ಕ್ರೀಡೆ/ಸಿನಿಮಾ

ಮಂಗಳೂರು ಬೆಡಗಿ ಅನುಷ್ಕಾ ಶೆಟ್ಟಿಗೆ ಶೀಘ್ರದಲ್ಲೇ ಮದುವೆ?!43ನೇ ವಯಸ್ಸಿಗೆ ಹಸೆಮಣೆ ಏರಲು ಸಜ್ಜಾದ ಬಾಹುಬಲಿ ‘ದೇವಸೇನ’

227

ನ್ಯೂಸ್‌ ನಾಟೌಟ್‌: ಮಂಗಳೂರು ಬೆಡಗಿ ಬಾಹುಬಲಿ’ ಚಿತ್ರದ ಮೂಲಕ ದೇಶಾದ್ಯಂತ ಗುರುತಿಸಿಕೊಂಡ ಅನುಷ್ಕಾ ಶೆಟ್ಟಿಗೆ ಇದೀಗ 43 ವರ್ಷ ವಯಸ್ಸು. ಆದರೂ ಇವರು ಅವಿವಾಹಿತರಾಗಿದ್ದಾರೆ… ಈ ಹಿಂದೆ ಮದುವೆ ಕುರಿತಂತೆ ಹಲವು ವದಂತಿಗಳು ಹಬ್ಬಿದ್ದರೂ ಅದು ನಿಜವಾಗಿರಲಿಲ್ಲ. ಆದರೆ ಈಗ ಮತ್ತೊಮ್ಮೆ ಮದುವೆಯ ಸುದ್ದಿ ಮುನ್ನೆಲೆಗೆ ಬರುತ್ತಿದೆ.ಹೌದು, ಈ ಬಾರಿ ಹೆಸರು ಕೇಳಿ ಬರುತ್ತಿರುವುದು ನಟ-ನಿರ್ದೇಶಕರೊಂದಿಗೆ ಅಲ್ಲ.ಕ್ರಿಕೆಟಿಗನ ಸುತ್ತ ಅನುಷ್ಕಾ ಹೆಸರು ಸುತ್ತಿ ಕೊಂಡಿದೆ.

ಆರಂಭದಲ್ಲಿ ಬೋಲ್ಡ್‌ ಪಾತ್ರಗಳಲ್ಲಿ ಮಿಂಚುತ್ತಿದ್ದ ನಟಿ ಬಳಿಕ ‘ರುದ್ರಮದೇವಿ’, ‘ದೇವಸೇನಾ’, ‘ಭಾಗಮತಿ’ಯಂತಹ ಪಾತ್ರಗಳ ಮೂಲಕ ವಿಶೇಷ ಮನ್ನಣೆ ಪಡೆದರು. ಹೀಗಾಗಿಯೇ ಅವರಿಗೆ ಇಡೀ ದೇಶ ಮಾತ್ರವಲ್ಲದೇ ವಿದೇಶದಲ್ಲಿಯೂ ಕೂಡ ಅಪಾರ ಅಭಿಮಾನಿ ಬಳಗ ಸಿಕ್ಕಿದೆ. ಅನುಷ್ಕಾ ಅವರ ವೈಯಕ್ತಿಕ ಜೀವನದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಕಾಲಕಾಲಕ್ಕೆ ಸುದ್ದಿಗಳು, ವಿಶೇಷವಾಗಿ ಅವರ ಮದುವೆ ಮತ್ತು ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳು..ಗಾಸಿಪ್‌ ಹಬ್ಬತ್ತಲೇ ಇದೆ.

ಬಾಹುಬಲಿ ಚಿತ್ರ ಬಂದ ಮೇಲೆ ಪ್ರಭಾಸ್ ಹೆಸರಿನ ಜತೆ ಅನುಷ್ಕಾ ಹೆಸರು ಅಂಟಿ ಕೊಡಿತ್ತು. ಬಳಿಕ ಟಾಲಿವುಡ್‌ನ ಖ್ಯಾತ ನಿರ್ದೇಶಕರೊಬ್ಬರ ಮಗನನ್ನು ಮದುವೆಯಾಗಲಿದ್ದಾರೆ ಎಂದು ಹಲವು ವೆಬ್‌ಸೈಟ್‌ಗಳಲ್ಲಿ ಸುದ್ದಿಯಾಗಿತ್ತು. ಆದರೆ ಅನುಷ್ಕಾ ಇದನ್ನು ನಿರಾಕರಿಸಿದ್ದರು.

ಹಾಗಾದರೆ ಯಾರನ್ನು ಮದುವೆಯಾಗುತ್ತಿದ್ದಾರೆ.ನಾಯಕ ಪ್ರಭಾಸ್ ಜೊತೆ ಮತ್ತೆ ಅನುಷ್ಕಾ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂಬ ಸುದ್ದಿ ಈಗಲೂ ವೈರಲ್ ಆಗುತ್ತಲೇ ಇದೆ. ಇದಕ್ಕೆ ಪ್ರತಿಕ್ರಿಯಿಸಿದ ಇಬ್ಬರೂ ಒಳ್ಳೆಯ ಸ್ನೇಹಿತರು ಎಂದು ಹೇಳಿದ್ದಾರೆ. ಆದರೂ ವದಂತಿಗಳು ಬರುತ್ತಲೇ ಇವೆ.

See also  ಮುನಿಸಿಕೊಂಡಿರುವ ನಟ ದರ್ಶನ್ -ಸುದೀಪ್ ಮತ್ತೆ ಒಂದಾಗ್ತಾರಾ..? ನಟಿ ಸುಮಲತಾ 60ನೇ ವರ್ಷದ ಹುಟ್ಟುಹಬ್ಬದಂದು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಕ್ಕೆ ಸಂಸದೆ ಹೇಳಿದ್ದೇನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget