ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಎಕ್ಸ್‌ ಪ್ರೆಸ್‌ ಪ್ಯಾಸೆಂಜರ್ ರೈಲ್ ಗೆ ಗೂಡ್ಸ್ ರೈಲು ಡಿಕ್ಕಿ..! 15 ಮಂದಿ ಸಾವು, 60 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ..!

172

ನ್ಯೂಸ್ ನಾಟೌಟ್: ಗೂಡ್ಸ್ ರೈಲೊಂದು ಎಕ್ಸ್‌ಪ್ರೆಸ್ ರೈಲಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ 15 ಜನ ಸಾವನ್ನಪ್ಪಿದ್ದು, 60 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಸೋಮವಾರ(ಜೂ.17) ನಡೆದಿದೆ.

ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ರೈಲು ಅಸ್ಸಾಂನ ಸಿಲ್ಚಾರ್‌ನಿಂದ ಕೋಲ್ಕತ್ತಾದ ಸೀಲ್ದಾಗೆ ಚಲಿಸುತ್ತಿತ್ತು. ಈ ವೇಳೆ ನ್ಯೂ ಜಲ್ಪೈಗುರಿ ಸಮೀಪದ ರಂಗಪಾಣಿ ಎಂಬ ನಿಲ್ದಾಣದ ಬಳಿ ಗೂಡ್ಸ್ ರೈಲು ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳು ಹಳಿತಪ್ಪಿವೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ವೈದ್ಯರು ಮತ್ತು ವಿಪತ್ತು ನಿರ್ವಹಣಾ ತಂಡಗಳನ್ನು ರವಾನಿಸಲಾಗಿದೆ ಎಂದು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಹಿತಿ ನೀಡಿದ್ದಾರೆ.

Click 👇

https://newsnotout.com/2024/06/venkateshwara-temple-tirupati-crowd-by-leaves
https://newsnotout.com/2024/06/darshan-fans-issue-electric-device-kannada-news
https://newsnotout.com/2024/06/uppendra-real-star-kannada-news-darshan-video
See also  ಹೆಂಡತಿಯ ಎದುರೇ ಗಂಡನ ಶಿರಚ್ಛೇದ ಮಾಡಿ ತಲೆ ತೆಗೆದುಕೊಂಡು ಪರಾರಿ..! ದೇವಸ್ಥಾನದ ಬಳಿ ರುಂಡ ಪತ್ತೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget