ಕರಾವಳಿ

ಹೆದ್ದಾರಿಯಲ್ಲೇ ಮರಿಗೆ ಜನ್ಮ ನೀಡಿದ ಆನೆ

ನ್ಯೂಸ್ ನಾಟೌಟ್: ತಮಿಳುನಾಡು–ಕೇರಳ ಸಂಪರ್ಕಿಸುವ ವಾಹನ ದಟ್ಟಣೆಯ ಮಾರಾಯೂರ್ ಹೆದ್ದಾರಿಯಲ್ಲೇ ಆನೆಯೊಂದು ಮರಿಗೆ ಜನ್ಮ ನೀಡಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಮಂಗಳವಾರ ನಸುಕಿನ ಜಾವ ನಡೆದಿದೆ.

ಇದರಿಂದ ಸುಮಾರು ಒಂದು ತಾಸಿಗೂ ಅಧಿಕ ಹೊತ್ತು ಮಾರಾಯೂರ್–ಇಡುಕ್ಕಿ ಹೆದ್ದಾರಿ ಬಂದ್ ಆಗಿತ್ತು. ತುಂಬು ಗರ್ಭಿಣಿಯಾಗಿದ್ದ ಆನೆ ಹೆರಿಗೆ ಬೇನೆ ತಾಳಲಾರದೇ ರಸ್ತೆಗೆ ಬಂದಿದೆ. ಕಡೆಗೆ ಅಲ್ಲಿಯೇ ಮುದ್ದಾದ ಮರಿಗೆ ಜನ್ಮ ನೀಡಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಬದಿಯಲ್ಲೂ ನಿಂತಿದ್ದ ವಾಹನ ಸವಾರರು ಗಜಪ್ರಸವಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಬಳಿಕ ಆನೆ ತನ್ನ ಮರಿಯೊಂದಿಗೆ ಕಾಡಿನೊಳಗೆ ಹೋಗಿದೆ ಎಂದು ಇಡುಕ್ಕಿ ವಲಯ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೊಗಳು ಸ್ಥಳೀಯ ಮಾಧ್ಯಮಗಳಲ್ಲಿ ಬಿತ್ತರಗೊಂಡು ಗಮನ ಸೆಳೆದಿವೆ.

Related posts

ಸುಳ್ಯ: ಲಂಚ ಪಡೆದಾಗ ಸಿಕ್ಕಿಬಿದ್ದ ಗ್ರಾಮ ಲೆಕ್ಕಾಧಿಕಾರಿಗೆ ಕಾನೂನು ಪ್ರಕಾರ ಶಿಕ್ಷೆ, ಮಂಗಳೂರು ಲೋಕಾಯುಕ್ತ ಪೊಲೀಸ್ ಹೇಳಿದ್ದೇನು..? ವಿಡಿಯೋ ವೀಕ್ಷಿಸಿ

NMC:ಸಾಂಸ್ಕೃತಿಕ ಉತ್ಸವ ಪರಂವಃ-2023,ರೋಟರಿ ಪದವಿ ಪೂರ್ವ ಕಾಲೇಜು: ಚಾಂಪಿಯನ್,ಎನ್ನೆಂಪಿಯುಸಿ ಸುಳ್ಯ: ರನ್ನರ್ಸ್

ಕಲ್ಲುಗುಂಡಿಯಲ್ಲಿ ತಡರಾತ್ರಿ ಅಗ್ನಿ ದುರಂತ