ಬೆಂಗಳೂರು

ಎನ್.ಐ.ಎಯಲ್ಲಿ ಪದವೀಧರರಿಗೆ ಉದ್ಯೋಗಾವಕಾಶ,ಸಂಬಳವೆಷ್ಟು ಗೊತ್ತಾ?

ನ್ಯೂಸ್ ನಾಟೌಟ್ : ರಾಷ್ಟೀಯ ತನಿಖಾ ಸಂಸ್ಥೆ ( NIA) ಯಲ್ಲಿ ಪದವಿಯಾದ ಅಭ್ಯರ್ಥಿಗಳಿಗೆ ಸುವರ್ಣಾವಕಾಶ.ಬಾರಿ ಮೊತ್ತದ ಸಂಬಳವೂ ನಿಮ್ಮ ಕೈ ಸೇರಲಿದೆ. ಹಾಗಾದ್ರೆ ಇಂದೇ ಆಸಕ್ತರು ಅರ್ಜಿ ಸಲ್ಲಿಸಿ. ಕೊನೆಯ ದಿನಾಂಕ ಜ. 14 .ರಾಷ್ಟೀಯ ತನಿಖಾ ಸಂಸ್ಥೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗಳು ಖಾಲಿ ಇದ್ದು, ಈ ಕೂಡಲೇ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು www.nia.gov.in ಈ ವೆಬ್ ಸೈಟ್ ಗೆ ಭೇಟಿ ನೀಡಿ.

ಹುದ್ದೆಗಳ ವಿವರ:

  • ಉಪ ಪೊಲೀಸ್ ವರಿಷ್ಠಾಧಿಕಾರಿ – 38 ಹುದ್ದೆಗಳು
  • ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ – 11 ಹುದ್ದೆಗಳು
  • ಒಟ್ಟು ಹುದ್ದೆಗಳು – 49
  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವ ವಿದ್ಯಾಲಯದಿಂದ ಪದವಿ ಮಾಡಿರಬೇಕು.
  • 56 ವರ್ಷದೊಳಗಿನ ಅಭ್ಯಥಿಗಳಾಗಿರಬೇಕು.
  • ಉಪ ಪೊಲೀಸ್ ವರಿಷ್ಠಾಧಿಕಾರಿ- ರೂ. 56,100 ರಿಂದ 1,77,500/- ರೂ. ಮಾಸಿಕ ವೇತನ.
  • ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ- ರೂ. 67,700 ರಿಂದ– 2,08,700/- ರೂ. ಮಾಸಿಕ ವೇತನ.
  • ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ.
  • ಈ ಹುದ್ದೆಗಳಿಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕೃತ ವೆಬ್ಸೈಟ್ www.nia.gov.in ಗೆ ಭೇಟಿ ಕೊಡಿ. ಅಲ್ಲಿ ನೀಡಲಾಗಿರುವ ಅಧಿಸೂಚನೆಯ ಮೆನುವಿನ ಮೇಲೆ ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.

Related posts

ನಟ ದರ್ಶನ್ & ಗ್ಯಾಂಗ್‌ ಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ..! ಇಷ್ಟಾದರೂ ದರ್ಶನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿಲ್ಲವೇಕೆ..?

ಮನೆಯೊಂದರ ಶೆಡ್‌ ನಲ್ಲಿ ಕಟ್ಟಿ ಹಾಕಿ ನಾಯಿ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ ವ್ಯಕ್ತಿ..! ದೂರು ದಾಖಲು

ಕಾಂಗ್ರೆಸ್ ಗ್ಯಾರಂಟಿಗಳನ್ನು ಹಾಡಿ ಹೊಗಳಿದ ರಾಜ್ಯಪಾಲ, ಗಣರಾಜ್ಯೋತ್ಸವ ವೇದಿಕೆಯಲ್ಲಿ ರಾಜ್ಯ ಸರ್ಕಾರದ ಗುಣಗಾನ