ನ್ಯೂಸ್ ನಾಟೌಟ್: ಖ್ಯಾತ ಉದ್ಯಮಿ ಬಾಹ್ಯಾಕಾಶ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಎಲೋನ್ ಮಸ್ಕ್ ಇದೀಗ ಟೆಸ್ಲಾ ಕಂಪನಿ ಮೂಲಕ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿದ್ದಾರೆ.ಈ ಕಾರು ಟೆಸ್ಲಾದ ಜನಪ್ರಿಯ ‘ಮಾಡೆಲ್ ವೈ’ ನ ಫೇಸ್ ಲಿಫ್ಟ್ ಆವೃತ್ತಿಯಾಗಿದೆ.
2024 ರಲ್ಲಿ ವಿಶ್ವದಲ್ಲೇ ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಕಾರು ಟೆಸ್ಲಾ ಮಾಡೆಲ್ ವೈ. ಜಾಗತಿಕ ಮಟ್ಟದಲ್ಲಿ ಮಾಡೆಲ್ ವೈ ಜನಪ್ರಿಯತೆಯನ್ನು ಬಂಡವಾಳವಾಗಿಟ್ಟುಕೊಂಡು, ಕಂಪನಿಯು ತನ್ನ ಫೇಸ್‌ಲಿಫ್ಟ್ ಮಾದರಿಯನ್ನು ಪ್ರಾರಂಭಿಸಿತು. ಪ್ರಸ್ತುತ ಮಾಡೆಲ್ ವೈ ಫೇಸ್‌ಲಿಫ್ಟ್ ಮಾರಾಟವು ಏಷ್ಯಾದ ಆಯ್ದ ಮಾರುಕಟ್ಟೆಗಳಲ್ಲಿ ಮಾತ್ರ ಪ್ರಾರಂಭವಾಗಿದೆ. ಈ ಎಲೆಕ್ಟ್ರಿಕ್ ಕಾರು ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 719 ಕಿಲೋಮೀಟರ್ ವರೆಗೆ ಚಲಿಸಬಲ್ಲದು.
ಟೆಸ್ಲಾ ಸದ್ಯ ಅಮೆರಿಕದ ಉದ್ಯಮಿ ಎಲೋನ್ ಮಸ್ಕ್ ಒಡೆತನದಲ್ಲಿದೆ. BYD ಯಂತಹ ಚೀನಾದ ಕಂಪನಿಗಳಿಂದ ಹೆಚ್ಚುತ್ತಿರುವ ಸ್ಪರ್ಧೆಯನ್ನು ಗಮನದಲ್ಲಿಟ್ಟುಕೊಂಡು, ಮಸ್ಕ್ ಈ ಹೊಸ ಕಾರನ್ನು ಪರಿಚಯಿಸಿದ್ದಾರೆ. ಕಳೆದ ವರ್ಷ, ಚೀನಾದ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಟೆಸ್ಲಾಗೆ ಕಠಿಣ ಸವಾಲನ್ನು ನೀಡಿದ್ದವು. ಇದೀಗ ಹೊಸ ಕಾರಿನ ಮೂಲಕ ಚೀನಾ ಕಂಪನಿಗಳಿಗೆ ಪೈಪೋಟಿ ನೀಡುವ ಇಂಗಿತವನ್ನು ಟೆಸ್ಲಾ ವ್ಯಕ್ತಪಡಿಸಿದೆ.
ಜಾಗತಿಕ EV ಮಾರುಕಟ್ಟೆಯಲ್ಲಿ ಚೀನಾದ ಪ್ರಭಾವವು ವೇಗವಾಗಿ ಹೆಚ್ಚುತ್ತಿದೆ. ಚೀನಾ ವಿಶ್ವದ ಅತಿದೊಡ್ಡ EV ಮಾರುಕಟ್ಟೆಯಾಗಿದೆ. ಇಲ್ಲಿ BYD ಮತ್ತು ಶವೋಮಿನಂತಹ ಕಂಪನಿಗಳು ವಿಶ್ವ ದರ್ಜೆಯ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತವೆ. BYD ಭಾರತ, ಅಮೇರಿಕಾ ಮತ್ತು ಯುರೋಪ್ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತದೆ.
ಇದು 15.5 ಇಂಚಿನ ಟಚ್ ಸ್ಕ್ರೀನ್ ಅನ್ನು ಹೊಂದಿರುತ್ತದೆ, ಇದರಲ್ಲಿ ಎಲ್ಲಾ ನಿಯಂತ್ರಣಗಳು ಲಭ್ಯವಿದೆ. ಹಿಂಬದಿಯ ಪ್ರಯಾಣಿಕರಿಗೆ 8 ಇಂಚಿನ ಟಚ್‌ಸ್ಕ್ರೀನ್ ನೀಡಲಾಗಿದೆ. ಇದಲ್ಲದೇ ಸೆಲ್ಫ್ ಡ್ರೈವಿಂಗ್ ಪ್ಯಾಕೇಜುಗಳೂ ಲಭ್ಯವಿವೆ. ಹೊಸ ಟೆಸ್ಲಾ ಮಾಡೆಲ್ Y ನ RWD ಆವೃತ್ತಿಯ ಸಿಂಗಲ್ ಚಾರ್ಜ್ ಶ್ರೇಣಿಯು 662 ಕಿಲೋಮೀಟರ್ ಆಗಿದೆ. AWD ಆವೃತ್ತಿಯು ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 719 ಕಿಲೋಮೀಟರ್ ದೂರವನ್ನು ಕ್ರಮಿಸಬಲ್ಲದು. ಈ ಎಲೆಕ್ಟ್ರಿಕ್ ಕಾರಿನ ಆರ್‌ಡಬ್ಲ್ಯೂಡಿ ಆವೃತ್ತಿಯ ಬೆಲೆ ಸುಮಾರು 30.94 ಲಕ್ಷ ರೂಪಾಯಿಗಳಾಗಿದ್ದರೆ, ದೀರ್ಘ ಶ್ರೇಣಿಯ AWD ಆವೃತ್ತಿಯ ಬೆಲೆ ಸುಮಾರು 35.63 ಲಕ್ಷ ರೂಪಾಯಿಗಳಾಗಿವೆ.