ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಫೇಸ್‌ಬುಕ್ ಗೆಳತಿಯನ್ನು ಅಮೆರಿಕದಿಂದ ಭಾರತಕ್ಕೆ ಕರೆಸಿಕೊಂಡು ರೇಪ್..? ವಕೀಲನ ವಿರುದ್ಧ ಎಫ್.ಐ.ಆರ್..!

240

ನ್ಯೂಸ್ ನಾಟೌಟ್: ಆಕೆ ಅಮೆರಿಕದ ಫ್ಲೋರಿಡಾ ರಾಜ್ಯದ 45 ವರ್ಷದ ಮಹಿಳೆ ಜೊತೆ ರಾಜಸ್ಥಾನ ರಾಜ್ಯದ ಅಜ್ಮೇರ್ ನಗರದ ವ್ಯಕ್ತಿ ಮಾನವ್ ಸಿಂಗ್ ರಾಥೋಡ್ ಎಂಬಾತ ಫೇಸ್‌ಬುಕ್ ಮೂಲಕ ಗೆಳೆತನ ಮಾಡಿಕೊಂಡಿದ್ದ ಎನ್ನಲಾಗಿದೆ. ವೃತ್ತಿಯಲ್ಲಿ ವಕೀಲನಾಗಿದ್ದ ರಾಥೋಡ್ ಆಕೆಯನ್ನು ಪ್ರೀತಿಯ ಬಲೆಗೆ ಬೀಳಿಸಿ ನೀಚ ಕೃತ್ಯ ಎಸಗಿದ್ದಾನೆ.

ಮಾನವ್ ಸಿಂಗ್ ರಾಥೋಡ್‌ನ ಪ್ರೀತಿಯ ಬಲೆಗೆ ಬಿದ್ದ ಅಮೆರಿಕ ಮಹಿಳೆ ಆತನ ಆಹ್ವಾನದ ಮೇರೆಗೆ ಭಾರತಕ್ಕೆ ಬಂದಿದ್ದಳು. ಇದೇ ವರ್ಷ 2024ರ ಏಪ್ರಿಲ್‌ನಲ್ಲಿ ಭಾರತಕ್ಕೆ ಬಂದಿದ್ದ ಆಕೆಯನ್ನು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬರ ಮಾಡಿಕೊಂಡಿದ್ದ ರಾಥೋಡ್, ನೇರವಾಗಿ ರಾಜಸ್ಥಾನದ ಜೈಪುರಕ್ಕೆ ಕರೆದೊಯ್ದಿದ್ದ. ಐಷಾರಾಮಿ ಹೋಟೆಲ್‌ಗಳಲ್ಲಿ ಆಕೆಯ ಜೊತೆ ತಂದಿದ್ದ ರಾಥೋಡ್, ತಾನು ಅವಿವಾಹಿತ ಎಂದು ಹೇಳಿಕೊಂಡಿದ್ದ. ನಿನ್ನನ್ನು ಪ್ರೀತಿಸುತ್ತಿದ್ದೇನೆ, ಮದುವೆ ಆಗುತ್ತೇನೆ ಎಂದು ನಂಬಿಸಿದ. ಇವರಿಬ್ಬರ ನಡುವೆ ದೈಹಿಕ ಸಂಬಂಧವೂ ಏರ್ಪಟ್ಟಿತ್ತು.

ಬಳಿಕ ಜೈಪುರಕ್ಕೆ ಕರೆದೊಯ್ದ ರಾಥೋಡ್, ಅಲ್ಲಿಯೂ ಐಷಾರಾಮಿ ಹೋಟೆಲ್‌ಗಳಲ್ಲಿ ಆಕೆಯ ಜೊತೆ ವೈಯಕ್ತಿಕ ಕ್ಷಣಗಳನ್ನ ಕಳೆದಿದ್ದ ಎನ್ನಲಾಗಿದೆ. ಹಲವು ತಿಂಗಳ ಕಾಲ ಭಾರತದಲ್ಲಿಯೇ ಹಲವೆಡೆ ರಾಥೋಡ್‌ ಜೊತೆ ಸುತ್ತಾಡಿದ್ದ ಅಮೆರಿಕ ಮಹಿಳೆ, ಜುಲೈ ತಿಂಗಳ ಹೊತ್ತಿಗೆ ತನ್ನನ್ನು ಆದಷ್ಟು ಬೇಗ ಮದುವೆ ಆಗು ಎಂದು ಒತ್ತಾಯಿಸಿದಳು. ಆಕೆಯ ಒತ್ತಡಕ್ಕೆ ಮಣಿದ ರಾಥೋಡ್, ರಾಜಸ್ಥಾನದ ಅಜ್ಮೇರ್‌ನ ದೇಗುಲ ಒಂದರಲ್ಲಿ ನಕಲಿ ಮದುವೆ ಕಾರ್ಯಕ್ರಮ ಏರ್ಪಡಿಸಿದ್ದ. ಕೆಲವೇ ಕೆಲವು ಜನರು ಈ ಮದುವೆಯಲ್ಲಿ ಭಾಗಿಯಾಗಿದ್ದರು. ಆತನ ಹೆತ್ತವರೇ ಮದುವೆಗೆ ಬಂದಿರಲಿಲ್ಲ! ಆಗಲೇ ಆಕೆಗೆ ರಾಥೋಡ್‌ನ ಮೇಲೆ ಅನುಮಾನ ಬಂದಿತ್ತು ಎನ್ನಲಾಗಿದೆ. ನನ್ನನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗು ಎಂದು ಅಮೆರಿಕ ಮಹಿಳೆ ಒತ್ತಾಯಿಸಲು ಆರಂಭಿಸಿದಳು. ಆದರೆ ಪ್ರತಿ ಬಾರಿ ರಾಥೋಡ್ ಏನೋ ಒಂದು ನೆಪ ಹೇಳಿ ತಳ್ಳಿ ಹಾಕುತ್ತಿದ್ದ.

ಆದರೆ, ಆಕೆ ಈ ಕುರಿತಾಗಿ ತನಿಖೆ ಆರಂಭಿಸಿದಳು. ಆಗ ಆಕೆಗೆ ಶಾಕಿಂಗ್ ಸತ್ಯ ಕಾದಿತ್ತು. ರಾಥೋಡ್ ಅದಾಗಲೇ ಮದುವೆಯಾಗಿದ್ದಾನೆ. ಆತನಿಗೆ ಮಕ್ಕಳೂ ಇವೆ ಎಂಬ ಸತ್ಯ ಬಯಲಾಗಿತ್ತು. ಕೂಡಲೇ ಆಕೆ ಅಜ್ಮೇರ್‌ನ ಬುಂದಿ ಪೊಲೀಸ್ ಠಾಣೆಗೆ ತೆರಳಿ ತನ್ನನ್ನು ಮದುವೆಯಾಗುವ ಆಮಿಷ ಒಡ್ಡಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ರಾಥೋಡ್ ವಿರುದ್ಧ ದೂರು ದಾಖಲಿಸಿದರು. ಇದೀಗ ರಾಥೋಡ್ ವಿರುದ್ಧ ಶೂನ್ಯ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಆತನ ಹುಡುಕಾಟ ನಡೆಸುತ್ತಿದ್ದಾರೆ.

See also  ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಮಾಜಿ ಎಂ.ಎಲ್.​ಸಿ ಯ ಸಂಬಂಧಿಯಿಂದ ಗುಂಡಿನ ದಾಳಿ..! ಕಲ್ಲು ಕ್ವಾರಿ​ಗೆ ರಸ್ತೆ ನಿರ್ಮಾಣ ವಿರೋಧಿಸಿ ಪ್ರತಿಭಟಿಸುತ್ತಿದ್ದ ಸ್ಥಳೀಯರು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget