ನ್ಯೂಸ್ ನಾಟೌಟ್: ಗುರುಗ್ರಾಮ್ ನ ಮಹಿಳೆಯೊಬ್ಬರು ಪ್ರೇಮಿಗಳ ದಿನದಂದು ವಿಚಿತ್ರ ಉಡುಗೊರೆಯನ್ನು ತನ್ನ ಮಾಜಿ ಪ್ರಿಯಕರನಿಗೆ ನೀಡಿದ್ದಾರೆ. 24 ವರ್ಷದ ಆಯುಷಿ ರಾವತ್ ಬರೋಬ್ಬರಿ 100 ಪಿಜ್ಜಾಗಳನ್ನು ತನ್ನ ಮಾಜಿ ಗೆಳೆಯನ (ಯಶ್ ಸಾಂಘ್ವಿ) ವಿಳಾಸಕ್ಕೆ ಆರ್ಡರ್ ಮಾಡಿದ್ದಾರೆ.
ಆದರೆ ಅದರಲ್ಲೊಂದು ತಿರುವು ಇದೆ.. ಆರ್ಡರ್ ಮಾಡಿದ ಎಲ್ಲಾ ನೂರು ಪಿಜ್ಜಾಗಳಿಗೆ ಕ್ಯಾಶ್-ಆನ್-ಡೆಲಿವರಿ ಆಯ್ಕೆ ನೀಡಿದ್ದಾರೆ.
Ayushi Rawat, a 24 yr old from Gurgaon sent 100 pizzas to her ex-boyfriend’s house for cash on delivery on Valentine’s Day
#ValentinesDay #Valentines #Valentinesday2025 @oliopizza 😜🤣 pic.twitter.com/E2hH2k7Ush
— Sandy🇺🇸 (@Sandipfx1) February 14, 2025
ಅಂದರೆ ಆಯುಷಿ ರಾವತ್ ಅವರ ಮಾಜಿ ಗೆಳೆಯ ತಾನು ಬಯಸದೆ ಬಂದ 100 ಪಿಜ್ಜಾಗಳಿಗೆ ಹಣ ನೀಡಬೇಕಾಗಿದೆ. ವ್ಯಕ್ತಿಯೊಬ್ಬರ ಮನೆ ಬಾಗಿಲಲ್ಲಿ 100 ಪಿಜ್ಜಾ ಬಾಕ್ಸ್ ಗಳನ್ನು ಜೋಡಿಸಿಡುತ್ತಿರುವ ಡೆಲಿವರಿ ಎಕ್ಸಿಕ್ಯೂಟಿವ್ ನ ವಿಡಿಯೋ ಆನ್‌ಲೈನ್ ನಲ್ಲಿ ಕಾಣಿಸಿಕೊಂಡ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ಇದು ಬ್ರೇಕಪ್ ಸೇಡು ತೀರಿಸಿಕೊಳ್ಳುವ ಪ್ರಯತ್ನವೋ ಅಥವಾ ಪ್ರಚಾರದ ಹುಚ್ಚೋ ಎಂಬ ಬಗ್ಗೆ ತಿಳಿದಿಲ್ಲ.