ಕ್ರೈಂ

ಮಕ್ಕಳಾಗಿಲ್ಲ ಎಂದು ಪತ್ನಿಗೆ ಟೆಕ್ಕಿ ನಿತ್ಯ ಕಿರಿಕ್..! ಮನನೊಂದು ಇಂಜಿನೀಯರ್ ಪತ್ನಿ ಆತ್ಮಹತ್ಯೆ

184
Spread the love

ಬೆಂಗಳೂರು: ಮಕ್ಕಳಾಗಲಿಲ್ಲ ಎನ್ನುವ ಕಾರಣಕ್ಕೆ ಪತಿ ನೀಡುತ್ತಿದ್ದ ಹಿಂಸೆಯನ್ನು ತಾಳಲಾರದೆ ವಿವಾಹಿತ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವೀರಣ್ಣಪಾಳ್ಯದ ನಿವಾಸಿ ಸಂಗೀತಾ(26) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ  ಮಹಿಳೆ. ಸಂಗೀತಾ ಮೂಲತಃ ಮಂಡ್ಯದವರು.

ಕಳೆದ ಒಂದೂವರೆ ವರ್ಷದ ಹಿಂದೆ ನೆಲಮಂಗಲ ಮೂಲದ ವಿನಯ್ ನನ್ನು ಪ್ರೀತಿಸಿ ಮದುವೆಯಾಗಿದ್ದರು. ಬಳಿಕ ಕುಟುಂಬದಲ್ಲಿ ಬಿರುಕು ಉಂಟಾಗಿತ್ತು. ದಂಪತಿ ಇಬ್ಬರೂ ಬಹುರಾಷ್ಟ್ರೀಯ ಕಂಪನಿಯಲ್ಲಿ ಸಾಫ್ಟ್​​​ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಮಗುವಾಗಿಲ್ಲ ಎಂಬ ವಿಚಾರವಾಗಿ ಗಂಡ ವಿನಯ್ ಈಕೆಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತು ಸಂಗೀತಾ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

See also  ದೇವಸ್ಥಾನದ ಆವರಣದಲ್ಲೇ ನಟಿಗೆ ಕಿಸ್ ಕೊಟ್ಟ ನಿರ್ದೇಶಕ, ಹಿಗ್ಗಾಮುಗ್ಗ ಜಾಡಿಸಿದ ನೆಟ್ಟಿಗರು!
  Ad Widget   Ad Widget   Ad Widget