ಕ್ರೀಡೆ/ಸಿನಿಮಾ

38ರ ಯುವತಿ ಜತೆ ಹಸೆಮಣೆ ಏರಲು ಸಜ್ಜಾದ 66ರ ಮಾಜಿ ಕ್ರಿಕೆಟಿಗ

484

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅರುಣ್ ಲಾಲ್ ಎರಡನೇ ವಿವಾಹಕ್ಕೆ ಸಜ್ಜಾಗಿದ್ದು ಅವರ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಮೇ ಎರಡರಂದು ಮದುವೆಗೆ ಮುಹೂರ್ತ ನಿಶ್ಚಯವಾಗಿದೆ. ಬಹುಕಾಲದ ಗೆಳತಿ, 38 ವರ್ಷದ ಬುಲ್ಬುಲ್ ಸಹಾ ಅವರಿಗೆ ತಾಳಿ ಕಟ್ಟಲಿರುವ ಅರುಣ್ ಅವರ ವಯಸ್ಸು ಈಗ 66. ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಕ್ರಿಕೆಟ್‌ನ ವೀಕ್ಷಕ ವಿವರಣೆಯಲ್ಲಿ ತೊಡಗಿದ್ದ ಅರುಣ್ ಲಾಲ್ 2016ರಲ್ಲಿ ಕ್ಯಾನ್ಸರ್‌ಗೆ ಒಳಗಾಗಿದ್ದರು. ಗುಣಮುಖರಾದ ನಂತರ ಬಂಗಾಳ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕಗೊಂಡಿದ್ದರು. ಮೊದಲ ಪತ್ನಿಯ ಸಮ್ಮತಿಯೊಂದಿಗೆ ಮದುವೆಗೆ ಸಿದ್ಧರಾಗಿದ್ದಾರೆ ಎಂದು ವೆಬ್‌ಸೈಟ್‌ಗಳು ವರದಿ ಮಾಡಿವೆ.

See also  ದಾಖಲೆ ಬರೆದ ಆರ್ ಆರ್ ಆರ್, ಆಸ್ಕರ್ ಗೆದ್ದ ಆ ಹಾಡು ಯಾವುದು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget