ಕೊಡಗುಕೊಡಗು

ಮಡಿಕೇರಿ:ಹಾಡಹಗಲಿನಲ್ಲಿಯೇ ರಸ್ತೆಯಲ್ಲೇ ಸಂಚರಿಸುತ್ತಿರುವ ಕಾಡಾನೆಗಳು,ಕಾಡಿಗೆ ಓಡಿಸಿದರೂ ರಸ್ತೆಯತ್ತ ಹೆಜ್ಜೆಯಿಡುತ್ತಿರುವ ಸಲಗ!

78
Spread the love

ನ್ಯೂಸ್‌ ನಾಟೌಟ್‌ :ಮಡಿಕೇರಿ ಸಮೀಪದ ಸೋಮವಾರ ಪೇಟೆ ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಜಂಕ್ಷನ್ ಬಳಿ ಎರಡು ಕಾಡಾನೆಗಳು ಹಾಡ ಹಗಲಿನಲ್ಲಿಯೇ ಸಂಚರಿಸುತ್ತಿರುವ ಬಗ್ಗೆ ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೊ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು ದೃಶ್ಯ ವೈರಲ್ ಆಗಿದೆ.

ಈ ಕುರಿತು ಮಾತನಾಡಿರುವ ಅರಣ್ಯಾಧಿಕಾರಿ ಚೇತನ್ ‘ಇದು ಕಾಡಾನೆ ಓಡಿಸುವಾಗ ಭಾನುವಾರ ನಡೆದ ಘಟನೆ ಎಂದು ಸ್ಪಷ್ಟಪಡಿಸಿದ್ದಾರೆ.ಅರಣ್ಯ ಇಲಾಖೆ ಸಿಬ್ಬಂದಿ ತೋಟಗಳಿಗೆ ನುಗ್ಗಿದ್ದ ಕಾಡಾನೆಗಳನ್ನು ಓಡಿಸುವಾಗ ಅವು ರಸ್ತೆಯನ್ನು ಹಾದು ಹೋದವು. ನಮ್ಮ ಸಿಬ್ಬಂದಿ ಕಾಡಾನೆಗಳಿಗೆ ಸ್ಪಲ್ಪ ದೂರದಲ್ಲೇ ಇದ್ದರು. ಈ ವೇಳೆ ವಾಹನ ಸಂಚಾರವನ್ನು ತಡೆ ಹಿಡಿಯಲಾಗಿತ್ತು’ ಎಂದು ಹೇಳಿದ್ದಾರೆ.

See also  ಕೊಡಗು: ಗಾಂಜಾ ಸರಬರಾಜು ಮಾಡುತ್ತಿದ್ದ ಬೆಡ್ ಶೀಟ್ ಮಾರಾಟಗಾರರು ಅರೆಸ್ಟ್..! ಖಾಸಗಿ ಬಸ್ ನಿಲ್ದಾಣದಲ್ಲಿ ಮಾರಾಟ..!
  Ad Widget   Ad Widget   Ad Widget   Ad Widget   Ad Widget   Ad Widget