Latestರಾಜ್ಯ

ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ, ಆರು ಮಂದಿ ಅಧಿಕಾರಿಗಳ ತಂಡದಿಂದ ದಾಖಲೆ ಪರಿಶೀಲನೆ

479

ನ್ಯೂಸ್‌ ನಾಟೌಟ್‌: ಕಾರವಾರದ ಶಾಸಕ ಸತೀಶ್‌ ಸೈಲ್‌ ಅವರ ಮನೆಗೆ ಬುಧವಾರ (ಆ.13) ನಸುಕಿನ ಜಾವ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಕಾರವಾರದ ಸದಾಶಿವಗಡದಲ್ಲಿರುವ ಶಾಸಕ ಸತೀಶ ಸೈಲ್ ಅವರ ಮನೆ ಮೇಲೆ ಆರು ಮಂದಿ ಅಧಿಕಾರಿಗಳನ್ನು ಒಳಗೊಂಡ ತಂಡ ನಾಲ್ಕು ವಾಹನಗಳಲ್ಲಿ ನಸುಕಿನ ಜಾವ ಆಗಮಿಸಿದ್ದು, ಮನೆಯೊಳಗೆ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದೆ ಎಂದು ಮೂಲಗಳು ತಿಳಿಸಿವೆ.

ಮನೆಯ ಸುತ್ತ ಬಿಗಿ ಭದ್ರತೆ ಒದಗಿಸಲಾಗಿದೆ. ಸಿಐಎಸ್ಎಫ್ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ.ಶಾಸಕ ಸತೀಶ ಸೈಲ್ ಮನೆಯಲ್ಲಿ ಇರಲಿಲ್ಲ. ಅವರ ಕುಟುಂಬ ಸದಸ್ಯರಿಂದ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

See also  ಮಂತ್ರಾಲಯ ರಾಯರ ಮಠದ ಹೆಸರಿನಲ್ಲಿ ನಕಲಿ ಯುಪಿಐ ಐಡಿಗಳು..! ರೂಂ ಬುಕ್ ಮಾಡುವಾಗ ಎಚ್ಚರಿಕೆ ವಹಿಸುವಂತೆ ಭಕ್ತರಿಗೆ ಮಠದಿಂದ ಸೂಚನೆ..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget