ಕ್ರೀಡೆ/ಸಿನಿಮಾ

ಕೇವಲ 9 ಗಂಟೆಯೊಳಗೆ ಈ ನಟಿಗೆ ಒಂದು ಮಿಲಿಯನ್‌ಗಿಂತಲೂ ಅಧಿಕ ಫಾಲವರ್ಸ್..!,ಆ ನಟಿ ಯಾರು ಗೊತ್ತೆ?

199

ನ್ಯೂಸ್ ನಾಟೌಟ್ :  ಸೆಲೆಬ್ರಿಟಿಗಳಾದ್ರೂ ಒಂದು ಮಿಲಿಯನ್ ಫಾಲಾವರ್ಸ್ ಆಗ್ಬೇಕಾದರೂ ಕೆಲ ದಿನಗಳಷ್ಟು ಕಾಲ ಕಾಯಬೇಕಾಗುತ್ತೆ. ಆದರೆ ಇಲ್ಲೊಬ್ಬರು ನಟಿ ಕೇವಲ 9 ಗಂಟೆಯಲ್ಲೇ 1 ಮಿಲಿಯನ್‌ ಫಾಲೋವರ್ಸನ್ನು ಗಳಿಸಿದ್ದಾರೆ ಅನ್ನೋದು ವಿಶೇಷ.ಈ ಮೂಲಕ ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಫಾಲೋವರ್ಸನ್ನು ಗಳಿಸಿದ ನಟಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ನಟ-ನಟಿಯರೆಂದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಇರದೇ ಇರಲಾರರು. ಹೀಗಾಗಿ ಹೆಸರಾಂತ ನಟಿ ಕೊನೆಗೂ ಇನ್‌ಸ್ಟಾಗ್ರಾಮ್‌ಗೆ ಬಂದಿದ್ದಾರೆ.ಇದು ಅವರ ಅಭಿಮಾನಿಗಳಿಗೆ ಅತೀವ ಸಂತೋಷವನ್ನುಂಟು ಮಾಡಿದೆ.ಸಾಮಾಜಿಕ ಜಾಲತಾಣಗಳಿಂದ ಈ ನಟಿ ದೂರ ಉಳಿದಿದ್ದು,ಅಗಸ್ಟ್‌ 31 ರಂದು ಇನ್ಸ್ಟಾಗ್ರಾಂನಲ್ಲಿ ತಮ್ಮ ಖಾತೆಯನ್ನು ತೆರೆದಿದ್ದಾರೆ.ಆ ನಟಿಯ ಹೆಸರೇ ನಯನತಾರಾ..!

ಇನ್ಸ್ಟಾಗ್ರಾಂ ತೆರೆದಿದ್ದೇ ತಡ.. ನೋಡ ನೋಡುತ್ತಿದ್ದಂತೆ ಫಾಲವರ್ಸ್ ಸಂಖ್ಯೆ ಒಂದು ಲಕ್ಷ ದಾಟಿತು. ಮುಮದು ಒಂಭತ್ತು ಗಂಟೆಯಾಗುತ್ತಲೆ ಒಂದು ಮಿಲಿಯನ್‌ ಇನ್ಸ್ಟಾಗ್ರಾಂ ಫಾಲೋವರ್ಸನ್ನು ಗಳಿಸಿದ್ದಾರೆ. ಇದಕ್ಕೂ ಮುನ್ನ ಕತ್ರಿನಾ ಕೈಫ್  ಅವರು ಇನ್ಸ್ಟಾಗ್ರಾಂ ಖಾತೆ ತೆರೆದಾಗ 24 ಗಂಟೆಗಳಲ್ಲಿ ಒಂದು ಮಿಲಿಯನ್‌ ಫಾಲೋವರ್ಸನ್ನು ಪಡೆದುಕೊಂಡಿದ್ದರು. ಆದರೆ ನಯನತಾರಾ ಅವರನ್ನೂ ಬೀಟ್ ಮಾಡಿ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. 9 ಗಂಟೆಯಲ್ಲೇ ಒಂದು ಮಿಲಿಯನ್‌ ಫಾಲೋವರ್ಸನ್ನು ಪಡೆಯುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ತನಕ ಖಾತೆಗೆ ಫಾಲೋವರ್ಸಗಳ ಸಂಖ್ಯೆ 1.4 ಮಿಲಿಯನ್‌..!ನಯನತಾರಾ ಅವರು ತಮ್ಮ ಖಾತೆಯಲ್ಲಿ ಮೊದಲ ರೀಲ್‌ ಅನ್ನು ತಮ್ಮ ಅವಳಿ ಮಕ್ಕಳಾದ ಉಯಿರ್‌ ಮತ್ತು ಉಲಗ್‌ ಅವರೊಂದಿಗೆ ಪೋಸ್ಟ್‌ ಮಾಡಿದ್ದಾರೆ. ಮೂವರು ಒಂದೇ ರೀತಿ ಹೋಲುವ ಬಣ್ಣದ ಉಡುಗೆಗಳನ್ನು ತೊಟ್ಟಿದ್ದು ವಿಶೇಷವೆಂಬಂತಿದೆ.

ಈ ವಿಡಿಯೋ ಇಪ್ಪತ್ನಾಲ್ಕು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಮಿಲಿಯನ್ ಲೈಕ್‌ಗಳನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲದೇ ʼಜವಾನ್‌ʼ ಟ್ರೈಲರ್‌ನ್ನು ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಹಂಚಿಕೊಂಡಿದ್ದಾರೆ.

See also  ದಾರವಾಹಿಯಲ್ಲಿ ನಟಿಸಲಿರುವ ಖ್ಯಾತ ಹಾಸ್ಯ ನಟ, 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಟೆನ್ನಿಸ್ ಕೃಷ್ಣ ನಟನೆಯ ಸಿರಿಯಲ್ ಯಾವುದು..?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget