಯಲ್ಲಿದ್ದಾರೆ. ಯಾವುದೇ ಸುದ್ದಿ ವಾಹಿನಿಯಾಗಲಿ, ಮಾಧ್ಯಮವಾಗಲಿ ಈ ಸುದ್ದಿಯನ್ನು ಪ್ರಸಾರ ಮಾಡಿಲ್ಲ. ಜನರನ್ನು ದಾರಿತಪ್ಪಿಸಲು ಇಂತಹ ದಾರಿ ತಪ್ಪಿಸುವ ವಿಡಿಯೋಗಳನ್ನು ಮಾಡಲಾಗಿದೆ.