ಕ್ರೈಂದೇಶ-ಪ್ರಪಂಚ

ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ..! ಆದರೂ ಉಳಿಯಲಿಲ್ಲ ಪ್ರಯಾಣಿಕನ ಪ್ರಾಣ!

ನ್ಯೂಸ್ ನಾಟೌಟ್: ದೆಹಲಿಯಿಂದ ದೋಹಾಗೆ ತೆರಳುತ್ತಿದ್ದ ಇಂಡಿಗೋ ವಿಮಾನ ವೈದ್ಯಕೀಯ ತುರ್ತು ಪರಿಸ್ಥಿತಿ ಹಿನ್ನಲೆಯಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ಮಾರ್ಚ್ 13 ರಂದು ಭೂಸ್ಪರ್ಶ ಮಾಡಿದೆ ಎಂದು ವರದಿ ತಿಳಿಸಿದೆ.

ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ದೆಹಲಿಯಿಂದ ದೋಹಾಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು,  ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ಸೇವೆ ನೀಡಲಾಯಿತು. ಆದರೆ ಅಷ್ಟು ಹೊತ್ತಿಗಾಗಲೇ ಪ್ರಯಾಣಿಕ ಸಾವನ್ನಪ್ಪಿದ್ದ ಎಂದು ವೈದ್ಯಕೀಯ ತಂಡ ಸ್ಪಷ್ಟಪಡಿಸಿದೆ. ಪ್ರಯಾಣಿಕ ನೈಜೀರಿಯಾದ ಪ್ರಜೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಇಂಡಿಗೋ ಏರ್‌ಲೈನ್ ಹೇಳಿಕೆ ಬಿಡುಗಡೆ ಮಾಡಿದ್ದು, ಈ ಸುದ್ದಿಯಿಂದ ನಮಗೆ ಅತೀವ ದುಃಖವಾಗಿದೆ ಎಂದು ಹೇಳಿಕೊಂಡಿದೆ. ನಮ್ಮ ಪ್ರಾರ್ಥನೆಗಳು ಮತ್ತು ಸಂತಾಪಗಳು ಸಂತ್ರಸ್ತರ ಕುಟುಂಬದೊಂದಿಗೆ ಇವೆ. ಪ್ರಸ್ತುತ, ನಾವು ವಿಮಾನದ ಇತರ ಪ್ರಯಾಣಿಕರನ್ನು ಗಮ್ಯಸ್ಥಾನಕ್ಕೆ ಕರೆದೊಯ್ಯಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಹೇಳಿದೆ.

Related posts

ನೀವೂ ಬಿರಿಯಾನಿ ಪ್ರಿಯರಾ..? ಬಿರಿಯಾನಿ ಹೋಟೆಲ್‌ ನಿಂದ ಕೋಟಿ ಕೋಟಿ ಹಣ ವಶಕ್ಕೆ..! ಏನಿದು ಫೇಮಸ್ ಬಿರಿಯಾನಿ ಮಾರಾಟದ ವಂಚನೆ?

ಓರ್ವನನ್ನು ರಕ್ಷಣೆ ಮಾಡಲು ಹೋಗಿ ನಾಲ್ವರ ದುರಂತ ಅಂತ್ಯ..! ಸಿದ್ದಗಂಗಾ ಮಠದಲ್ಲಿ 6 ನೇ ತರಗತಿ ವಿದ್ಯಾಭ್ಯಾಸ ಮಾಡ್ತಿದ್ದ ಮಕ್ಕಳ ಈ ಸಾವಿಗೆ ಕಾರಣವೇನು? ಸಿದ್ದಗಂಗಾ ಮಠದಲ್ಲೀಗ ಮನಕಲಕುವ ನೀರವಮೌನ..!

ಮಗಳನ್ನು ಅಪಹರಿಸಿದ್ದಾರೆ ಎಂದು ಪೋಷಕರ ದೂರು! ಊರೆಲ್ಲ ಹುಡುಕಾಡಿ ಮನೆಗೆ ಬಂದಾಗ ಅಚ್ಚರಿ ಕಾದಿತ್ತು..!