ಕ್ರೀಡೆ/ಸಿನಿಮಾ

ಮಾದಕ ನಟಿ, ಸಾಮಾಜಿಕ ಮಾಧ್ಯಮದ ಸೆನ್ಸೇಷನ್ ‘ಉರ್ಫಿ ಜಾವೇದ್‌’ಗೆ ಕೊಲೆ ಬೆದರಿಕೆ,ಅಷ್ಟಕ್ಕೂ ಮೇಲ್‌ಗೆ ಬಂದ ಆ ಸಂದೇಶ ಏನು? ಬೆದರಿಕೆ ಹಾಕಿದವರ್ಯಾರು?

38
Spread the love

ನ್ಯೂಸ್ ನಾಟೌಟ್ : ಉರ್ಫಿ ಜಾವೇದ್ ಅಂದ ಕೂಡಲೇ ಪಡ್ಡೆ ಹುಡುಗರ ಹಾರ್ಟ್ ಬೀಟ್ ಜಾಸ್ತಿಯಾಗುತ್ತದೆ.ಆಕೆಯ ವಿಚಿತ್ರ ಡ್ರೆಸ್‌ಗಳಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಾರಿ ಚರ್ಚೆಗೂ ಕಾರಣವಾಗುತ್ತವೆ.ಇದೀಗ ಇದೆ ವಿಚಾರಕ್ಕೆ ಆಕೆಗೆ ಕೊಲೆ ಬೆದರಿಕೆ ಹಾಕಲಾಗಿದೆ.ಬುಧವಾರದಂದು ಉರ್ಫಿ ಜಾವೇದ್  ಬೆದರಿಕೆ ಬಂದಿರುವ ಕುರಿತಾಗಿ ಸ್ಕ್ರೀನ್ ಶಾಟ್ ವೊಂದನ್ನು ಹಂಚಿಕೊಂಡಿದ್ದಾರೆ.

ಮೇಲ್ ವೊಂದರಲ್ಲಿ ಭಾರತೀಯರನ್ನು  ಮಾಲಿನ್ಯಗೊಳಿಸುವುದನ್ನು ನಿಲ್ಲಿಸುವಂತೆ ಒಂದು ವೇಳೆ ಹಾಗೆ ಮಾಡದೆ ಹೋದಲ್ಲಿ ಅವಳನ್ನು ಹೊಡೆದುರುಳಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ.ಮೇಲ್ ಕಳಿಸಿರುವ ವ್ಯಕ್ತಿಯು ಪ್ರಮೋದ್ ಸಿಂಗ್ ಎಂದು ಹೇಳಲಾಗಿದೆ. ಅವರು ಹಿಂದಿಯಲ್ಲಿ  “ಬಹುತ್ ಜಲ್ದಿ ತೇರೆ ಕೋ ಗೋಲಿ ಮಾರ್ ದಿ ಜಾಯೇಗಿ. ಜೋ ತುನೇ ಇಂಡಿಯಾ ಮೇ ಗಂದ್ಗಿ ಫೆಲಾ ರಖೀ ಹೈ.” “ಬಹುತ್ ಜಲ್ದಿ ತೇರೆ ಕೋ ಗೋಲಿ ಮಾರ್ ದಿ ಜಾಯೇಗಿ. ಬಹುತ್ ಜಲ್ದಿ ಮಿಷನ್ ಪುರಾ ಹೋಗಾ, ಜೋ ತುನೇ ಗಂದಗೀ ಫೇಲಾ ರಖೀ ಹೈ ಇಂಡಿಯಾ ಮೇ. ವೋ ಸಬ್ ಗಂದ್ಗಿ ಸಾಫ್ ಹೋ ಜಾಯೇಗೀ” ಎಂದು ಅವರು ಉಲ್ಲೇಖಿಸಿದ್ದಾರೆ. ಈ ಮೇಲ್ ನ ಸ್ಕ್ರೀನ್ ಶಾಟ್ ನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಉರ್ಫಿ ಜಾವೇದ್  “ನನ್ನ ಜೀವನದಲ್ಲಿ ಇದು ನಿರಂತರವಾಗಿ ನಡೆಯುತ್ತಿರುತ್ತದೆ” ಎಂದು ಬರೆದಿದ್ದಾರೆ..!

ಯಾವಾಗ ಈ ಪೋಸ್ಟ್‌ನ್ನು ಉರ್ಫಿ ಶೇರ್ ಮಾಡುತ್ತಾರೋ ತುಂಬಾ ಜನ ಆಕೆಗೆ ಬೆಂಬಲವಾಗಿ ನಿಂತಿದ್ದಾರೆ. ನೆಟಿಜನ್‌ಗಳು ಉರ್ಫಿಯನ್ನು ಬೆಂಬಲಿಸಿ ಹೆದರಬೇಡ ಎಂದಿದ್ದಾರೆ. ಇಂಟರ್ನೆಟ್ ಬಳಕೆದಾರರು, ” ಇಂತವರ  ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು” ಎಂದು ಬರೆದಿದ್ದಾರೆ. ಇನ್ನೊಬ್ಬ ಇಂಟರ್ನೆಟ್ ಬಳಕೆದಾರ ” ಬೊಗಳುವವರು ಬೊಗಳಲಲಿ ಬಿಡಿ ನೀವು ನಿಜವಾದ ಧೈರ್ಯಶಾಲಿ ಹುಡುಗಿ ಅದನ್ನು ನಾನು ನೋಡಿದ್ದೇನೆ ನಾನು ನಿನ್ನನ್ನು ತುಂಬಾ ಗೌರವಿಸುತ್ತೇನೆ ಆದ್ದರಿಂದ ಅವರನ್ನು ನಿರ್ಲಕ್ಷಿಸಿ.” ಎಂದು ಹೇಳಿದ್ದಾರೆ. ಇಂಟರ್ನೆಟ್ ಬಳಕೆದಾರರಲ್ಲಿ ಒಬ್ಬರು, “ಅವನ ವಿರುದ್ಧ ಕೇಸ್ ದಾಖಲಿಸಿ.. ” ಎಂದು ಬರೆದಿದ್ದಾರೆ.

https://twitter.com/uorfi_/status/1691856693087682629?s=20

ಈ ಕಾಮೆಂಟ್‌ಗಳಿಂದ ಉರ್ಫಿ ಧೈರ್ಯ ಮತ್ತಷ್ಟು ಹೆಚ್ಚಿದೆ.ಇಂಟರ್‌ನೆಟ್ ಬಳಕೆದಾರರ ಬೆಂಬಲ ಕಂಡು ಉರ್ಫಿಯೇ ಶಾಕ್ ಆಗಿದ್ದಾಳೆ.ಉರ್ಫಿಯನ್ನು ಇಡೀ ದೇಶವೇ ಗಮನಿಸುತ್ತಿದೆ.ಆಕೆ ಸೆಲೆಬ್ರಿಟಿ ಹೀಗಾಗಿ ಈ ಮೊದಲೇ ಹೇಳಿದಂತೆ ಉರ್ಫಿಗೆ ಕೊಲೆ ಬೆದರಿಕೆ ಬಂದಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ, ಮೂರು ವರ್ಷಗಳ ಹಿಂದೆ ತನ್ನ ಮಾಜಿ ಬ್ರೋಕರ್ ತನಗೆ ಬೆದರಿಕೆ ಹಾಕಿದ್ದನೆಂದು ಉರ್ಫಿ ಬಹಿರಂಗಪಡಿಸಿದ್ದಳು.ಇದೀಗ ಮತ್ತೊಂದು ಪೋಸ್ಟ್ ಶೇರ್ ಮಾಡುವ ಮೂಲಕ ವ್ಯಕ್ತಿಯೋರ್ವ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಬರೆದುಕೊಂಡಿದ್ದಾಳೆ.

See also  ಅಲೆಮಾರಿ ಬಾಲಕಿಯ ಶಿಕ್ಷಣಕ್ಕೆ ಖ್ಯಾತ ಕ್ರಿಕೆಟಿಗ ಕೆ.ಎಲ್ ರಾಹುಲ್ ನೆರವು, ಡಾಕ್ಟರ್ ಆಗುವ ಕನಸನ್ನು ಕೇಳಿದ ಬಳಿಕ ಕನ್ನಡಿಗ ಕ್ರಿಕೆಟಿಗ ಮಾಡಿದ್ದೇನು..?
  Ad Widget   Ad Widget   Ad Widget