ಕ್ರೀಡೆ/ಸಿನಿಮಾ

ಇದ್ದಕ್ಕಿದ್ದ ಹಾಗೆ ನಟ ಜಗ್ಗೇಶ್ ಅವರಿಗೆ ಏನಾಯ್ತು..!? ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದು ಯಾಕೆ? ಆತಂಕ ಹುಟ್ಟಿಸಿದ ಫೋಟೋಸ್ ವೈರಲ್

36
Spread the love

ನ್ಯೂಸ್ ನಾಟೌಟ್ : ಇತ್ತೀಚೆಗಷ್ಟೇ ಕಾಲುನೋವಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ನವರಸ ನಾಯಕ ನಟ ಜಗ್ಗೇಶ್ ಅವರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು.ಇದೀಗ ಮತ್ತೆ ದಿಢೀರ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ.ಹೌದು, ಅವರ ಕಾಲಿಗೆ ಏಟಾಗಿದ್ದು, ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ. ನಡೆಯಲಾಗದ ಕಾರಣ, ಯಾವುದೇ ಕೆಲಸದಲ್ಲೂ ಭಾಗವಹಿಸಲು ಅಸಾಧ್ಯವಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಆರೋಗ್ಯದ ಬಗ್ಗೆ ತಿಳಿಸಿದ್ದಾರೆ.

ಸದ್ಯಕ್ಕೆ ಕಾವೇರಿ ನೀರಿಗಾಗಿ ಹೋರಾಟ ನಡೆಯುತ್ತಿದೆ.ಕನ್ನಡ ಚಿತ್ರರಂಗದ ಎಲ್ಲಾ ಗಣ್ಯರು ಇದರಲ್ಲಿ ಹೆಚ್ಚಾಗಿ ಭಾಗವಹಿಸಿದ್ದಾರೆ.ಆದರೆ ಇಂತಹ ವಿಚಾರದಲ್ಲಿ ನಟ ಜಗ್ಗೇಶ್ ಅವರು ಯಾವತ್ತೂ ಮುಂಚೂಣಿಯಲ್ಲಿರುತ್ತಿದ್ದರು.ಆದರೆ ಈ ಬಾರಿ ತಾವ್ಯಾಕೆ ಎಲ್ಲೂ ಕಾಣಿಸಿಕೊಂಡಿಲ್ಲ ಎಂಬ ಪ್ರಶ್ನೆಗೆ ಸ್ವತಃ ಜಗ್ಗೇಶ್ ಅವರೇ ಸತ್ಯದ ಸಂಗತಿಯನ್ನು ತೆರದಿಟ್ಟಿದ್ದಾರೆ.

L4L5 compression ಆಗಿ ನಡೆದಾಡಲು ಕಷ್ಟವಾಗಿ ಯಾವ ಕಾರ್ಯದಲ್ಲೂ ಭಾಗಿಯಾಗಲು ಸಾಧ್ಯವಾಗಿಲ್ಲ. 2 ವಾರಗಳ ಫಿಸಿಯೋ ಚಿಕಿತ್ಸೆ ಮತ್ತು ಬೆಡ್‌ರೆಸ್ಟ್ ಕಡ್ಡಾಯ ಎಂದು ಡಾಕ್ಟರ್ ಸಲಹೆ ನೀಡಿದ್ದಾರೆ ಎನ್ನುತ್ತಾ ಚಿಕಿತ್ಸೆ ಫೋಟೋ ಶೇರ್ ಮಾಡಿ ಅನಾರೋಗ್ಯದ ಬಗ್ಗೆ ಜಗ್ಗೇಶ್ ತಿಳಿಸಿದ್ದಾರೆ.

ಅವರು ಕೆಲ ತಿಂಗಳ ಹಿಂದೆಯಷ್ಟೇ ಪಾದದ ಮೂಳೆ ಮುರಿದಿರುವ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಅವರು ಸಂಪೂರ್ಣ ಗುಣಮುಖರಾಗಲಿಲ್ಲ,ಅದಕ್ಕಾಗಿ ಚಿಕಿತ್ಸೆಯಲ್ಲಿರುವ ಸಂಗತಿಯನ್ನ ಇದೀಗ ಮತ್ತೆ ಹಂಚಿಕೊಂಡಿದ್ದಾರೆ.

ಜಗ್ಗೇಶ್ ಅವರು ಈ ರೀತಿ ಪೋಸ್ಟ್ ಹಾಕಿದ್ದೇ ತಡ.ಅವರ ಅಭಿಮಾನಿಗಳು ಸಿಕ್ಕಾಪಟ್ಟೆ ಕಾಳಜಿ ತೋರಿಸುತ್ತಿದ್ದಾರೆ. ಬಳಗ ಬೇಗ ಚೇತರಿಸಿಕೊಳ್ಳಿ ಎಂದು ಹಾರೈಸುತ್ತಿದ್ದಾರೆ.ಇನ್ನು ಕೆಲವರು ಆರೋಗ್ಯದಿಂದರಲು ಎನೆಲ್ಲಾ ಮಾಡಬೇಕು ಅನ್ನೋದನ್ನು ಒಂದಷ್ಟು ಸಲಹೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನೊಬ್ಬರು ದಯವಿಟ್ಟು ಕೇಳಿ… ಮೊದಲು.. ಹಾಲು /ಕಾಫಿ / ಟಿ ಕುಡಿಯೋದು ಬಿಟ್ಟು ಬಿಡಿ… ಉಪ್ಪು.. ಸಕ್ಕರೆ.. ಬೆಲ್ಲ ತಿನ್ನೋದು ಬಿಡಿ… ರೈಸ್ ತಿನ್ನೋದು ಬಿಡಿ.. ನಿಮ್ಮ ಆರೋಗ್ಯ ಸುಧಾರಿಸಿ ಅದ್ಭುತವಾದ ಜೀವನ ನಿಮ್ಮದಾಗುತ್ತೆ ಎಂದು ಒಬ್ಬ ನೆಟ್ಟಿಗ ತಿಳಿಸಿದ್ದಾರೆ.

ಅಭಿಮಾನಿಗಳ ಈ ಅಭಿಮಾನ ಕಂಡು ನಟ ಜಗ್ಗೇಶ್ ಅವರಿಗೆ ಹೃದಯ ತುಂಬಿ ಬಂದಿದೆ.ಅವರ ಈ ಕಾಳಜಿಗೆ ಯಾವ ರೀತಿ ಧನ್ಯವಾದಗಳನ್ನು ಸಲ್ಲಿಸಿದರೂ ಕಡಿಮೆಯೇ.ಇತ್ತ ಬಹು ನಿರೀಕ್ಷೆ ಮೂಡಿಸಿದ್ದ ತೋತಾಪುರಿ 2 ಸಿನಿಮಾ ಕೂಡ ಸೆ. 28ರಂದು ಬಿಡುಗಡೆ ಆಗಿದೆ. ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿ ಜಗ್ಗೇಶ್‌ ನಟಿಸಿದ್ದರೂ, ಸಿನಿಮಾ ಪ್ರಚಾರದಲ್ಲಿ ಅವರು ಭಾಗವಹಿಸಿಲ್ಲ. ವಿಜಯ್‌ ಪ್ರಸಾದ್‌ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ಧನಂಜಯ್‌, ಅದಿತಿ ಪ್ರಭುದೇವ ಸೇರಿ ಬಹುತಾರಾಗಣವಿದೆ.ನಟ ಜಗ್ಗೇಶ್ ಅವರು ಬೇಗ ಚೇತರಿಸಿಕೊಳ್ಳಲಿ.ಮತ್ತೆ ಸಿನಿಮಾದಲ್ಲಿ ಅಭಿನಯಿಸಿ ಅಭಿಮಾನಿಗಳನ್ನು ರಂಜಿಸುವ ಶಕ್ತಿ ಬರಲಿ ಅನ್ನೋದೇ ಎಲ್ಲರ ಹಾರೈಕೆ.

See also  ಕೊಡಗಿನ ಬೆಡಗಿಯನ್ನು ಬಿಡದೆ ಕಾಡುತ್ತಿದೆ ಡೀಫ್ ಫೇಕ್..! ರಶ್ಮಿಕಾ ಮಂದಣ್ಣ ಮತ್ತೊಂದು ಡೀಪ್ ​ಫೇಕ್ ವಿಡಿಯೋ ವೈರಲ್..!
  Ad Widget   Ad Widget   Ad Widget