ಕರಾವಳಿದಕ್ಷಿಣ ಕನ್ನಡ

ಗೋಳಿತೊಟ್ಟು ರಸ್ತೆಯಲ್ಲಿ ತಡರಾತ್ರಿ ಕಾಡಾನೆ ವಾಕಿಂಗ್..! ರಾತ್ರಿ ಸಂಚರಿಸುವ ನಾಗರೀಕರೇ ಎಚ್ಚರ..ಎಚ್ಚರ..!

293

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಕಾಡಿನಿಂದ ನಾಡಿಗೆ ಆನೆಗಳು ಬರುವುದು ಸಾಮಾನ್ಯವಾಗಿ ಬಿಟ್ಟಿದೆ. ಹಾಗೆ ಬಂದು ಹೋಗುವ ಕಾಡಾನೆಗಳು ಕೃಷಿ ಸಂಪತ್ತನ್ನು ನಾಶ ಮಾಡಿ ಹೋಗುತ್ತಿವೆ.

ಇದೀಗ ಮನುಷ್ಯನ ಜೀವಕ್ಕೇ ಅಪಾಯವನ್ನು ತಂದೊಡ್ಡುವ ಸಾಧ್ಯತೆಗಳು ಹೆಚ್ಚುತ್ತಿವೆ. ಹೌದು, ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಸಮೀಪದ ಗೋಳಿತೊಟ್ಟು ಅನಿಲ ಪರಿಸರದಲ್ಲಿ ಶನಿವಾರ (ಏ.೬) ರಾತ್ರಿ ಕಾಡಾನೆಗಳು ಕಾಣಿಸಿಕೊಂಡಿವೆ. ರಸ್ತೆಯಲ್ಲಿ ಅಡ್ಡಾಡಿವೆ.

ಇಂದು ಕೂಡ ಅದೇ ದಾರಿಯಲ್ಲಿ ಕಾಡಾನೆಗಳು ಬರುವ ಸಾಧ್ಯತೆ ಇದೆ. ಹೀಗಾಗಿ ರಾತ್ರಿ ಮಾರ್ಗದಲ್ಲಿ ಸಂಚರಿಸುವ ನಾಗರೀಕರು ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಸೂಚನೆ ನೀಡಿದ್ದಾರೆ. ಮನೆಯ ನಾಯಿಗಳು ರಾತ್ರಿ ವೇಳೆ ಬೊಗಳಿದರೆ ತೋಟದ ಕಡೆ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಹೋಗಬೇಡಿ ಎಂದು ಮುನ್ಸೂಚನೆ ನೀಡಲಾಗಿದೆ. ಅಲ್ಲದೆ ಕಾಡಾನೆಗಳು ಕಂಡು ಬಂದರೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

See also  'ಹಣಕ್ಕೆ ಆಸೆ ಪಟ್ಟು ಕೆಟ್ಟ ಪಾತ್ರ, ಸಿನಿಮಾಗಳನ್ನ ಮಾಡಿಬಿಟ್ಟೆ, ಈಗ ನಂಗೆ ಅಸಹ್ಯ ಆಗ್ತಿದೆ' , ಮುಂಬೈಗೆ ಬಂದ ನಟಿಗೆ ಆಗಿದ್ದೇನು..? ಅನುಭವ ತೆರದಿಟ್ಟ ಖ್ಯಾತ ನಟಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget