ಕೃಷಿ ಸಂಪತ್ತುವೈರಲ್ ನ್ಯೂಸ್

ಒಂದು ಈರುಳ್ಳಿ ಬರೋಬ್ಬರಿ 9 ಕೆಜಿ ತೂಕ..! ಇಷ್ಟು ದೊಡ್ಡ ಈರುಳ್ಳಿ ಬೆಳೆದದ್ದಾದರೂ ಹೇಗೆ? ಏನಿದರ ವಿಶೇಷ?

222

ನ್ಯೂಸ್‌ ನಾಟೌಟ್‌: ಈರುಳ್ಳಿ ಇತ್ತೀಚೆಗೆ ಟೊಮೆಟೋ ಬೆಲೆಯ ಜೊತೆ ಈರುಳ್ಳಿಯೂ ಬೆಲೆ ಏರಿಸಿಕೊಂಡು ಜನರ ಕಣ್ಣಲ್ಲಿ ನೀರು ತರಿಸಿತ್ತು. ಈಗ ಅಂತಹ ಒಂದು ವಿಭಿನ್ನ ಈರುಳ್ಳಿ ಬೆಳೆಯ ಕಥೆ ಇಲ್ಲಿದೆ. ಇಲ್ಲೊಬ್ಬರ ಹೊಲದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 9 ಕೆಜಿಯಷ್ಟು ಈರುಳ್ಳಿಯನ್ನು (9kg Onion) ಬೆಳೆದಿದ್ದಾರೆ.

ಮಾರುಕಟ್ಟೆಯಲ್ಲಿ ನಾವೆಲ್ಲಾ ಒಂದು ಈರುಳ್ಳಿ ಗ್ರಾಂ ಲೆಕ್ಕದಲ್ಲಿ ಇರುವುದನ್ನು ನೋಡಿರುತ್ತೇವೆ. ಆದ್ರೆ ಇಲ್ಲೊಬ್ಬರ ಹೊಲಕ್ಕೆ 9 ಕೆಜಿ ಈರುಳ್ಳಿ ಬಂದಿದೆ ನೋಡಿ. ಸದ್ಯ ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.

ಒಂದು ಈರುಳ್ಳಿ ಕೂಡ 9 ಕೆಜಿ ಆಗಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ವ್ಯಕ್ತಿಯೊಬ್ಬರ ಹೊಲಕ್ಕೆ 9 ಕೆಜಿ ಈರುಳ್ಳಿ ಬಂದಿದ್ದು, ಈ ಮೂಲಕ ವಿಶ್ವದಾಖಲೆ ಮಾಡಿದ್ದಾರೆ. ಯುಕೆಯ ಗುರ್ನಸಿಯ ಗರೆಥ್ ಗ್ರಿಫಿನ್ ಎಂಬ ರೈತ 8.97 ಕೆಜಿ ತೂಕದ ದೈತ್ಯ ಈರುಳ್ಳಿಯನ್ನು ಬೆಳೆದು ವಿಶ್ವದಾಖಲೆ ಮಾಡಿದ್ದಾರೆ. ಹಾರೊಗೇಟ್ ಫ್ಲವರ್ ಶೋ ಎಂಬ Instagram ಪೇಜ್​ನಲ್ಲಿ ಹೀಗೆ ಬರೆದಿದ್ದಾರೆ: ‘ಕಣ್ಣು ನೀರೂರಿಸುವ, ದೈತ್ಯ ಈರುಳ್ಳಿ ಹೊಸ ದಾಖಲೆಯನ್ನು ಮಾಡಿದೆ!

ಗುರ್ನಸಿಯ ಗರೆಥ್ ಗ್ರಿಫಿನ್ ಬೆಳೆದ ಈರುಳ್ಳಿ ಇಂದು ಹಾರೊಗೇಟ್ ಶರತ್ಕಾಲ ಪುಷ್ಪ ಪ್ರದರ್ಶನದ ಮೊದಲ ದಿನ 8.97 ಕೆಜಿ ತೂಕವನ್ನು ಹೊಂದಿದ್ದು, ಹೊಸ ದಾಖಲೆಯಾಗಿದೆ. ಇದು ಎಂದೆಂದಿಗೂ ವಿಶ್ವದಾಖಲೆ!’ ಈ ಪೋಸ್ಟ್ ಗೆ ಇದುವರೆಗೆ ನೂರಾರು ಲೈಕ್ ಗಳು ಬಂದಿದ್ದು, ಪೋಸ್ಟ್ ಅಂತರ್ಜಾಲದಲ್ಲಿ ಭಾರೀ ವೈರಲ್ ಸಹ ಆಗುತ್ತಿದೆ.

ಈ ಈರುಳ್ಳಿ 8.9 ಕೆಜಿ ತೂಕ ಮತ್ತು 21 ಇಂಚು ಉದ್ದವಿದೆ. ಗ್ರಿಫಿನ್ ಎಂಬವರ 12 ವರ್ಷಗಳ ದಾಖಲೆ ಮುರಿಯುವ ಪ್ರಯತ್ನ ಈ ಬಾರಿ ಫಲ ನೀಡಿದೆ. ಹೆಚ್ಚುವರಿ ಬೆಳಕು ಮತ್ತು ಸ್ವಯಂಚಾಲಿತ ನೀರಾವರಿಯಂತಹ ವಿಶೇಷ ಕ್ರಮಗಳೊಂದಿಗೆ, ಅವರು ಅಂತಹ ದೊಡ್ಡ ಈರುಳ್ಳಿಯನ್ನು ಬೆಳೆದಿದ್ದಾರೆ ಎನ್ನಲಾಗಿದೆ. ಇದು ಗಿನ್ನೆಸ್ ವಿಶ್ವ ದಾಖಲೆಗಳಿಂದ ಇನ್ನೂ ಗುರುತಿಸಲ್ಪಟ್ಟಿಲ್ಲ. ಗ್ರಿಫಿನ್ ಅವರ ತಂದೆಯೂ ದೊಡ್ಡ ಗಾತ್ರದ ಈರುಳ್ಳಿ ಬೆಳೆಗಾರರಾಗಿದ್ದರು. ಈ ದೊಡ್ಡ ಗಾತ್ರದ ಈರುಳ್ಳಿ ಕೂಡ ಅಡುಗೆಗೆ ಸೂಕ್ತವಾಗಿದೆ, ಆದರೆ ರುಚಿ ಸ್ವಲ್ಪ ಕಡಿಮೆಯಾಗಿದೆ ಎಂದು ಗ್ರಿಫಿನ್ ಮಾಹಿತಿ ನೀಡಿದ್ದಾರೆ.

See also  ಬೆಂಗಳೂರಿಗರಿಗೂ ಕಾಡುತ್ತಿದೆ ಚಿರತೆಯ ಭಯ..! ನೀರಿನ ಟ್ಯಾಂಕರ್‌ ನವರೂ ಏರಿಯಾಗೆ ಬರುತ್ತಿಲ್ಲ. ಕುಡಿಯಲು ನೀರಿಲ್ಲ ಎಂದು ನಿವಾಸಿಗಳ ಪರದಾಟ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget