ಶಿಕ್ಷಣಸುಳ್ಯ

ಸುಳ್ಯ: ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪರಿಸರ ದಿನಾಚರಣೆ

146

ನ್ಯೂಸ್ ನಾಟೌಟ್: ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬುಧವಾರ (ಜೂ.5) ಪರಿಸರ ದಿನವನ್ನು ಆಚರಿಸಲಾಯಿತು.
ಪರಿಸರವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕಾಲೇಜಿನ ಬೋಧಕ ಬೋಧಕೇತರ ವೃಂದ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂ ಸೇವಕರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಕಾಲೇಜಿನ ಮೂಲಿಕಾ ಉದ್ಯಾನವನದಲ್ಲಿ ಔಷಧೀಯ ಸಸ್ಯಗಳನ್ನು ನೆಡಲಾಯಿತು.


ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿ., ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಹರ್ಷಿತಾ ಎಂ, ರಾಷ್ಟ್ರೀಯ ಸೇವಾ ಘಟಕದ ಯೋಜನಾಧಿಕಾರಿ ಡಾ. ಪ್ರಮೋದ್ ಪಿ.ಎ, ದ್ರವ್ಯಗುಣ ವಿಭಾಗದ ಮುಖ್ಯಸ್ಥರು, ಸಂಸ್ಥೆಯ ಬೋಧಕ ಬೋಧಕೇತರ ವರ್ಗದವರು ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂ ಸೇವಕರು ಪಾಲ್ಗೊಂಡಿದ್ದರು.

See also  ಮಂಗಳೂರಿನ ಪಿಲಿನಲಿಕೆ ಸ್ಪರ್ಧೆಯಲ್ಲಿ 'ಸಣ್ಣ ಹುಲಿ' ಪ್ರಶಸ್ತಿ ಪಡೆದಿದ್ದ ಸೋನ ಅಡ್ಕಾರ್‌ಗೆ ಸನ್ಮಾನ, ಮುಳಿಹಿತ್ಲು (ಎಂಎಫ್‌ಸಿ) ತಂಡದಿಂದ ಬಾಲಪ್ರತಿಭೆಗೆ ಗೌರವ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget