ಕ್ರೈಂದೇಶ-ವಿದೇಶವೈರಲ್ ನ್ಯೂಸ್ಸಿನಿಮಾ

ಅರ್ಜುನನ ಸಮಾಧಿ ವಿಚಾರಕ್ಕೆ ದರ್ಶನ್ ಅಭಿಮಾನಿಗಳು ಮತ್ತು ಅರಣ್ಯಾಧಿಕಾರಿಗಳ ನಡುವೆ ತಿಕ್ಕಾಟ..! ದರ್ಶನ್ ಅಭಿಮಾನಿಗಳು ಮಾಡಿದ ಖರ್ಚು ವಾಪಾಸ್ ಕೊಡುವುದಾಗಿ ಅಧಿಕಾರಿಗಳು ಹೇಳಿದ್ದೇಕೆ..?

242

ನ್ಯೂಸ್‌ ನಾಟೌಟ್‌: ಸ್ಯಾಂಡಲ್‌ವುಡ್ ನಟ ದರ್ಶನ್ ಫ್ಯಾನ್ಸ್ ಮತ್ತು ಅರಣ್ಯಾಧಿಕಾರಿಗಳು ಇದೀಗ ಮೈಸೂರು ದಸರಾ ಅಂಬಾರಿ ಆನೆ ಅರ್ಜುನನ ಸಮಾಧಿ ವಿಚಾರದಲ್ಲಿ ತಿಕ್ಕಾಟ ನಡೆಸುತ್ತಿದ್ದಾರೆ. ಇತ್ತೀಚೆಗೆ ಅರ್ಜುನ ಆನೆ ಸಮಾಧಿ ನಿರ್ಮಾಣ ಮಾಡಲು ಸ್ವಂತ ಹಣ ಖರ್ಚು ಮಾಡಿ ಸ್ಲ್ಯಾಬ್ ಕಲ್ಲುಗಳನ್ನು ದರ್ಶನ್ ಕಳುಹಿಸಿ ಕೊಟ್ಟಿದ್ದರು. ಅರಣ್ಯಾಧಿಕಾರಿಗಳಿಂದ ಅನುಮತಿ ಕೊಟ್ಟ ಬಳಿಕವೇ ದರ್ಶನ್ (Actor Darshan) ಅಭಿಮಾನಿಗಳು ಕೆಲಸ ಪ್ರಾರಂಭಿಸಿದ್ದರು. ಆದರೆ ಅರ್ಜುನನ ಸ್ಮಾರಕ ನಿರ್ಮಿಸುವ ಕೆಲಸದ ವೇಳೆ, ಅರಣ್ಯಾಧಿಕಾರಿಗಳು ತಡೆದರು.

ಬಳಿಕ ತಾವೇ ಅರ್ಜುನನ ಸ್ಮಾರಕ ನಿರ್ಮಾಣ ಮಾಡೋದಾಗಿ ಹೇಳಿ ಅಲ್ಲಿಂದ ದರ್ಶನ್ ಅಭಿಮಾನಿಗಳನ್ನು ಕಳುಹಿಸಿದ್ದರು ಮತ್ತು ದರ್ಶನ್ ಅಭಿಮಾನಿಗಳು ವ್ಯಯಿಸಿದ್ದ ಹಣವನ್ನು ಹಿಂದಿರುಗಿಸೋದಾಗಿ ಕೂಡ ಹೇಳಿದ್ದರು ಎನ್ನಲಾಗಿದೆ. 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸಮಾಧಿ ವಿಚಾರದಲ್ಲಿ ವಿವಾದ ಉಂಟಾಗುತ್ತಿದೆ. ಈ ಬಗ್ಗೆ ದರ್ಶನ್ ಅಭಿಮಾನಿಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನಡುವಿನ ಈ ಗಲಾಟೆ ಮುಂದೆ ಯಾವ ಸ್ವರೂಪ ಪಡೆಯಲಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

Click 👇

https://newsnotout.com/2024/05/cinematic-theft-and-viral-video-issue
https://newsnotout.com/2024/05/neonotals-are-nomore-by-fire
https://newsnotout.com/2024/05/kannada-news-pakisthan-quran-issue
See also  ಮೊಬೈಲ್ ಟವರನ್ನೇ ಹೊತ್ತೊಯ್ದ ಕಳ್ಳರು..! ದೂರು ದಾಖಲಿಸಿದ ಕಂಪನಿ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget