ನ್ಯೂಸ್ ನಾಟೌಟ್: ಉದ್ಯೋಗ ಅರಸಿ ಮಧ್ಯ ಆಫ್ರಿಕಾದ ಗಬಾನ್ ದೇಶಕ್ಕೆ ತೆರಳಿರುವ ಕರ್ನಾಟಕದ ಚನ್ನಗಿರಿ ತಾಲೂಕಿನ ಗೋಪನಾಳ್-ಅಸ್ತಾಪನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಹಕ್ಕಿ-ಪಿಕ್ಕಿ ಜನಾಂಗದ ನಾಟಿ ವೈದ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಧ್ಯ ಆಫ್ರಿಕಾದ ಗಬಾನ್ ದೇಶದಲ್ಲಿ ರಾಜಕೀಯ ಬೆಳವಣಿಗೆಯಿಂದ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹೊಸ ಸರ್ಕಾರ ವಿದೇಶಿಯರು ದೇಶ ಬಿಡುವಂತೆ ತಾಕೀತು ಮಾಡಿದೆ.
ಈ ಹಿನ್ನೆಲೆಯಲ್ಲಿ ಗಬಾನ್ ರಾಜಧಾನಿ ಲಿಬ್ರೆವಿಲ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಕರ್ನಾಟಕದ ಹಕ್ಕಿ-ಪಿಕ್ಕಿ ಜನಾಂಗದ 25 ಕ್ಕೂ ಹೆಚ್ಚು ಜನ ನಾಟಿ ವೈದ್ಯರು ಕಳೆದ ಆರು ತಿಂಗಳನಿಂದ ಲಿಬ್ರೆವಿಲ್ ನಲ್ಲಿ ವಾಸವಾಗಿದ್ದಾರೆ.
ಇದನ್ನೂ ಓದಿ:ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಮಗು ಸಾವು..! ತೀವ್ರ ರಕ್ತಸ್ರಾವದಿಂದ ಪ್ರಾಣಕಳೆದುಕೊಂಡ 3 ವರ್ಷದ ಕಂದಮ್ಮ..!
ಇದೀಗ, ಪೊಲೀಸರು 25ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ ಎನ್ನಲಾಗಿದೆ. “ನಮ್ಮ ಪಾಸ್ಪೋರ್ಟ್ ವಶಕ್ಕೆ ಪಡೆದು ತೊಂದರೆ ನೀಡುತ್ತಿದ್ದು, ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಇಲ್ಲಿನ ಕುಟುಂಬದ ಸದಸ್ಯರಿಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿದೇಶಾಂಗ ಇಲಾಖೆ ಗಮನ ಹರಿಸುವಂತೆ ಸಂಕಷ್ಟದಲ್ಲಿ ಸಿಲುಕಿರುವ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಸುಪ್ರೀಂಕೋರ್ಟ್ ನಿಂದ ಸುಟ್ಟ ನೋಟಿನ ಕಂತೆಗಳ ವಿಡಿಯೋ ಬಿಡುಗಡೆ..! ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧ ತನಿಖೆ..!