Uncategorized

ಮಾಜಿ ಸಿಎಂ ಸಿದ್ದರಾಮಯ್ಯಗೆ ಮೂಲವ್ಯಾಧಿ, ಆಸ್ಪತ್ರೆಯಲ್ಲಿ ತಪಾಸಣೆ

ನ್ಯೂಸ್ ನಾಟೌಟ್: ಮೂಲವ್ಯಾಧಿ ಸಮಸ್ಯೆಯ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ.

ನಗರದ ಎಚ್‌ಎಎಲ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ಶುಕ್ರವಾರ ತೆರಳಿದ್ದ ಸಿದ್ದರಾಮಯ್ಯ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡರು. ಈ ಹಿಂದೆ ಮೂಲವ್ಯಾಧಿಗೆ ಚಿಕಿತ್ಸೆ ಪಡೆದಿದ್ದ ಜಾಗದಲ್ಲಿ ಸಣ್ಣ ಗುಳ್ಳೆ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ತೆರಳಿದ್ದರು. ಆದರೆ ಸಮಸ್ಯೆಗೆ ಶಸ್ತ್ರಚಿಕಿತ್ಸೆಯ ಅಗತ್ಯ ಇಲ್ಲ ಎಂದು ವೈದ್ಯರ ತಿಳಿಸಿದ ಹಿನ್ನೆಲೆ ಅವರು ವಾಪಾಸ್ ಆಗಿದ್ದಾರೆ ಎಂದು ಸಿದ್ದರಾಮಯ್ಯ ಆಪ್ತ ಮೂಲಗಳಿಂದ ತಿಳಿದು ಬಂದಿದೆ. ಸದ್ಯ ಸಿದ್ದರಾಮಯ್ಯ ಕಾಂಗ್ರೆಸ್ ನ ಮುಂದಿನ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಈ ಬಗ್ಗೆ ಬಹಿರಂಗವಾಗಿ ಎಲ್ಲಿಯೂ ಏನನ್ನೂ ಮಾತನಾಡದಿದ್ದರೂ ಮನೆದೊಳಗೆ ಒಂದು ಆಸೆ ಇದ್ದೇ ಇದೇ ಅನ್ನುವುದು ಹಲವು ಸಲ ಅವರ ಮಾತಿನಿಂದಲೇ ಸಾಬೀತಾಗಿದೆ.

Related posts

ಅಡ್ತಲೆ: ಇಕ್ಕಟ್ಟಿನ ರಸ್ತೆಯಲ್ಲಿ ಅಪಾಯಕ್ಕೆ ಆಹ್ವಾನ..!, ಜೀವ ಹೋಗುವ ಮೊದಲು ಎಚ್ಚೆತ್ತುಕೊಳ್ಳಿ ಓಟು ಪಡೆದ ಜನ ಪ್ರತಿನಿಧಿಗಳೇ..

ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಉಡುಪಿ: ನಕ್ಸಲ್ ನಾಯಕ ವಿಕ್ರಂ ಗೌಡನ ಮೃತದೇಹ ಹೊತ್ತ ಆಂಬ್ಯುಲೆನ್ಸ್ ಅಪಘಾತ..! ಆಂಬ್ಯುಲೆನ್ಸ್ ಅನ್ನು ಚರಂಡಿಯಿಂದ ಮೇಲೆತ್ತಿದ್ದ ಸ್ಥಳೀಯರು..!