ಕರಾವಳಿ

ಅಂಗಡಿಯಲ್ಲಿ 14 ಸಾವಿರ ರೂ. ಕದ್ದ ಆರೋಪ –ಸಿಸಿಟಿವಿ ದೃಶ್ಯ ಆಧರಿಸಿ ರಿಯಾಲಿಟಿ ಶೋ ಮಾಜಿ ಸ್ಪರ್ಧಿ ಅರೆಸ್ಟ್

ನ್ಯೂಸ್ ನಾಟೌಟ್ :ಖಾಸಗಿ ಚಾನಲ್ ಒಂದರ ರಿಯಾಲಿಟಿ ಶೋನಲ್ಲಿ ಈ ಹಿಂದೆ ಭಾಗವಹಿಸಿದ್ದ ಸ್ಪರ್ಧಿಯೊಬ್ಬನನ್ನು ಕಳ್ಳತನ ಆರೋಪದ ಮೇಲೆ ಪೊಲೀಸರು (Police) ಬಂಧಿಸಿಸಿರುವ ಘಟನೆ ವರದಿಯಾಗಿದೆ.ಅಂಕೋಲದ (Ankola) ಬಾಳೆಗದ್ದೆ ಗ್ರಾಮದ ಯುವಕ ಭಾಸ್ಕರ್ ಸಿದ್ದಿ ಬಂಧನಕ್ಕೊಳಗಾದ ಆರೋಪಿ ಎಂದು ತಿಳಿದು ಬಂದಿದೆ.

ಈತ ಯಲ್ಲಾಪುರದ ಅಂಗಡಿ ಒಂದರಲ್ಲಿ ಹಣವನ್ನು ಕಳ್ಳತನ ಮಾಡಿದ್ದ ಎಂದು ಆರೋಪಿಸಲಾಗಿದೆ.ಈ ಕುರಿತಂತೆ ಹಣ ಕದಿಯುತ್ತಿರುವ ವಿಡಿಯೋ ಕೂಡ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಹೇಳಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಆತನನ್ನು ಬಂಧಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆತ ಈ ಹಿಂದೆ ಖಾಸಗಿ ಚಾನಲ್ ಒಂದರ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದು, ಅದ್ಭುತ ಪ್ರದರ್ಶನ ನೀಡಿದ್ದ.ಸದ್ಯ ಆರೋಪಿಯಿಂದ ಕಳ್ಳತನ ಮಾಡಿದ್ದ 14,300 ರೂ. ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಯಲ್ಲಾಪುರ (Yellapur) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ‘ಚುಂಚಾದ್ರಿ ಕ್ರೀಡೋತ್ಸವ’ ಸಂಪನ್ನ, ವಿಜೇತರಿಗೆ ಜಗದ್ಗುರು ಶ್ರೀ ಡಾ॥ ನಿರ್ಮಲಾನಂದನಾಥ ಮಹಾಸ್ವಾಮೀಜಿಗಳಿಂದ ಪ್ರಶಸ್ತಿ, ಫಲಕ ಆಶೀರ್ವಾದ

ವಿದ್ಯುತ್ ತಂತಿಯಲ್ಲಿ ಸಿಲುಕಿದ್ದ ಪಾರಿವಾಳವನ್ನು ಜೀವದ ಹಂಗು ತೊರೆದು ರಕ್ಷಿಸಿದ್ರು..! ,ತನ್ನ ಕೆಲಸವನ್ನು ಅರ್ಧದಲ್ಲೇ ಬಿಟ್ಟು ಓಡಿ ಬಂದು ಪ್ರಾಣ ಕಾಪಾಡಿದ ಪವರ್ ಮ್ಯಾನ್ ಯಾರು?

ಮಂಗಳೂರು: ರೋಗಿ ಜೊತೆ ಆಸ್ಪತ್ರೆಗೆ ಬಂದ ಯುವಕನಿಂದ ಸ್ವಾಗತಕಾರಿಣಿಯ ಮಾನಭಂಗಕ್ಕೆ ಯತ್ನ..! ಯುವಕನ ಹಿಡಿದು ಬೆಂಡೆತ್ತಿದ ಪೊಲೀಸ್ರು..!