ಕರಾವಳಿ

ಕಷ್ಟಪಟ್ರೆ ಗೆದ್ದೇ ಗೆಲ್ತಿವಿ ಅನ್ನೋದನ್ನ ಇಡೀ ದೇಶಕ್ಕೇ ಸಾರಿದ ಮಹಾನ್ ಚೇತನ ಇನ್ನಿಲ್ಲ, ನ್ಯಾಚುರಲ್ ಐಸ್ ಕ್ರೀಂ ಸ್ಥಾಪಿಸಿದ ಕರಾವಳಿಯ ದಿಗ್ಗಜನ ನಿಧನಕ್ಕೆ ಕಂಬನಿ ಮಿಡಿದ ಅಭಿಮಾನಿಗಳು

145

ನ್ಯೂಸ್ ನಾಟೌಟ್: ಆರಂಭದಲ್ಲಿ ಸಣ್ಣ ಸಂಸ್ಥೆಯನ್ನು ಆರಂಭಿಸಿ ದೊಡ್ಡ ಗುರಿಯೊಂದಿಗೆ ಸಾಗಿ ಅದರಲ್ಲಿ ಭಾರೀ ಯಶಸ್ಸು ಸಾಧಿಸಿದ ನ್ಯಾಚುರಲ್‌ ಐಸ್‌ಕ್ರೀಂ ಸಂಸ್ಥೆಯ ಸ್ಥಾಪಕ, ಉದ್ಯಮಿ ರಘುನಂದನ್ ಕಾಮತ್‌ (70) ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಅವರು ಅಲ್ಪ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಮೂಲತಃ ರಘುನಂದನ್ ದಕ್ಷಿಣ ಕನ್ನಡ ಜಿಲ್ಲೆ ಮೂಲ್ಕಿಯವರು. ಅವರ ತಂದೆ ಹಣ್ಣಿನ ವ್ಯಾಪಾರಿ ನಡೆಸುತ್ತಿದ್ದರು. ರಘುನಂದನ್ ಚಿಕ್ಕವಯಸ್ಸಿನಲ್ಲಿಯೇ ಮುಂಬೈಗೆ ತೆರಳಿದ್ದರು. ಅಲ್ಲಿ ಅಣ್ಣನ ರೆಸ್ಟೋರೆಂಟ್ ನಲ್ಲಿ ಕೆಲಸ ಆರಂಭಿಸಿದರು. ಇದಾದ ಬಳಿಕ ಅವರು 1984ರಲ್ಲಿ ನಾಲ್ವರ ಸಿಬ್ಬಂದಿಯನ್ನು ಇಟ್ಟುಕೊಂಡು ನ್ಯಾಚುರಲ್‌ ಐಸ್‌ಕ್ರೀಂ ಸಂಸ್ಥೆ ಹುಟ್ಟು ಹಾಕಿದರು.  ಗೆಲುವಿನ ಗುರಿಯತ್ತಲೇ ದಿಟ್ಟ ಹೆಜ್ಜೆ ಇಟ್ಟರು. ಪಾವ್ ಬಾಜಿ ಜೊತೆ ಐಸ್‌ಕ್ರೀಂ ನೀಡಿ ಗ್ರಾಹಕರನ್ನು ಸೆಳೆದರು. ಇವರ ಈ ಉದ್ದಿಮೆ ಭಾರಿ ಯಶಸ್ಸು ಕಂಡಿತು. ನ್ಯಾಚುರಲ್ ಐಸ್ ಕ್ರೀಂ ಈಗ ದೇಶಾದ್ಯಂತ 135ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ. ಮಾತ್ರವಲ್ಲ ವರ್ಷಕ್ಕೆ ಸುಮಾರು ₹400 ಕೋಟಿ ವಹಿವಾಟು ನಡೆಸುತ್ತಿದೆ.

See also  ಸಂಪಾಜೆ: ಸ್ಕೂಟಿ-ಜೀಪ್ ಡಿಕ್ಕಿ, ಪಂಚಾಯತ್ ಸದಸ್ಯ ಪವಾಡ ಸದೃಶ ಪಾರು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget