ಕರಾವಳಿಸುಳ್ಯ

ಸುಳ್ಯ: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ಅಬಕಾರಿ ಅಧಿಕಾರಿಗಳ ದಾಳಿ,ಕಳ್ಳ ಬಟ್ಟಿ ಸಾರಾಯಿ,ಪರಿಕರಗಳು ವಶಕ್ಕೆ

368

ನ್ಯೂಸ್ ನಾಟೌಟ್ :ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿರುವ ಘಟನೆ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆಯ ಕಂಜಿಪಿಲಿ ಮತ್ತು ನೂಜಾಲ ಎಂಬಲ್ಲಿ ನಡೆದಿದೆ.

ಖಚಿತ ಮಾಹಿತಿಯ ಆಧಾರದ ಮೇಲೆ ಕಂಜಿಪಿಲಿ ಬಾಲಕೃಷ್ಣ ಎಂಬವರ ಮನೆಗೆ ಅಬಕಾರಿ ಪೋಲೀಸರು ದಾಳಿ ನಡೆಸಿದರು. ಮನೆಯಲ್ಲಿ ಅಕ್ರಮವಾಗಿ ಸಂಗ್ರಹಣೆ ಮಾಡಿದ್ದ 27.720 ಲೀಟರ್ ಕಳ್ಳ ಬಟ್ಟಿ ಸಾರಾಯಿ ವಶಕ್ಕೆ ಪಡೆದರು.340 ಲೀಟರ್ ಗೇರು ಹಣ್ಣಿನ ಕೊಳೆರಸ ಸಿಕ್ಕಿದ್ದು, ಕಳ್ಳಬಟ್ಟಿ ತಯಾರಿಕೆಗೆ ಉಪಯೋಗಿಸಿದ ಪರಿಕರಗಳನ್ನು ಕೂಡ ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

See also  ಸುಳ್ಯ:NMCಯಲ್ಲಿ ಇಂಟರ್ ಕ್ಲಾಸ್ ಕಾಮರ್ಸ್ ಫೆಸ್ಟ್ 'ಉತ್ಸವ್ 2k24',ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳ ಆಯೋಜನೆ ,ಬಹುಮಾನ ವಿತರಣೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget