ಕರಾವಳಿ

ಹಾಸನದಲ್ಲಿ ಶಾರ್ಪ್ ಶೂಟರ್ ವೆಂಕಟೇಶ್ ದುರಂತ ಅಂತ್ಯದ ಬಳಿಕ ಭೀಮನ ಪರಿಸ್ಥಿತಿ ಹೇಗಿದೆ? ಸ್ಥಳೀಯರು ಸೋಶಿಯಲ್ ಮೀಡಿಯಾ ಅಭಿಯಾನ ನಡೆಸಿ ಹೇಳಿದ್ದೇನು?

ನ್ಯೂಸ್ ನಾಟೌಟ್ : ಆನೆಯೊಂದು ಗಾಯಗೊಂಡು ಬಳಲುತ್ತಿದೆ ಎಂದು ಚಿಕಿತ್ಸೆ ಕೊಡಿಸಲು ಮುಂದಾದ ಶಾರ್ಪ್ ಶೂಟರ್ ವೆಂಕಟೇಶ್ ಅವರನ್ನೇ ತೀವ್ರವಾಗಿ ಗಾಯಗೊಂಡಿದ್ದ ಆನೆ ತುಳಿದಿದ್ದ ಘಟನೆ ಇತ್ತೀಚೆಗೆ ಹಾಸನದಿಂದ ವರದಿಯಾಗಿತ್ತು. ಘಟನೆಯಲ್ಲಿ ವೆಂಕಟೇಶ್ ಅವರು ಇಹಲೋಕ ತ್ಯಜಿಸಿದ್ದರು.

ಆದರೆ ತೀವ್ರವಾಗಿ ಗಾಯಗೊಂಡಿದ್ದ ಆನೆ ಭೀಮ ಚಿಕಿತ್ಸೆ ಸಿಗದೇ ನರಳಾಡುತ್ತಿರೋ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ಇದರ ನರಳಾಟಕ್ಕೆ ಇಡೀ ನಾಗರಿಕ ಸಮಾಜ ದಯವಿಟ್ಟು ಭೀಮನನ್ನು ಉಳಿಸಿ ಎನ್ನುವ ಮನವಿಯನ್ನು ಮಾಡುತ್ತಿದೆ.ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನವೇ ಶುರುವಾಗ್ಬಿಟ್ಟಿದೆ.

ಕಳೆದ ಆಗಸ್ಟ್ 31ರಂದು ಭೀಮನಿಗೆ ಚಿಕಿತ್ಸೆ ನೀಡುವ ಕಾರ್ಯಾಚರಣೆ ವೇಳೆ ವೆಂಕಟೇಶ್ ಅವರ ಮೇಲೆ ಆನೆ ದಾಳಿ ನಡೆಸಿತ್ತು. ಈ ವೇಳೆ ಗಾಯಗೊಂಡಿದ್ದ ಶಾರ್ಪ್ ಶೂಟರ್ ವೆಂಕಟೇಶ್​​ ಬಾರದ ಲೋಕಕ್ಕೆ ತೆರಳಿದ್ದರು. ಶಾರ್ಪ್ ಶೂಟರ್ ವೆಂಕಟೇಶ್ ದುರಂತ ಅಂತ್ಯದ ಬಳಿಕ ಅರಣ್ಯ ಇಲಾಖೆ ಭೀಮನಿಗೆ ಚಿಕಿತ್ಸೆ ನೀಡುವ ಕಾರ್ಯಾಚರಣೆಯನ್ನೇ ಕೈ ಬಿಟ್ಟಿದೆ ಅಂತೆ. ಹೀಗಾಗಿ ಭೀಮನ ನರಳಾಟ ಜೋರಾಗಿದೆ.

ಹೀಗಾಗಿ ಭೀಮನಿಗೆ ಆಗಿರುವ ಗಾಯವನ್ನು ಕಡಿಮೆ ಮಾಡೋದಕ್ಕೆ ವೆಂಕಟೇಶ್ ಅವರು ಬಿಟ್ರೆ ಬೇರೆ ಯಾರಿಗೂ ಸಾಧ್ಯವಿಲ್ಲದಂತಾಂಗಿದೆ.ಹೀಗಾಗಿ ದಿನ ಕಳೆದಂತೆ ಅದರ ನೋವು ಜಾಸ್ತಿಯಾಗುತ್ತಿದ್ದು, ಆನೆ ಭೀಮ ಓಡಾಡಲು ಸಾಧ್ಯವಾಗದೇ ಒಂದೆಡೆಯೇ ನಿಲ್ಲುತ್ತಿದೆ. ಕಾಡಾನೆಯ ಬೆನ್ನಿನ ಹಿಂಭಾಗದಲ್ಲಿ ಗಾಯ ಕೊಳೆಯುತ್ತಿದೆ. ಹೀಗಾಗಿ ಚಿಕಿತ್ಸೆ ನೀಡದಿದ್ದರೆ ಭೀಮ ಬದುಕುವುದು ಕಷ್ಟ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತು ಸ್ಥಳೀಯರು ಭೀಮನನ್ನು ಕಂಡು ಮರುಕ ವ್ಯಕ್ತ ಪಡಿಸುತ್ತಿದ್ದಾರೆ.ಬಹುಶಃ ಸೂಕ್ತ ಚಿಕಿತ್ಸೆ ನೀಡಿದ್ದೆ ಆದಲ್ಲಿ ಭೀಮ ಚೇತರಿಸಬಲ್ಲ. ದಯವಿಟ್ಟು ಆತನನ್ನು ಉಳಿಸಿ ಎಂದು ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು ಮಾಡಿದ್ದಾರೆ. ಭೀಮನಿಗೆ ಶೀಘ್ರವೇ ಚಿಕಿತ್ಸೆ ನೀಡುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Related posts

ಭಗವನ್ನಾಮ ಸ್ಮರಣೆಯಿಂದ ಜೀವನ ಸಾರ್ಥಕ: ಮಾಣಿಲ ಶ್ರೀ

ರಶ್ಮಿಕಾ ಮಂದಣ್ಣ ಏನ್ ಮಾಡ್ತಿದ್ದಾರೆ ಅರ್ಥ ಆಯ್ತಾ?,ಕೊಡಗಿನ ಬೆಡಗಿ ಕನ್ನಡಿ ಮುಂದೆ ಈ ರೀತಿ ನಿಂತಿದ್ಯಾಕೆ?

77ನೇ ವರ್ಷದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜನೆ, ಆಸಕ್ತರು ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ