ಕರಾವಳಿಕ್ರೈಂವೈರಲ್ ನ್ಯೂಸ್

ಮಂಗಳೂರು: ಈಗ ಬರ್ತೆನೆಂತ ಬೈಕ್ ಏರಿದ ಮದುಮಗ ದಿಢೀರ್ ನಾಪತ್ತೆ..ಇಂದು ನಿಶ್ಚಯವಾಗಿದ್ದ ಮದುವೆಯೇ ರದ್ದು, ಕಣ್ಣೀರಿಟ್ಟ ಮದುಮಗಳು..!

ನ್ಯೂಸ್‌ ನಾಟೌಟ್‌: ಇನ್ನೇನು ಮದುವೆಗೆ ಎರಡು ದಿನ ಇತ್ತು. ಮದರಂಗಿ ಶಾಸ್ತ್ರದ ಪ್ರಕ್ರಿಯೆ ನಡೆಯಬೇಕಿತ್ತು. ತನ್ನ ಮದರಂಗಿ ಕಾರ್ಯಕ್ರಮಕ್ಕೆ ಹಣ್ಣು ತರಲು ಹೋದ ವರ ಮಾತ್ರ ವಾಪಸ್‌ ಬರಲೇ ಇಲ್ಲ…!

ಮಂಗಳೂರಿನ ತೌಡುಗೋಳಿ ವರ್ಕಾಡಿಯ ಮನೆಯಲ್ಲಿ ಮಂಗಳವಾರ ನಡೆಯಬೇಕಾಗಿದ್ದ ಮೆಹಂದಿ ಶಾಸ್ತ್ರಕ್ಕೆ ಸಿದ್ಧತೆ ಜೋರಾಗಿತ್ತು. ಈ ಸಂದರ್ಭ ಹಣ್ಣು ಖರೀದಿಗೆಂದು ವರ ತೆರಳಿದ್ದ. ಆದರೆ ಎಷ್ಟು ಹೊತ್ತು ಕಳೆದರೂ ವರ ಮಾತ್ರ ವಾಪಾಸ್‌ ಬರಲೇ ಇಲ್ಲ. ಎಲ್ಲಾ ಕಡೆ ಹುಡುಕಾಡಿದರೂ ವರ ಮಾತ್ರ ಸಿಗಲೇ ಇಲ್ಲ. ನಾಪತ್ತೆಯ ಕುರಿತು ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿದೆ. ವರ ನಾಪತ್ತೆಯಾದ ಕಾರಣ ಜೂ.1ರಂದು ನಡೆಯಬೇಕಿದ್ದ ಮದುವೆಯನ್ನು ರದ್ದುಗೊಳಿಸಲಾಯಿತು.
ತೌಡುಗೋಳಿ- ವರ್ಕಾಡಿ ದೇವಂದಪಡ್ಪುವಿನ ಉದ್ಯಮಿಯೊಬ್ಬರ ಪುತ್ರ ಕಿಶನ್‌ ಶೆಟ್ಟಿ (28) ನಾಪತ್ತೆಯಾದ ವರ. ಜೂ. 1ರಂದು ಕಿಶನ್‌ ಶೆಟ್ಟಿ ಅವರಿಗೆ ಉಪ್ಪಳ ಮೂಲದ ಯುವತಿಯೊಂದಿಗೆ ವಿವಾಹ ನಿಗದಿಯಾಗಿತ್ತು. ವಧುವಿನ ಮನೆಯಲ್ಲಿ ಅದಾಗಲೇ ಮೆಹಂದಿ ಶಾಸ್ತ್ರ ಮುಗಿದಿತ್ತು. ವರನ ಮನೆಯಲ್ಲಿ ಮಂಗಳವಾರ ನಡೆಯಬೇಕಿದ್ದ ಮೆಹಂದಿ ಶಾಸ್ತ್ರಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಮಂಗಳವಾರ ಮಧ್ಯಾಹ್ನ ಹಣ್ಣು ತರಲೆಂದು ವರ ಸ್ಕೂಟರ್‌ ಏರಿ ಮನೆಯಿಂದ ಹೊರಟಿದ್ದ. ಆ ಬಳಿಕ ದೇರಳಕಟ್ಟೆ ತಲುಪುತ್ತಿದ್ದಂತೆ ಪೊಲೀಸ್‌ ಮೂಲಗಳ ಪ್ರಕಾರ ಸುಮಾರು ಅರ್ಧ ತಾಸು ಯಾರಲ್ಲಿಯೋ ಫೋನಲ್ಲಿ ಮಾತನಾಡಿದ್ದ ಎಂದು ತಿಳಿದುಬಂದಿದೆ. ಆ ಬಳಿಕ ನಾಪತ್ತೆಯಾದ ವರ ಇನ್ನೂ ಮನೆಗೆ ಬಂದಿಲ್ಲ
.

Related posts

ಜ.5 ರಿಂದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ಮೇಳ

ಮಡಿಕೇರಿ: ಬೆಕ್ಕು, ನಾಯಿ, ಮೇಕೆ ಮರಿಗಳೇ ಇವುಗಳ ಟಾರ್ಗೆಟ್,ಮನೆಯೊಳಗೆ ನುಗ್ಗಿ ದಾಂಧಲೆ ನಡೆಸುತ್ತಿರುವ ವಾನರ ಸೇನೆ

ಬೈಕ್ ವೀಲಿಂಗ್ ಪುಂಡರ ಅಟ್ಟಹಾಸ, ಶಾಲಾ ಶಿಕ್ಷಕಿಗೆ ಗುದ್ದಿ ಪರಾರಿ, ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಿಕ್ಷಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ