ಕ್ರೈಂ

ವಿವಾಹಿತೆಯನ್ನು ಮತಾಂತರಗೊಳಿಸಿ ಮದುವೆಯಾದ ಯುವಕನ ಬಂಧನ..! ಫೇಸ್‌ಬುಕ್‌ನಲ್ಲಾದ ಪರಿಚಯ ಮದುವೆ ತನಕ ಹೋಗಿದ್ದು ಹೇಗೆ?

222

ನ್ಯೂಸ್ ನಾಟೌಟ್ :ವಿವಾಹಿತ ಮಹಿಳೆಯನ್ನು ಯುವಕನೋರ್ವ ಓಡಿಸಿಕೊಂಡು ಹೋಗಿ ಬಳಿಕ ಮತಾಂತರಗೊಳಿಸಿ ಮದುವೆಯಾದ ಘಟನೆ ವರದಿಯಾಗಿದೆ. ಇವರಿಬ್ಬರಿಗೆ ಫೇಸ್ ಬುಕ್ ನಲ್ಲಿ ಪರಿಚಯವಾಗಿತ್ತು ಎನ್ನಲಾಗಿತ್ತು.ಬಳಿಕ ಇವರಿಬ್ಬರ ನಡುವೆ ಚಾಟ್ ಮುಂದುವರಿದಿತ್ತು ಎನ್ನಲಾಗಿದೆ.

ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಲಕ್ಷ್ಮೀ ವಿವಾಹಿತ ಮಹಿಳೆ. ಸಿಸ್ವಾನ್ ಗ್ರಾಮದ ನಿವಾಸಿ ಸಜಾವುಲ್ಲಾ ಆಕೆಯನ್ನು ಮತಾಂತರಗೊಳಿಸಿ ಮದುವೆಯಾದ ಯುವಕನೆಂದು ತಿಳಿದು ಬಂದಿದೆ. ಲಕ್ಷ್ಮೀ ಕಳೆದ 4 ವರ್ಷದ ಹಿಂದೆ ಶೈಲೇಶ್ ಕುಮಾರ್ ಎಂಬುವವರನ್ನು ಮದುವೆಯಾಗದ್ದರು. ಅದೇ ವರ್ಷದಲ್ಲಿ 55 ಸಾವಿರ ನಗದು ಹಾಗೂ ಚಿನ್ನಾಭರಣದೊಂದಿಗೆ ಲಕ್ಷ್ಮೀ ಮನೆ ಬಿಟ್ಟು ಪರಾರಿಯಾಗಿದ್ದಾರೆ. ಮನೆಯವರು ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆ ನಡೆದು ಎರಡು ದಿನದ ಬಳಿಕ ಲಕ್ಷ್ಮೀಗೆ ಫೇಸ್ ಬುಕ್ ನಲ್ಲಿ ಯುವಕನೋರ್ವನ ಜತೆ ಪರಿಚಯವಾಗಿದೆ ಎಂಬ ವಿಚಾರ ತಿಳಿದು ಬಂದಿದೆ. ಸಜಾವುಲ್ಲಾ ಅವರೊಂದಿಗೆ ಮುಂಬಯಿಗೆ ಹೋಗಿರುವುದು ಕೂಡ ತಿಳಿದು ಬಂದಿದೆ. ಲಕ್ಷ್ಮೀ ಗಂಡ ಶೈಲೇಶ್ ಕುಮಾರ್ ಈ ಬಗ್ಗೆ ಲಕ್ಷ್ಮೀ ಸಂಬಂಧಿಯೊಬ್ಬರ ಬಳಿ ಕೇಳಿದಾಗ ಫೇಸ್ ಬುಕ್ ನಲ್ಲಿ ಲಕ್ಷ್ಮೀ ಸಜಾವುಲ್ಲಾನೊಂದಿಗೆ ಚಾಟ್ ಮಾಡುತ್ತಿದ್ದಳು ವಿಚಾರ ಬಹಿರಂಗಗೊಂಡಿದೆ. ಕೆಲವೊಮ್ಮೆ ಫೋನ್ ನಲ್ಲೂ ಮಾತನಾಡುತ್ತಿದ್ದಳು ಎಂದು ಅವರು ತಿಳಿಸಿದ್ದಾರೆ. ಮುಂಬಯಿಗೆ ತೆರಳಿದ ಬಳಿಕ ಲಕ್ಷ್ಮೀ ಹೆಸರು ʼಮುಸ್ಕಾನ್ʼ ಎಂದು ಮಾಡಿ ಆಕೆಯನ್ನು ಮತಾಂತರ ಮಾಡಲಾಗಿದ್ದು, ಆ ಬಳಿಕ ಆಕೆಯೊಂದಿಗೆ ಸಜಾವುಲ್ಲಾ ವಿವಾಹವಾಗಿದ್ದಾನೆ ಎಂಬ ವಿಚಾರ ತಿಳಿದು ಬಂದಿದೆ. ಲಕ್ಷ್ಮೀಯ ಕುಟುಂಬಸ್ಥರು ಮುಂಬಯಿಗೆ ತೆರಳಿ ಮಾತುಕತೆ ನಡೆಸಿ, ಲಕ್ಷ್ಮೀಯನ್ನು ಮತ್ತೆ ಮನೆಗೆ ಕರೆ ತಂದಿದ್ದಾರೆ.

ಮುಂಬೈಗೆ ಕರೆದೊಯ್ಯುವ ಮೊದಲು ಲಕ್ಷ್ಮಿ ತನ್ನ ಚಿಕ್ಕಪ್ಪನನ್ನು ಸಂಪರ್ಕಿಸಿದ್ದಳು. ತನ್ನನ್ನು ಬಲವಂತವಾಗಿ ಮುಂಬೈಗೆ ಕರೆದೊಯ್ದು ಬಿಡಲು ಬಯಸಿರುವುದಾಗಿ ಲಕ್ಷ್ಮಿ ತನ್ನ ಚಿಕ್ಕಪ್ಪನಿಗೆ ತಿಳಿಸಿದ್ದಾಳೆ. ಬಳಿಕ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ಮಾಧ್ಯಮವೊಂದಕ್ಕೆ ಶೈಲೇಶ್ ಹೇಳಿದ್ದಾರೆ. ಐಪಿಸಿಯ ಸೆಕ್ಷನ್ 504 ಮತ್ತು 506, ಎಸ್ಸಿ/ಎಸ್ಟಿ ಕಾಯ್ದೆ ಮತ್ತು ಉತ್ತರ ಪ್ರದೇಶದ ಮತಾಂತರ ವಿರೋಧಿ ಕಾನೂನಿನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಆರೋಪಿ ಸಜಾವುಲ್ಲಾ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಸಿದ್ಧಾರ್ಥನಗರದ ಉಪ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

See also  ಕಾಲೇಜು ಸಮೀಪದ ಪಬ್ ನಲ್ಲಿ ಯುವತಿಗಾಗಿ ಗುಂಪುಗಳ ನಡುವೆ ಹೊಡೆದಾಟ..! ಕೇರಳದ ಇಬ್ಬರು ಸೇರಿ ಮೂವರು ಅರೆಸ್ಟ್..!
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget