Latest

ವಿದೇಶದ ಈ ಭಾಗದಲ್ಲಿಯೂ ನಡೆಯುತ್ತೆ3000 ವರ್ಷಗಳ ಇತಿಹಾಸವಿರುವ ‘ಪ್ರೇತ ವಿವಾಹ’!! ಇಲ್ಲಿನ ಯುವತಿಯರಿಗೆ ಶವದ ಜತೆ ಮದುವೆ?!

455

ನ್ಯೂಸ್‌ ನಾಟೌಟ್:ವಿವಾಹ ಅಂದರೆ ಅಲ್ಲೇನೋ ಸಂಭ್ರಮ, ಸಡಗರ. ಸಾವಿರಾರು ಮಂದಿ ಬಂದು ವಧು ವರರನ್ನು ಹರಸಿ ಶುಭಾಶಯ ಕೋರುತ್ತಾರೆ.ಆದರೆ ಚೀನಾದಲ್ಲಿ ಒಂದು ವಿಚಿತ್ರವಾದ ಮದುವೆ ಸಂಪ್ರದಾಯವಿದೆ ಅದನ್ನು ಪ್ರೇತ ವಿವಾಹ ಅಥವಾ ಘೋಸ್ಟ್ ಮ್ಯಾರೇಜ್ ಎಂದು ಕರೆಯಲಾಗುತ್ತದೆ. ಈ ಪದ್ಧತಿ ಇಂದಿಗೂ ಆಚರಿಸಿಕೊಂಡು ಹೋಗಲಾಗುತ್ತಿದೆ.ಚೀನಾದಲ್ಲಿ ಸುಮಾರು ಮೂರು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ಪ್ರೇತ ವಿವಾಹ ಪದ್ಧತಿ ಇಂದಿಗೂ ಕೂಡ ಚಾಲ್ತಿಯಲ್ಲಿದೆ ಅನ್ನೋದು ವಿಶೇಷ.

ಈ ಸಂಪ್ರದಾಯ ಈಗಲೂ ಕೂಡ ಚೀನಾದ ಗ್ರಾಮೀಣ ಪ್ರದೇಶಗಳಲ್ಲಿ ಆಚರಣೆಯಲ್ಲಿದ್ದು ಮುಖ್ಯವಾಗಿ ಮೃತ ಪುರುಷನೊಂದಿಗೆ ಅಥವಾ ಮಹಿಳೆಯೊಂದಿಗೆ ಜೀವಂತ ವ್ಯಕ್ತಿಯ ಮದುವೆ ಮಾಡಿಸುವುದು ಆಗಿದೆ. ಚೀನಾದ ಪುರಾತನ ನಂಬಿಕೆಗಳ ಪ್ರಕಾರ, ಒಬ್ಬ ವ್ಯಕ್ತಿಯ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಈ ಪದ್ಧತಿಯನ್ನು ಅನುಸರಿಸಲೇ ಬೇಕು. ವಿವಾಹವಾಗದೆ ವ್ಯಕ್ತಿಯೊಬ್ಬ ಸಾವನ್ನಪ್ಪಿದರೆ ಅದನ್ನು ಅಪಶಕುನದಂತೆ ಪರಿಗಣಿಸಲಾಗುತ್ತದೆ. ಈ ಕಾರಣದಿಂದ ಮೃತವ್ಯಕ್ತಿಯ ಮರಣದ ಬಳಿಕ ಕುಟುಂಬಸ್ಥರು ಮದುವೆ ಮಾಡುವ ಆಚರಣೆಯನ್ನು ಹೊಂದಿದ್ದಾರೆ. ಈ ಪ್ರೇತ ವಿವಾಹ ಒಂದು ನಂಬಿಕೆಯನ್ನು ಹೊಂದಿದ್ದು, ಮೃತ ವ್ಯಕ್ತಿ ಬ್ರಹ್ಮಚಾರಿಯಾಗಿದ್ದರೆ ಆತನ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಜೀವಂತವಿರುವ ಮಹಿಳೆಯೊಂದಿಗೆ ಅಥವಾ ಪುರುಷನೊಂದಿಗೆ ಮದುವೆ ಮಾಡಲೇಬೇಕು.

ಆತ್ಮಗಳು ಸಂತೋಷದಿಂದಿರಲು, ಕುಟುಂಬಗಳ ಮೇಲೆ ಯಾವುದೇ ರೀತಿಯ ನೆಗೆಟಿವ್ ಎನರ್ಜಿ ಬರದಂತೆ ಇರಲು ಚೀನಾದ ಜನರು ಪದ್ಧತಿಯನ್ನು ಪಾಲಿಸಿಕೊಂಡು ಕೊಂಡು ಬಂದಿದ್ದಾರೆ .ಈ ಪದ್ಧತಿಯಲ್ಲಿ ಮೃತ ವ್ಯಕ್ತಿಯ ಕುಟುಂಬಸ್ಥರು ಮದುವೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಾರೆ. ಮದುವೆ ಉಡುಪು, ಛಾಯಾಚಿತ್ರ ಹಾಗೂ ಮದುವೆಗೆ ಊಟ ಸೇರಿದಂತೆ ಎಲ್ಲದ್ದಕ್ಕೂ ಕೂಡ ಅಣಿ ಮಾಡಲಾಗುತ್ತದೆ. ಮದುವೆ ಬಳಿಕ ಮೃತ ವ್ಯಕ್ತಿಯ ಜೀವನದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತವೆ ಮತ್ತು ಅವರು ಸಮಾಜದಿಂದ ದೂರವಾಗುತ್ತಾರೆ ಎಂಬ ನಂಬಿಕೆಇದೆ.ಈ ಸಂಪ್ರದಾಯ ಹಲವು ಚರ್ಚೆಗಳಿಗೆ ಆಸ್ಪದ ನೀಡಿದ್ದು, ಆಧ್ಯಾತ್ಮಿಕ ನಂಬಿಕೆಯ ಭಾಗವಾಗಿ ಇದನ್ನು ಹಲವರು ಅನುಸರಿಸುತ್ತಾರೆ. ಆದರೆ ಇನ್ನೂ ಕೆಲವರು ಮಾನವ ಹಕ್ಕುಗಳ ಉಲ್ಲಂಘನೆ ಯಾಗುತ್ತದೆ ಎಂತಲೂ ಪರಿಗಣಿಸುತ್ತಾರೆ. ಚೀನಾ ಸರ್ಕಾರ ಈಗಾಗಲೇ ಈ ಸಂಪ್ರದಾಯವನ್ನು ನಿಷೇಧಿಸಲು ಕ್ರಮಗಳನ್ನು ಕೈಗೊಂಡಿದ್ದರೂ ಕೂಡ ಹಲವು ಕಡೆಗಳಲ್ಲಿ ಈ ಪದ್ಧತಿ ಮುಂದುವರೆದುಕೊಂಡು ಬಂದಿದೆ.

ಇದರಿಂದ ಕೆಲವರು ಹಲವು ರೀತಿಯ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವರು ಮೃತ ಮಹಿಳೆಯರ ದೇಹಗಳನ್ನು ಕಳ್ಳ ಸಾಗಣೆ ಮಾಡುವುದು ಮತ್ತು ವಿವಾಹಕ್ಕಾಗಿ ತಮ್ಮ ಪತ್ನಿಯ ಮೃತ ದೇಹವನ್ನು ಲಕ್ಷಾಂತರ ರೂಪಾಯಿಗಳಿಗೆ ಮಾರಾಟ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಈ ಸಂಪ್ರದಾಯ ಗುಪ್ತವಾಗಿ ನಡೆಯುತ್ತಿದೆ.ಈ ಪದ್ಧತಿ ಹಿನ್ನಲೆಯಲ್ಲಿ ಯುವತಿಯರನ್ನು ಬಲವಂತವಾಗಿ ಮದುವೆಗೆ ಒತ್ತಾಯಿಸುವ ಘಟನೆಗಳು ಕೇಳಿ ಬಂದಿವೆ. ಅಲ್ಲದೆ ಇದು ಯುವತಿಯ ಕುಟುಂಬದ ಮೇಲೆ ಮಾನಸಿಕ ಹಾಗೂ ಆರ್ಥಿಕ ಒತ್ತಡವನ್ನು ಬೀರುತ್ತದೆ.ಈ ಸಂಪ್ರದಾಯ ಯುವ ತಲೆಮಾರುಗಳಿಗೆ ಪ್ರಶ್ನೆಯುಂಟು ಮಾಡಿದ್ದು, ಸವಾಲಾಗಿ ಪರಿಣಮಿಸಿದೆ. ಇತ್ತೀಚಿನ ದಿನಗಳಲ್ಲಿ ಈ ಪ್ರಯತ್ನ ವಿವಾಹ ಆಚರಣೆಯ ಸಂಖ್ಯೆಗಳಲ್ಲಿ ಕುಸಿತವನ್ನು ಕಂಡಿದ್ದು ಒಳ್ಳೆಯ ಸಂಗತಿ.

  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget