ನ್ಯೂಸ್ ನಾಟೌಟ್: ಕನ್ನಡದ ರೆಬೆಲ್ ಸ್ಟಾರ್ ದಿ.ಅಂಬರೀಶ್ ಅವರ ಮೊಮ್ಮಗುವಿನ ಫೋಟೋ ಶೇರ್ ಆಗಿದೆ. ಅಭಿಷೇಕ್-ಅವಿವಾ ದಂಪತಿಗೆ ಗಂಡು ಮಗು ಜನನವಾಗಿದ್ದು, . ಆರಂಭದಲ್ಲಿ ಆಸ್ಪತ್ರೆಯಲ್ಲಿ ಸುಮಲತಾ ಅಂಬರೀಶ್ ಅವರ ಜೊತೆಗೆ ಮಗು ಇರುವ ಫೋಟೋ ವೈರಲ್ ಆಗಿತ್ತು. ಅದಾದ ನಂತರ ಈ ಜೋಡಿ ಮಗುವಿನ ಫೋಟೋ ರಿವೀಲ್ ಮಾಡಿಲ್ಲ. ಮೊಮ್ಮಗನ ಕಂಡು ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಭಾವುಕರಾಗಿದ್ದರು. ಮೊಮ್ಮಗನನ್ನು ಎತ್ತಿ ಮುದ್ದಾಡಿದ್ದರು
ಅಂಬಿ ಈ ಹಿಂದೆ ಯಶ್ ಮಗಳಿಗೆ ಗಿಫ್ಟ್ ಆಗಿ ನೀಡಿದ್ದ ತೊಟ್ಟಿಲು ಸಖತ್ ವೈರಲ್ ಆಗಿತ್ತು.ತಮ್ಮ ಮೊಮ್ಮಕ್ಕಳಿಗೂ ಅದೇ ತೊಟ್ಟಿಲು ಬಳಸಬೇಕು ಎಂದು ಆಸೆ ಪಟ್ಟಿದ್ದರಂತೆ ಅಂಬಿ. ಹೀಗಾಗಿ ಅಂಬಿ ಮೊಮ್ಮಗನಿಗೂ ಕಲಘಟಗಿ ತೊಟ್ಟಿಲು ರೆಡಿಯಾಗಿ ಬಂದಿದೆ.ಸುಮಲತಾ.
ಅವಿವಾ ಬಿದ್ದಪ್ಪ ಹಾಗೂ ಅಭಿಷೇಕ್ ಅಂಬರೀಶ್ ಅವರು ಇನ್ನೂ ಮಗುವಿನ ಫೋಟೋವನ್ನು ರಿವೀಲ್ ಮಾಡಿಲ್ಲ. ಈಗ ಮಗುವಿನ ಜೊತೆಗಿನ ಫೋಟೋ ಶೇರ್ ಮಾಡಿದ್ರೂ ಕೂಡ ಮುಖ ರಿವೀಲ್ ಮಾಡಿಲ್ಲ. ನಿನ್ನೆ ಅವಿವಾ ಅವರ ಹುಟ್ಟುಹಬ್ಬವಾಗಿತ್ತು. ಹೀಗಾಗಿ ಮಗು ಹಾಗೂ ಅಭಿಷೇಕ್ ಜೊತೆ ಇದ್ದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಪೋಟೋ ಕಂಡು ಸೋ ಕ್ಯೂಟ್ ಅಂತಿದ್ದಾರೆ ಫ್ಯಾನ್ಸ್.ಹಿಂದೆ ಯಶ್ ಮಗಳಿಗೆ ಕಲಘಟಗಿ ತೊಟ್ಟಿಲು ಗಿಫ್ಟ್ ಕೊಟ್ಟಿದ್ದರು ಅಂಬಿ. ಯಶ್ ಗೆ ಅಂಬಿ ಕೊಟ್ಟಿದ್ದ ತೊಟ್ಟಿಲು ಈಗ ಅಭಿಷೇಕ್ ಮಗನಿಗೆ ಸಿಗುತ್ತಿದೆ. ಅಂಬಿ ಬದುಕಿದ್ದಾಗ ಮಗನಿಗೆ ಮಗುವಾದ್ರೆ ಇದೇ ತೊಟ್ಟಿಲಲ್ಲಿ ಮಲಗಿಸುವಂತೆ ಹೇಳಿದ್ರು.
View this post on Instagram