ಕರಾವಳಿಕ್ರೈಂ

ಕಡಬ ಆನೆ ದಾಳಿ ಪ್ರಕರಣ: ಸ್ಥಳಕ್ಕೆ ಸಚಿವರು, ಜಿಲ್ಲಾಧಿಕಾರಿಗಳು ಭೇಟಿ, ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ

415

ನ್ಯೂಸ್ ನಾಟೌಟ್: ಬೆಳ್ಳಂಬೆಳಗ್ಗೆ ಆನೆ ದಾಳಿ ನಡೆಸಿ ಯುವತಿ ಸಹಿತ ಇಬ್ಬರು ಮೃತಪಟ್ಟ ಘಟನೆ ಕಡಬ ತಾಲೂಕಿನ ಕುಟುಪಾಡಿ ಗ್ರಾಮದ ಮೀನಾಡಿ ಸಮೀಪ ನಡೆದಿದೆ. ಇದಾದ ಬಳಿಕ ಸ್ಥಳೀಯರ ಆಕ್ರೋಶ ಭುಗಿಲೆದ್ದಿತ್ತು. ಅರಣ್ಯಧಿಕಾರಿ, ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ಹೊರಹಾಕಿ ಸಾರ್ವಜನಿಕರು ಪ್ರತಿಭಟಿಸಿದ್ದರು, ಘಟನಾ ಸ್ಥಳದಲ್ಲಿ ಕೆಲಕಾಲ ಉದ್ವಿಘ್ನ ಸ್ಥಿತಿ ಏರ್ಪಟ್ಟಿತ್ತು.

ಆ ನಂತರ ಜನರ ಆಕ್ರೋಶಕ್ಕೆ ಮಣಿದ ಜಿಲ್ಲಾಡಳಿತ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದೆ.

ಆನೆಯಾ ದಾಳಿಯಿಂದಾಗಿ ಮೃತಪಟ್ಟವರ ಶವವನ್ನು ಇರಿಸಿಕೊಂಡು ಸ್ಥಳೀಯರು ಅರಣ್ಯ ಇಲಾಖೆ ವಿರುದ್ದ ಆಕ್ರೋಶ ಹೊರಹಾಕಿದ್ದರು. ಸ್ಥಳಕ್ಕೆ ಸಚಿವರು, ಜಿಲ್ಲಾಧಿಕಾರಿಗಳು ಬೇಟಿ ನೀಡಿದ ಬಳಿಕವೇ ಶವ ಸಂಸ್ಕಾರಕ್ಕೆ ಅವಕಾಶ ನೀಡುವುದು ಎಂದು ಪಟ್ಟು ಹಿಡಿದಿದ್ದರು.

ಕೆಲ ದಿನಗಳ ಹಿಂದಷ್ಟೇ ಮರ್ದಾಳದ ಸಂತೋಷ್ ಎಂಬವರು ಯೂಟ್ಯೂಬ್‌ನಲ್ಲಿ ಆನೆ ಹಾವಳಿ ಬಗ್ಗೆ ವಿಡಿಯೋ ಹರಿ ಬಿಟ್ಟಿದ್ದರು. ಆನೆಗಳ ಸಮಸ್ಯೆ ಬಗ್ಗೆ ವರದಿ ಮಾಡಿದ ವಿಡಿಯೋ ಬಗ್ಗೆ ಐತ್ತೂರು ಪಿಡಿಓ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆ ವಿಡಿಯೋವನ್ನು ಡಿಲೀಟ್ ಮಾಡಲಾಗಿತ್ತು. ಈ ವಿಚಾರ ಸಂಬಂಧಿಸಿ ಸಾರ್ವಜನಿಕರು ಎಲ್ಲರೂ ಇಲಾಖಾ ಅಧಿಕಾರಿಗಳ ವಿರುದ್ಧ ತ್ರೀರ್ವ ಆಕ್ರೋಶ ವ್ಯಕ್ತಪಡಿಸಿ, ತರಾಟೆಗೆ ತೆಗೆದುಕೊಂಡರು.

ಸಾರ್ವಜನಿಕರ ಆಕ್ರೋಶಕ್ಕೆ ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ ರವಿ ಕುಮಾರ್, ಎಸಿ ಗಿರೀಶ್ ನಂದನ್ ಸೇರಿದಂತೆ ವಿವಿಧ ಅಧಿಕಾರಿಗಳು ಆಗಮಿಸಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಮೃತರ ಕುಟುಂಬಕ್ಕೆ ತಲಾ 15 ಲಕ್ಷ ಪರಿಹಾರ ಧನ ನೀಡಿದ್ದು, ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

See also  ಕೊಡಗಿನ ಅರಣ್ಯ ಪ್ರದೇಶದಲ್ಲಿ ಟ್ರಕ್ ಗಟ್ಟಲೇ ತ್ಯಾಜ್ಯ ಎಸೆಯುತ್ತಿರುವ ಕಿಡಿಗೇಡಿಗಳು..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget