ವಿಡಿಯೋವೈರಲ್ ನ್ಯೂಸ್

ಮೊಸಳೆ ಬಾಯಿಯಿಂದ ತನ್ನ ಕಂದನನ್ನು ರಕ್ಷಿಸಿದ ತಾಯಿ ಆನೆ..! ಇಲ್ಲಿದೆ ವೈರಲ್ ವಿಡಿಯೋ

225

 ನ್ಯೂಸ್‌ ನಾಟೌಟ್‌:   ಇಲ್ಲಿದೆ ವೈರಲ್ ವಿಡಿಯೋ ಮಕ್ಕಳಿಗಾಗಿ ಸಾವನ್ನೇ ಎದುರಿಸುವುದಕ್ಕೂ ತಾಯಿ ಹಿಂದೆ ಮುಂದೆ ನೋಡುವುದಿಲ್ಲ. ಇದು ಕೂಡಾ ಅಂತಹದ್ದೇ ಒಂದು ರೋಚಕ ದೃಶ್ಯ, ಆನೆಗಳು ತಮ್ಮ ಬಳಗದ ಬೇರೆ ಆನೆಗಳಿಗೆ ಕಷ್ಟ ಎದುರಾದಾಗ ಇವುಗಳು ಒಂದು ಕ್ಷಣವೂ ಯೋಚಿಸದೆ ರಕ್ಷಣೆಗೆ ಧಾವಿಸಿ ಬರುತ್ತವೆ ಅಂತಹ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆಕಸ್ಮಿಕವಾಗಿ ಮೊಸಳೆಯ ಬಾಯಿಯಲ್ಲಿ ಸಿಲುಕಿಕೊಂಡ ಆನೆಯೊಂದು ಮೊಸಳೆಯಿಂದ ತನ್ನ ಮರಿಯನ್ನು ರಕ್ಷಿಸಿಕೊಳ್ಳುವ ದೃಶ್ಯ ರೋಚಕವಾಗಿದೆ.

ಪುಟಾಣಿ ಆನೆ ನೀರಿನಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿರುತ್ತದೆ. ತಾಯಿ ಕಂದನ ಬೆಂಗಾವಲಿಗೆ ನಿಂತಿರುತ್ತಾಳೆ. ಈ ವೇಳೆ, ಕಂದನ ಮೇಲೆ ದಾಳಿಗೆ ಹೊಂಚು ಹಾಕಿ ಮೊಸಳೆ ಬರುವ ವೇಳೆ ಆನೆ ಮರಿ ಜಾರಿ ಬೀಳುತ್ತದೆ ಈ ವೇಳೆ ತಾಯಿ ಆಣೆ ಮೊಸಳೆಯ ಇರುವಿಕೆ ಕಂಡು ತಕ್ಷಣ ದಾಳಿ ಮಾಡಿ ಮರಿ ಆನೆಯನ್ನು ರಕ್ಷಸಿದ ದೃಶ್ಯವೇ ರೋಚಕ.

See also  ಏಪ್ರಿಲ್ ನಲ್ಲಿದೆ ವರ್ಷದ ಮೊದಲ ಸೂರ್ಯಗ್ರಹಣ, ಯಾವ ರಾಶಿಯವರಿಗೆ ಹೆಚ್ಚು ಪ್ರಭಾವ ಬೀರಲಿದೆ..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget