ಕೊಡಗು

Rashmika Mandanna: “ನನ್ನ ಜೀವನದಲ್ಲಿ ಬಂದಿದ್ದಕ್ಕೆ ಧನ್ಯವಾದಗಳು”, ನ್ಯಾಷನಲ್‌ ಕ್ರಷ್ ಈ ಪೋಸ್ಟ್ ಯಾರಿಗೆ? ಎಂದು ಕಾಮೆಂಟ್‌ ಮಾಡುತ್ತಿರುವ ನೆಟ್ಟಿಗರು..!

ನ್ಯೂಸ್ ನಾಟೌಟ್ : ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್‌ ಸಕತ್ ಮಿಂಚುತ್ತಿದ್ದಾರೆ.ಅನಿಮಲ್ ಬಾಲಿವುಡ್‌ ಸಿನಿಮಾ ಬಾರಿ ಸದ್ದು ಮಾಡುತ್ತಿದೆ.ಈ ಮೂಲಕ ದಾಖಲೆಯನ್ನೇ ಸೃಷ್ಟಿಸುತ್ತಿದೆ.ಈಗಾಗಲ್ಏ ವಿಶ್ವದಾದ್ಯಂತ ಬರೋಬ್ಬರಿ 800 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ.. 

ನಟಿ ರಶ್ಮಿಕಾ ಮಂದಣ್ಣ ಅವರು ಟ್ರೋಲ್‌ಗೊಳಗಾಗೋದು ಅಥವಾ ಅವರ ಬಗೆಗಿನ ವದಂತಿಗಳು ಇಂದು ನಿನ್ನೆಯ ವಿಷಯವೇನಲ್ಲ.ಅದರಲ್ಲೂ ರಶ್ಮಿಕಾ ಹಾಗೂ ವಿಜಯ್‌ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋದ್ರ ಸುದ್ದಿಯೂ ಭಾರಿ ಚರ್ಚೆಗೂ ಗ್ರಾಸವಾಗಿತ್ತು. ಆದರೆ ಅದ್ಯಾವುದಕ್ಕೆ ಕ್ಲಾರಿಟಿ ಸಿಕ್ಕಿಲ್ಲ.. ಇದೀಗ ನಟಿ ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ‘ನನ್ನ ಜೀವನದಲ್ಲಿ ಬಂದಿದ್ದಕ್ಕಾಗಿ ಧನ್ಯವಾದಗಳು’ ಎಂದು ಪೋಸ್ಟ್‌ ಶೇರ್‌ ಮಾಡಿಕೊಂಡಿದ್ದಾರೆ.. 

ಸದ್ಯ ಈ ಪೋಸ್ಟ್‌ ನೋಡಿದ ನೆಟ್ಟಿಗರು ಭಾರಿ ತಲೆ ಕೆಡಿಸಿಕೊಂಡಿದ್ದಾರೆ.ಈ ಪೋಸ್ಟ್ ಯಾರಿಗಿರಬಹುದು ಎಂದು ಯೋಚನೆಯಲ್ಲಿ ಮುಳುಗಿದ್ದಾರೆ.ಆದರೆ ರಶ್ಮಿಕಾ ಮಂದಣ್ಣ ಅವರು ಡೈರೆಕ್ಟ್‌ ಆಗಿ ಯಾರಿಗೂ ಹೇಳಿಲ್ಲವಾದ್ದರಿಂದ ಮತ್ತೆ ಈ ಬಗ್ಗೆ ಚರ್ಚೆಗಳು ಆರಂಭಗೊಂಡಿವೆ.ಬಹುಶಃ ಇದು ವಿಜಯ್ ದೇವರಕೊಂಡ ಅವರಿಗೆ ಇರಬಹುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.ಇನ್ನು ನಟಿ ರಶ್ಮಿಕಾ ಹಾಗೂ ವಿಜಯ್‌ ದೇವರಕೊಂಡ ಅವರು ಡೇಟಿಂಗ್‌ ಮಾಡುತ್ತಿದ್ದಾರೆ ಅನ್ನುವುದಕ್ಕೆ ಹಲವಾರು ಸಾಕ್ಷಿಗಳು ಸಿಕ್ಕರೂ ಕೂಡ ಅವರು ತಾವಿಬ್ಬರು ಫ್ರೆಂಡ್ಸ್‌ ಎನ್ನುವ ರೀತಿಯಲ್ಲೇ ನಡೆದುಕೊಳ್ಳುತ್ತಿದ್ದಾರೆ… ಅಲ್ಲದೇ ಇಬ್ಬರೂ ಆಗಾಗ ವಿದೇಶ ಪ್ರವಾಸಕ್ಕೆ ಹೋಗುವ ಫೋಟೋಗಳು ವೈರಲ್ ಆಗುತ್ತಿರುತ್ತವೆ.

ನಟಿ ರಶ್ಮಿಕಾ ರಣಬೀರ್‌ ಕಪೂರ್‌ಗೆ ಜೋಡಿಯಾಗಿ ಅನಿಮಲ್‌ ಚಿತ್ರದಲ್ಲಿ ನಟಿಸಿದ್ದಾರೆ..ಈ ಚಿತ್ರದಲ್ಲಿ ರಣಬೀರ್‌ ಕಪೂರ್‌ ರೊಂದಿಗಿನ ಲಿಪ್‌ ಲಾಕ್‌ ದೃಶ್ಯಕ್ಕೂ ರಶ್ಮಿಕಾ ಟ್ರೋಲ್‌ಗೊಳಗಾಗಿದ್ದರು.ಈ ಚಿತ್ರವನ್ನು ಖ್ಯಾತ ನಿರ್ದೇಶಕ ಸಂದೀಪ್‌ ರೆಡ್ಡಿ ವಂಗಾ ನಿರ್ದೇಶಿಸಿದ್ದು.. ಚಿತ್ರ ಭಾಕ್ಸಾಫಿಸ್‌ನಲ್ಲಿ ಭರ್ಜರಿಯಾಗಿ ಮುನ್ನುಗ್ಗುತ್ತಿದೆ.. ಕಲೆಕ್ಷನ್‌ ವಿಚಾರದಲ್ಲಿಯೂ ಈ ಸಿನಿಮಾ ಎಲ್ಲ ದಾಖಲೆಗಳನ್ನು ಉಡೀಸ್ ಮಾಡುತ್ತಿದೆ.

Related posts

ಮಡಿಕೇರಿ:ಅನಾಥ ಶವದ ಮುಂದೆ ಇತ್ತು ಲಕ್ಷಗಟ್ಟಲೆ ಹಣ,ಬೆರಗಾದ ಸ್ಥಳೀಯರು…

ಕೊಡಗು ಸಂಪಾಜೆ: ಉಚಿತ ಆರೋಗ್ಯ ತಪಾಸಣೆ, ವಿವಿಧ ವಿಭಾಗದ ತಜ್ಞ ವೈದ್ಯರ ಆಗಮನ

ಕಡಬ: ನೌಕರಿ ಕೊಟ್ಟ ಮಾಲೀಕನನ್ನೇ ಹನಿಟ್ರ್ಯಾಪ್‌ ಮಾಡಿಸಿದ ಕೆಲಸದಾಳು..! ಉಂಡ ಮನೆಗೆ ದ್ರೋಹ ಬಗೆದವ ಮಾಡಿದ್ದೇನು ಗೊತ್ತಾ?