ಕರಾವಳಿಸುಳ್ಯ

ಸಂಪಾಜೆಯ ನೆಲ್ಲಿಕುಮೇರಿ ಬಳಿಯ ಮುತ್ತು ಮಾರಿಯಮ್ಮ ದೇವಸ್ಥಾನಕ್ಕೆ ಆನೆ ದಾಳಿ, ಅಪಾರ ನಷ್ಟ

ನ್ಯೂಸ್ ನಾಟೌಟ್ : ಸಂಪಾಜೆಯ ನೆಲ್ಲಿ ಕುಮೇರಿ ಬಳಿಯ ಮುತ್ತು ಮಾರಿಯಮ್ಮ ದೇವಸ್ಥಾನಕ್ಕೆ ಆನೆ ದಾಳಿ ನಡೆದಿದೆ. ಈ ವೇಳೆ ದೇವಸ್ಥಾನದ ಕಾಂಪೌಂಡನ್ನು ಪುಡಿಗೈದು ಬಾಳೆ ಗಿಡಗಳನ್ನು ನಾಶ ಮಾಡಿದೆ. ಅಲ್ಲದೇ ಶೀಟ್ ಗಳನ್ನು ಮುರಿದು ಹಾಕಿವೆ ಎಂದು ತಿಳಿದು ಬಂದಿದೆ.

ಕಳೆದ ಸಲವೂ ಇದೇ ಸ್ಥಳಕ್ಕೆ ಆನೆ ದಾಳಿಯಾಗಿದ್ದನ್ನ ಸ್ಮರಿಸಬಹುದು. ಸಂಪಾಜೆ ಸುತ್ತಮುತ್ತಲಿನ ಪರಿಸರದಲ್ಲಿ ಸತತ ಆನೆ ದಾಳಿ ಪ್ರಕರಣಗಳು ನಡೆಯುತ್ತಿದ್ದರೂ ಇದುವರೆಗೂ ಯಾವುದೇ ಕ್ರಮ ತೆಗೆದು ಕೊಂಡಿಲ್ಲ.ಆನೆ ದಾಳಿಯಿಂದಾಗಿ ಕೃಷಿ ಭೂಮಿಗೆ ಹಾನಿಯಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.ಕಳೆದ ಕೆಲವು ವರ್ಷಗಳಿಂದ ಈ ಘಟನೆ ಈ ಭಾಗದ ಜನರ ನಿದ್ದೆ ಕೆಡಿಸುವಂತೆ ಮಾಡಿದೆ.

Related posts

ಬೆಳ್ತಂಗಡಿ: ಭಾರಿ ಮಳೆ, ಶಾಲೆಗಳಿಗೆ ರಜೆ

ಅಖಿಲ ಭಾರತ ರಾಷ್ಟ್ರೀಯ ಬೀಚ್ ಕಬಡ್ಡಿಗೆ ಸುಳ್ಯದ ಎನ್ ಎಂಸಿ ವಿದ್ಯಾರ್ಥಿ ಆಯ್ಕೆ, ಬಿಹಾರದ ಕೂಟದಲ್ಲಿ ಮಿಂಚಲಿದೆ ಕರ್ನಾಟಕ ತಂಡ

ಬೆಳಗಾವಿ ಸುವರ್ಣ ಸೌಧದ ಮುಂಭಾಗದಲ್ಲಿ ಹಲಸಿನ ಗಿಡ ನೆಟ್ಟ ಪುತ್ತೂರು ಶಾಸಕ..!ಅಶೋಕ್ ರೈಯವರ ಪರಿಸರ ಕಾಳಜಿಗೆ ಮೆಚ್ಚುಗೆ ಸೂಚಿಸಿದ ಜನ