ಕರಾವಳಿ

ಧರ್ಮಸ್ಥಳ:ಕೊಕ್ಕಡದಲ್ಲಿ ಒಂಟಿ ಸಲಗ ಪ್ರತ್ಯಕ್ಷ,ಸ್ಥಳೀಯರಲ್ಲಿ ಹೆಚ್ಚಿದ ಆತಂಕ

427

ನ್ಯೂಸ್ ನಾಟೌಟ್: ದಕ್ಷಿಣ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಉಪಟಳ ಜಾಸ್ತಿಯಾಗುತ್ತಿದ್ದು, ಅದರಲ್ಲೂ ಕಾಡಾನೆಗಳು ಹಿಂಡು ಹಿಂಡಾಗಿ ಬಂದು ತೋಟಗಳಿಗೆ ನುಗ್ಗಿ ಹಾನಿ ಮಾಡುತ್ತಿದೆ. ಇದೀಗ ತೀರಾ ಅಪರೂಪವೆಂಬಂತೆ ಧರ್ಮಸ್ಥಳ ಸಮೀಪವಿರುವ ಕೊಕ್ಕಡ ಗ್ರಾಮದ ಪಟ್ರಮೆಯಲ್ಲಿನ ಸೇತುವೆ ಬಳಿ ಗಂಡು ಕಾಡಾನೆಯೊಂದು ಇಂದು ಪ್ರತ್ಯಕ್ಷವಾಗಿದೆ.ಇದರಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.

ಸೇತುವೆ ಬಳಿ ಇದ್ದ ಕಾಡಾನೆ ಜನರನ್ನು ಕಂಡು ತಕ್ಷಣ ಮಸೀದಿ ಬಳಿಯಿಂದ ಪಂಚವಟಿ ಶ್ಯಾಮ್ ಪ್ರಸಾದ್ ಎಂಬವರ ತೋಟಕ್ಕೆ ನುಗ್ಗಿದೆ ಎಂದು ತಿಳಿದು ಬಂದಿದೆ.ಕೆಲ ಸಮಯದ ಬಳಿಕ ಹೊಳೆದಾಟಿ ಮರ್ಲಾಜೆ ಹರಿರಾವ್‌ರವರ ತೋಟದ ಮೂಲಕ ಕಾಡು ಸೇರಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

See also  ಸುಳ್ಯ : ಬಳ್ಪದಲ್ಲಿ ಮಂಗಗಳ ಮಾರಣಹೋಮ..!, ಏನಿದು ಅಮಾನವೀಯ ಕೃತ್ಯ?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget