ಕಾಸರಗೋಡುವಿಡಿಯೋವೈರಲ್ ನ್ಯೂಸ್

ಕೇರಳ: ಬಾವಿಗೆ ಬಿದ್ದ ಮರಿಯಾನೆಯನ್ನು ರಕ್ಷಿಸಿದ್ದೇಗೆ ತಾಯಿ ಆನೆ..? ಇಲ್ಲಿದೆ ವಿಡಿಯೋ

159

ನ್ಯೂಸ್ ನಾಟೌಟ್: ಬಾವಿಗೆ ಬಿದ್ದ ಮರಿಯಾನೆಯೊಂದನ್ನು ತಾಯಿ ಆನೆ ರಕ್ಷಿಸಿರುವ ಅಪರೂಪದ ಘಟನೆ ಕೇರಳದ ಎರ್ನಾಕುಲಂನ ಮಲಯತ್ತೂರ್‌ ನಲ್ಲಿ ನಡೆದಿದೆ .

ಬುಧವಾರ(ಜುಲೈ 10) ಬೆಳಗ್ಗೆ ಇಲ್ಲಿತ್ತೋಟ್ ಒಂದನೇ ಬ್ಲಾಕ್‌ನಲ್ಲಿರುವ ಸಾಜು ಎಂಬವರ ಮನೆಯ ಬಾವಿಗೆ ಮರಿಯಾನೆ ಬಿದ್ದಿತ್ತು. ಆಗ ಆನೆಗಳ ಹಿಂಡು ಘೀಳಿಟ್ಟ ಸದ್ದನ್ನು ಕೇಳಿದ ಸ್ಥಳೀಯರಿಗೆ ಈ ಘಟನೆ ಗಮನಕ್ಕೆ ಬಂದಿದೆ. ಕೂಡಲೇ ಸ್ಥಳೀಯರು ಅರಣ್ಯ ಇಲಾಖೆಗೆ ಈ ಕುರಿತು ಮಾಹಿತಿ ನೀಡಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದರಾದರೂ, ಕಾಡಾನೆಗಳ ಹಿಂಡು ಬಾವಿಯ ಬಳಿಯೇ ಬೀಡು ಬಿಟ್ಟಿದ್ದುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಗಲು ಸಾಧ್ಯವಾಗಿಲ್ಲ. ಹೀಗಾಗಿ ಅರಣ್ಯ ಸಿಬ್ಬಂದಿಗಳು ಆನೆಗಳ ಹಿಂಡನ್ನು ಚದುರಿಸಲು ಮುಂದಾಗಿದ್ದಾರೆ. ಈ ವೇಳೆ ತಾಯಿ ಆನೆಯು ಬಾವಿಯ ದಂಡೆಗೆ ಕಟ್ಟಿದ್ದ ಕಲ್ಲುಗಳನ್ನು ಕೆಡವಿ, ಆ ಕಲ್ಲುಗಳ ಮೇಲೆ ಮರಿಯಾನೆ ನಿಲ್ಲುವಂತೆ ಮಾಡಿ ಬಾವಿಯಿಂದ ಮೇಲೇರಲು ದಾರಿ ಮಾಡಿಕೊಟ್ಟಿದೆ. ಮರಿಯಾನೆ ಬಾವಿಯಿಂದ ಮೇಲೇರಿ ಬಂದ ನಂತರ, ಆನೆಯ ಹಿಂಡು ಕಾಡಿನತ್ತ ತೆರಳಿವೆ ಎನ್ನಲಾಗಿದೆ.

Click 👇

https://newsnotout.com/2024/07/rahul-dravid-returns-2-5-crore-and-that-decision-has-a-reason-cricket-bcci
https://newsnotout.com/2024/07/darshan-accued-no-and-hair-cut-kannada-news-viral-video
https://newsnotout.com/2024/07/team-india-newly-appointed-coach-kannada-news-bcci
https://newsnotout.com/2024/07/budget-central-government-kannada-news-nda-and-modi-in-third-term
https://newsnotout.com/2024/07/urvashi-rautela-hospitalised-kannada-news-during-film-shoot-balayya
See also  ಕೇಜ್ರಿವಾಲ್‌ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿದ ಕೋರ್ಟ್‌..! ಚುನಾವಣೆ ಮುಗಿಯುವವರೆಗೂ ದಿಲ್ಲಿ ಸಿಎಂ ಬಂಧನದಲ್ಲಿರ್ತಾರಾ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget